ADVERTISEMENT

ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ: ಮೊದಲ ಜಯದ ನಿರೀಕ್ಷೆಯಲ್ಲಿ ಶ್ರೀಲಂಕಾ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 9:44 IST
Last Updated 5 ಜುಲೈ 2017, 9:44 IST
ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ: ಮೊದಲ ಜಯದ ನಿರೀಕ್ಷೆಯಲ್ಲಿ ಶ್ರೀಲಂಕಾ
ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ: ಮೊದಲ ಜಯದ ನಿರೀಕ್ಷೆಯಲ್ಲಿ ಶ್ರೀಲಂಕಾ   

ಡರ್ಬಿ: ಮಹಿಳಾ ವಿಶ್ವಕಪ್‌ ಪಂದ್ಯಾವಳಿಯ ಭಾರತ– ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಮಿಥಾಲಿ ರಾಜ್‌ ಪಡೆ ಬ್ಯಾಟಿಂಗ್‌ ಆಯ್ದುಕೊಂಡಿದೆ.

ಲೀಗ್‌ನಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿರುವ ಭಾರತ ಮಹಿಳೆಯರ ತಂಡ ಈ ಪಂದ್ಯದಲ್ಲಿ ಗೆದ್ದು ಸುಲಭವಾಗಿ ಸೆಮಿಫೈನಲ್‌ ಪ್ರವೇಶಿಸುವ ಗುರಿ ಹೊಂದಿದೆ.

(ಭಾರತ ತಂಡದ ನಾಯಕಿ ಮಿಥಾಲಿ ರಾಜ್‌)

ADVERTISEMENT

ಆದರೆ, ಶ್ರೀಲಂಕಾ ಸ್ಥಿತಿ ಇದಕ್ಕೆ ವಿರುದ್ಧವಾಗಿದ್ದು, ಲೀಗ್‌ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಸೋತಿದ್ದು, ಇಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿದೆ.

ಈ ತಂಡ ಲೀಗ್‌ನಲ್ಲಿ ಆಡಿದ ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯಾ, ಹಾಗೂ ಇಂಗ್ಲೆಂಡ್‌ ವಿರುದ್ಧದ ಪಂದ್ಯಗಳಲ್ಲಿ ಕ್ರಮವಾಗಿ 9, 8 ಮತ್ತು 7 ವಿಕೆಟ್‌ಗಳ ಅಂತರ ಸೋಲು ಕಂಡಿದೆ.

ಸದ್ಯ ಭಾರತ ಪರ ಪೂನಮ್‌ ರಾವುತ್‌ ಹಾಗೂ ಸ್ಮೃತಿ ಮಂದಾನ ಇನಿಂಗ್ಸ್‌ ಆರಂಭಿಸಿದ್ದಾರೆ.

**

ತಂಡಗಳು:

ಭಾರತ: ಮಿಥಾಲಿ ರಾಜ್‌ (ನಾಯಕಿ), ಏಕ್ತಾ ಬಿಶ್ಠ್‌, ರಾಜೇಶ್ವರಿ ಗಾಯಕವಾಡ್‌, ಜೂಲನ್ ಗೋಸ್ವಾಮಿ, ಮಾನಸಿ ಜೋಶಿ, ಹರ್ಮನ್‌ ಪ್ರೀತ್ ಕೌರ್‌, ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನ, ಮೋನಾ ಮೇಶ್ರಮ್‌, ನುಜ್ಜತ್ ಪರ್ವೀನ್‌, ಶಿಖಾ ಪಾಂಡೆ, ಪೂನಮ್‌ ರಾವುತ್‌, ದೀಪ್ತಿ ಶರ್ಮಾ, ಸುಶ್ಮಾ ವರ್ಮಾ, ಪೂನಮ್‌ ಯಾದವ್‌.

ಶ್ರೀಲಂಕಾ: ಇನೋಕ ರಣವೀರ (ನಾಯಕಿ), ಚಾಮರಿ ಅಟ್ಟಪಟ್ಟು, ಚಾಂದಿಮಾ ಗುಣರತ್ನೆ, ನಿಪುಣಿ ಹನ್ಸಿಕಾ, ಅಮಾ ಕಾಂಚನ, ಏಶಾನಿ ಲೋಕುಸೂರಿಯಾ, ಹರ್ಷಿತಾ ಮಾಧವಿ, ದಿಲಾನಿ ಮನೋದರ, ಹಸಿನಿ ಪೆರೇರ, ಚಾಮರಿ ಪೋಲ್ಗಂಪಾಲ, ಉದೇಶಿಕ ಪ್ರಬೋದನಿ, ಓಶಾಧಿ ರಣಸಿಂಘೆ, ಶಶಿಕಲಾ ಸಿರಿವರ್ಧನ, ಪ್ರಸಾದನಿ ವೀರಕೋಡಿ, ಶ್ರೀಪಾಲಿ ವೀರಕೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.