ADVERTISEMENT

ಚಾಂಪಿಯನ್ಸ್‌ ಟ್ರೋಫಿ: ಪಾಕಿಸ್ತಾನಕ್ಕೆ 237ರನ್‌ ಗುರಿ ನೀಡಿದ ಶ್ರೀಲಂಕಾ

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 13:37 IST
Last Updated 12 ಜೂನ್ 2017, 13:37 IST
ಅರ್ಧಶತಕ ಗಳಿಸಿದ ಶ್ರೀಲಂಕಾ ತಂಡದ ನಿರೋಶಾನ್‌ ಡಿಕ್ವೆಲ್ಲಾ          –ಎಎಫ್‌ಪಿ ಚಿತ್ರ
ಅರ್ಧಶತಕ ಗಳಿಸಿದ ಶ್ರೀಲಂಕಾ ತಂಡದ ನಿರೋಶಾನ್‌ ಡಿಕ್ವೆಲ್ಲಾ –ಎಎಫ್‌ಪಿ ಚಿತ್ರ   

ಕಾರ್ಡಿಫ್‌: ಚಾಂಪಿಯನ್ಸ್‌ ಟ್ರೋಫಿ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡ 49.2 ಓವರ್‌ಗಳಲ್ಲಿ 236ರನ್‌ ಗಳಿಸಿ ಆಲೌಟ್‌ ಆಗಿದೆ.

ಶ್ರೀಲಂಕಾ ಪರ ಆರಂಭಿಕ ಆಟಗಾರ ನಿರೋಶಾನ್‌ ಡಿಕ್ವೆಲ್ಲಾ(73) ಹಾಗೂ ನಾಯಕ ಆಂಜೆಲೋ ಮ್ಯಾಥ್ಯೂಸ್‌(39) ಹೊರತುಪಡಿಸಿ ಉಳಿದ ಆಟಗಾರರಿಂದ ಉತ್ತಮ ಆಟ ಹೊರಹೊಮ್ಮಲಿಲ್ಲ.

ಬಿಗುವಿನ ಬೌಲಿಂಗ್‌ ದಾಳಿ ಸಂಘಟಿಸಿದ ಪಾಕಿಸ್ತಾನ ವೇಗಿಗಳಾದ ಜುನೈದ್‌ ಖಾನ್‌ 3 ಹಾಗೂ ಮೊಹಮ್ಮದ್‌ ಆಮೀರ್‌ 2 ವಿಕೆಟ್‌ ಉರುಳಿಸಿ ತಮ್ಮ ತಂಡ ಮೇಲುಗೈ ಸಾಧಿಸಲು ಸಹಕಾರಿಯಾದರು.

ADVERTISEMENT

ಮುಂದಿನ ಹಂತ ಪ್ರವೇಶಿಸಲು ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದ್ದು, ಗೆದ್ದ ತಂಡ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.