ADVERTISEMENT

ಚೆಸ್‌: ಶಶಾಂಕ ಭಟ್‌, ಮನೋಜ್‌ ಕುಲಕರ್ಣಿ ಮುನ್ನಡೆ

14 ಮತ್ತು 17 ವರ್ಷ ವಯೋಮಿತಿಯ ರಾಜ್ಯ ಮಟ್ಡದ ಚೆಸ್‌

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
14 ವರ್ಷ ವಯೋಮಿತಿ ಬಾಲಕಿಯರ ವಿಭಾಗದದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಸೃಜನಾ ಭಂಡಾರಿ (ಎಡಗಡೆಯಿಂದ ಮೊದಲನೆಯವರು) ಹಾಗೂ ಶಿವಮೊಗ್ಗದ ವನಿತಾ ಎಂ ದೇವಾಡಿಗ ನಡುವೆ ನಡೆಯುತ್ತಿರುವ ತೀವ್ರ ಹಣಾಹಣಿ.
14 ವರ್ಷ ವಯೋಮಿತಿ ಬಾಲಕಿಯರ ವಿಭಾಗದದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಸೃಜನಾ ಭಂಡಾರಿ (ಎಡಗಡೆಯಿಂದ ಮೊದಲನೆಯವರು) ಹಾಗೂ ಶಿವಮೊಗ್ಗದ ವನಿತಾ ಎಂ ದೇವಾಡಿಗ ನಡುವೆ ನಡೆಯುತ್ತಿರುವ ತೀವ್ರ ಹಣಾಹಣಿ.   

ಮಂಗಳೂರು: ದಕ್ಷಿಣ ಕನ್ನಡದ ಶಶಾಂಕ ಭಟ್‌ ಜಿ.ಎಸ್, ಬೆಳಗಾವಿ ಮನೋಜ್‌ ಕುಲಕರ್ಣಿ, ಶ್ರೇಯಸ್‌ ಎ ಕುಲಕರ್ಣಿ ಅವರು ಇಲ್ಲಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಜೂನಿಯರ್ ಚೆಸ್‌ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಟೂರ್ನಿಯ 6ನೇ ಸುತ್ತಿನಲ್ಲಿ ಈ ಆಟಗಾರರು 17 ವರ್ಷ ವಯೋಮಿತಿ ಬಾಲಕರ ವಿಭಾಗದಲ್ಲಿ 5 ಪಾಯಿಂಟ್‌ಗಳನ್ನು ದಾಖಲಿಸಿದರು.

ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂತ ಅಲೋಶಿಯಸ್‌ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ನಡಯುತ್ತಿರುವ ಟೂರ್ನಿಯಲ್ಲಿ ಇದೇ ವಿಭಾಗದಲ್ಲಿ ಚಿಕ್ಕೋಡಿಯ ಮಗದುಮ್ಮ ದರ್ಶನ, ದಕ್ಷಿಣ ಕನ್ನಡ ಜಿಲ್ಲೆಯ ಅರ್ಜುನ್‌ ರಾವ್‌, ಧಾರವಾಡದ ವರುಣ ವಿ. ನವಲಿ ಕ್ರಮವಾಗಿ 4.5 ಪಾಯಿಂಟ್ಸ್‌ ಗಳಿಸಿ ಮುನ್ನಡೆಯಲ್ಲಿದ್ದಾರೆ.

ADVERTISEMENT

ಬಾಲಕಿಯರ ವಿಭಾಗದಲ್ಲಿ ಧಾರವಾಡದ ತನಿಷಾ ಶೀತಲ್‌ ಗೋಟಾಡೆ, ಬೆಳಗಾವಿ ತೀರ್ಥಹಳ್ಳಿ ರೋಶನಿ ಐದು ಪಾಯಿಂಟ್‌ ಗಳಿಸಿ ಸಮಬಲದ ಹೋರಾಟ ನಡೆಸಿದ್ದಾರೆ. ಬೆಂಗಳೂರು ಉತ್ತರದ ಹರ್ಷಿಣಿ ಎ, ಕೊಡಗಿನ ಪ್ರೀಯಾಂಕ್‌ ನಾರಾಯಣ್‌, ಉಡುಪಿಯ ಅಶ್ವಿನಿ ಕೊಟೇಶ್ವರ, ಚಿಕ್ಕಮಗಳೂರಿನ ಶೀತಲ್‌ ಬಿ.ಜಿ, ದಕ್ಷಿಣ ಕನ್ನಡದ ಕ್ಷಮಾ ಆಚಾರ್ಯ 4.5 ಪಾಯಿಂಟ್‌ ಗಳಿಸುವ ಮೂಲಕ ಕೆಳಕ್ರಮಾಂಕದಲ್ಲಿ ಇದ್ದಾರೆ.

14 ವರ್ಷ ವಯೋಮಿತಿಯ ಬಾಲಕರು ದಕ್ಷಿಣ ಕನ್ನಡ ಕ್ಲಬ್‌ನ ಪಂಕಜ್‌ ಭಟ್‌, ಶಿವಚೇತನ್‌ ಹಳೇಮನಿ ಕಲಬುರ್ಗಿಯ ಅಭಿಷೇಕ ಕೊಲ್ಲೂರು 5.5 ಪಾಯಿಂಟ್‌ ಗಳಿಸಿ ಅಗ್ರ ಶ್ರೇಯಾಂಕದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬೆಂಗಳೂರಿನ ತರುಣ ಬಿ.ಎಸ್‌– 5 ಪಾಯಿಂಟ್‌, ಪುತ್ತೂರಿನ ಶ್ರೀಕೃಷ್ಣ ಪ್ರಣವ್‌ 4.5 ಪಾಯಿಂಟ್‌ ದಾಖಲಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡದ ಸೃಜನಾ ಭಂಡಾರಿ ಹಾಗೂ ಶಿವಮೊಗ್ಗದ ವಿನುತಾ ಎಂ. ದೇವಾಡಿಗ 5 ಪಾಯಿಂಟ್‌ ಗಳಿಸಿ ಸಮಬಲದ ಹಣಾಹಣಿ ನಡೆದಿದೆ. ಕೆಳ ಕ್ರಮಾಂಕದಲ್ಲಿ ಶಿವಮೊಗ್ಗದ ಖುಷಿ ಎಂ. ಹೊಂಬಳ, ದಕ್ಷಿಣ ಕನ್ನಡದ ಶುಭಶ್ರೀ ಕೆ, ದೀಪ್ತಿ, ಮಂಡ್ಯದ ಮೇಘನಾ ಎಸ್‌ (4.5 ಪಾಯಿಂಟ್‌) ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.