ADVERTISEMENT

ಜಿಮ್ನಾಸ್ಟ್‌ಗಳ ಆಯ್ಕೆ: ಹೈಕೋರ್ಟ್‌ ಸೂಚನೆ

ಪಿಟಿಐ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST

ನವದೆಹಲಿ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾದ ಜಿಮ್ನಾಸ್ಟಿಕ್ಸ್ ತಂಡದಿಂದ ಇಬ್ಬರನ್ನು ಹೊರಗಿಟ್ಟ ಭಾರತ ಜಿಮ್ನಾಸ್ಟಿಕ್ಸ್ ಫೆಡರೇಷನ್‌ನ ಕ್ರಮವನ್ನು ದೆಹಲಿ ಹೈಕೋರ್ಟ್‌ ಪ್ರಶ್ನಿಸಿದೆ. ಇವರಿಬ್ಬರನ್ನು ಆಸ್ಟ್ರೇಲಿಯಾಗೆ ಕಳುಹಿಸಲು ಬೇಕಾದ ಸಿದ್ಧತೆ ಮಾಡುವಂತೆಯೂ ಫೆಡರೇಷನ್‌ಗೆ ಸೂಚಿಸಿದೆ.

ಮಹಮ್ಮದ್ ಬಾಬಿ ಮತ್ತು ಗೌರವ್ ಕುಮಾರ್ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಶಕ್‌ಧರ್‌, ‘ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಸಾಧನೆ ಮಾಡಿದರೂ ಇವರಿಬ್ಬರನ್ನು ತಂಡದಿಂದ ಕೈಬಿಟ್ಟಿದ್ದು ಹೇಗೆ’ ಎಂದು ಪ್ರಶ್ನಿಸಿದರು.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಈಗಾಗಲೇ ಮೂವರು ಜಿಮ್ನಾಸ್ಟ್‌ಗಳನ್ನು ಭಾರತ ಕಳುಹಿಸಿದೆ. ಬಾಬಿ ಮತ್ತು ಕಮಾರ್‌ ಪರವಾಗಿ ವಾದಿಸಿದ ಅಭಿಷೇಕ್ ಶರ್ಮಾ ‘ಆಯ್ಕೆ ಪ್ರಕ್ರಿಯೆಯಲ್ಲಿ ಆರನೇ ಸ್ಥಾನ ಗಳಿಸಿದ ಯೋಗೇಶ್ವರ್ ಸಿಂಗ್‌ ಮತ್ತು 25ನೇ ಸ್ಥಾನ ಗಳಿಸಿದ್ದ ರಾಕೇಶ್ ಪಾತ್ರ ಅವರನ್ನು ಆರಿಸಲಾಗಿದೆ’ ಎಂದು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.