ADVERTISEMENT

ಜುಲೈನಲ್ಲಿ ಐಎಎಎಫ್‌ ಮುಖ್ಯಸ್ಥ ಸೆಬಾಸ್ಟಿಯನ್ ಕೊ ಭಾರತಕ್ಕೆ

ಪಿಟಿಐ
Published 14 ಏಪ್ರಿಲ್ 2017, 20:10 IST
Last Updated 14 ಏಪ್ರಿಲ್ 2017, 20:10 IST

ನವದೆಹಲಿ: ದೂರ ಅಂತರದ ಓಟಗಾರ ಹಾಗೂ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆ (ಐಎಎಎಫ್‌) ಮುಖ್ಯಸ್ಥ ಸೆಬಾಸ್ಟಿಯನ್ ಕೊ ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಜುಲೈ 6ರಿಂದ 9ರವರೆಗೆ 22ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ ಭುವನೇಶ್ವರದಲ್ಲಿ ನಡೆಯಲಿದೆ. ಈ ವೇಳೆಗೆ ಅವರು ಭಾರತಕ್ಕೆ ಬರಲಿದ್ದಾರೆ .

‘ಭಾರತ ಅಥ್ಲೆಟಿಕ್ಸ್ ಸಂಸ್ಥೆಯ ಆಹ್ವಾನವನ್ನು ಕೊ ಒಪ್ಪಿಕೊಂಡಿದ್ದಾರೆ’ ಎಂದು ಎಎಎಫ್‌ಐ ಮುಖ್ಯಸ್ಥ  ಆದಿಲ್‌ ಸಮರಿವಾಲ ಹೇಳಿದ್ದಾರೆ.
ಕೊ 1980ರ ಮಾಸ್ಕೊ ಒಲಿಂಪಿಕ್ಸ್ ಹಾಗೂ 1984ರ ಲಾಸ್ ಏಂಜಲೀಸ್‌ ಒಲಿಂಪಿಕ್ಸ್‌ನ 1500ಮೀಟರ್ ಓಟದ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.