ADVERTISEMENT

ಜೈನ್ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿ

ದಕ್ಷಿಣ ವಲಯ ಕ್ರಿಕೆಟ್: ಮಿಂಚಿದ ನಿಖಿತ್

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST

ಬೆಂಗಳೂರು: ಇಲ್ಲಿನ ಜೈನ್ ವಿಶ್ವ ವಿದ್ಯಾಲಯ ತಂಡ ಪಾಂಡಿಚೇರಿಯಲ್ಲಿ ಮುಕ್ತಾಯ ಗೊಂಡ  ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದೆ. ಇದರೊಂದಿಗೆ ತಂಡ ಸತತವಾಗಿ ಮೂರು ಬಾರಿ ಈ ಪ್ರಶಸ್ತಿಯನ್ನು ತನ್ನ ದಾಗಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ.

ಉತ್ತರಾಂಚಲದಲ್ಲಿ ಮುಂದಿನ ಜನವರಿಯಲ್ಲಿ ನಡೆ ಯಲಿರುವ ಅಖಿಲ ಭಾರತ ವಿಶ್ವ ವಿದ್ಯಾಲಯ ಕ್ರಿಕೆಟ್ ಚಾಂಪಿ ಯನ್‌ಷಿಪ್ ಹಾಗೂ ಟೊಯೊಟಾ ಪ್ರಾಯೋಜಿತ ಅಖಿಲ ಭಾರತ  ವಿಶ್ವವಿದ್ಯಾಲಯ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ (ಟಿಯುಸಿಸಿ) ಭಾಗವಹಿಸಲು ಅರ್ಹತೆ ಗಿಟ್ಟಿಸಿದೆ.

ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈನ ಎಸ್‌ಆರ್‌ಎಮ್  ವಿಶ್ವವಿದ್ಯಾಲಯ ತಂಡ ನಿಗದಿತ 50 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 159 ರನ್‌ ಪೇರಿಸಲಷ್ಟೇ ಶಕ್ತವಾಯಿತು. ಸುಲಭ ಗುರಿಯನ್ನು ಬೆನ್ನಟ್ಟಿದ ಜೈನ್ ತಂಡ 49.1 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 163 ರನ್ ಗಳಿಸಿ ಸಂಭ್ರಮಿಸಿತು.

ತಂಡದ ಪರ ಎಸ್‌.ನಿಖಿತ್ (28 ಕ್ಕೆ 5) ಹಾಗೂ ಜೆ.ಸುಚಿತ್ (33ಕ್ಕೆ 3) ಮಾರಕ ಬೌಲಿಂಗ್ ಪ್ರದರ್ಶಿಸಿದರೆ, ಎಸ್.ಸೂರಜ್ (40) ಮತ್ತು ಕೆ.ರೋಹನ್ (37) ಬ್ಯಾಟಿಂಗ್‌ನಲ್ಲಿ  ಮಿಂಚಿದರು. ಪ್ರಸಕ್ತ ಜೈನ್‌ ವಿದ್ಯಾ ಸಂಸ್ಥೆಯಲ್ಲಿಯೇ ವಿದ್ಯಾರ್ಥಿಗಳಾಗಿರುವ  ಶ್ರೇಯಸ್‌ ಗೋಪಾಲ್‌ ಮತ್ತು ಆರ್‌.ಸಮರ್ಥ್‌ ಅವರು ಮುಂಬೈ ಎದುರಿನ ರಣಜಿ ಪಂದ್ಯದಲ್ಲಿ ಆಡುತ್ತಿದ್ದಾರೆ. ಇವರಿಬ್ಬರ ಅನುಪಸ್ಥಿತಿಯಲ್ಲಿಯೂ ವಿಜಯೇ ತಂಡ ಗಮನಾರ್ಹ ಸಾಮರ್ಥ್ಯ ತೋರಿತು.

ಸಂಕ್ಷಿಪ್ತ ಸ್ಕೋರ್: ಎಸ್‌ಆರ್‌ಎಮ್‌ ವಿಶ್ವವಿದ್ಯಾಲಯ, 50 ಓವರ್‌ಗಳಲ್ಲಿ 159 (ಎಸ್‌.ನಿಖಿತ್ 28ಕ್ಕೆ 5, ಸುಚಿತ್ 33ಕ್ಕೆ 3); ಜೈನ್ ವಿಶ್ವವಿದ್ಯಾಲಯ 49.1 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 163 (ಎಸ್‌.ಸೂರಜ್ 40, ಕೆ.ರೋಹನ್ 37, ಗೌರವ್ 22, ಬಿ.ದಿನೇಶ್ ಅಜೇಯ 30)
ಫಲಿತಾಂಶ: ಜೈನ್ ವಿಶ್ವವಿದ್ಯಾಲಯ ತಂಡಕ್ಕೆ 3 ವಿಕೆಟ್‌ಗಳ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.