ADVERTISEMENT

ಟೇಕ್ವಾಂಡೊ: ಸುಜಯ್‌ ಚಿನ್ನದ ಸಾಧನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:05 IST
Last Updated 3 ಅಕ್ಟೋಬರ್ 2017, 19:05 IST

ಧಾರವಾಡ: ಚುರುಕಿನ ಆಟದ ಮೂಲಕ ಗಮನ ಸೆಳೆದ ಕರ್ನಾಟಕದ ಸ್ಪರ್ಧಿಗಳು ಇಲ್ಲಿ ನಡೆಯುತ್ತಿರುವ ಜವಾಹರ ನವೋದಯ ವಿದ್ಯಾಲಯದ ರಾಷ್ಟ್ರೀಯ ಟೇಕ್ವಾಂಡೊ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಬಾಲಕರ 14 ವರ್ಷದ ಒಳಗಿನವರ 23ರಿಂದ 25 ಕೆ.ಜಿ. ತೂಕದ ಸ್ಪರ್ಧೆಯಲ್ಲಿ ಧಾರವಾಡದ ಸುಜಯ್ ಐದು ಪಾಯಿಂಟ್ಸ್‌ ಗಳಿಸಿ ಚಿನ್ನದ ಸಾಧನೆ ಮಾಡಿದರು.

ಜೈಪುರದ ಅಜಯ್‌ ಕಂಚು ಜಯಿಸಿದರೆ, ಬೆಳ್ಳಿ ಪದಕ ಪಟ್ನಾದ ಲಖಾನ್‌ ಪಾಲಾಯಿತು.

ADVERTISEMENT

ಈ ಟೂರ್ನಿಯಲ್ಲಿ ಕರ್ನಾಟಕದ ಸ್ಪರ್ಧಿಗಳು ಹೈದರಾಬಾದ್ ವಲಯವನ್ನು ಪ್ರತಿನಿಧಿಸುತ್ತಿದ್ದಾರೆ.

25ರಿಂದ 27 ಕೆ.ಜಿ. ತೂಕದವರ ಸ್ಪರ್ಧೆಯಲ್ಲಿ ಧಾರವಾಡದ ನಿಶಾಂತ ಮೂರು ಪಾಯಿಂಟ್ಸ್‌ ಕಲೆ ಹಾಕಿ ಬೆಳ್ಳಿ ಪಡೆದರು.

29ರಿಂದ 32 ಕೆ.ಜಿ. ತೂಕದವರ ಸ್ಪರ್ಧೆಯಲ್ಲಿ ನಗರದ ಚೇತನ್‌ ಐದು ಪಾಯಿಂಟ್ಸ್‌ ಗಳಿಸಿ ಚಿನ್ನ ಜಯಿಸಿದರು. ಮೂರು ವರ್ಷಗಳ ಬಳಿಕ ಧಾರವಾಡದಲ್ಲಿ ಈ ಟೂರ್ನಿ ನಡೆಯುತ್ತಿದೆ.

ಒಟ್ಟು ಎಂಟು ವಲ ಯಗಳ ಟೇಕ್ವಾಂಡೊ ಪಟುಗಳು ಭಾಗ ವಹಿ ಸಿದ್ದಾರೆ.

ಇಲ್ಲಿ ಚಿನ್ನದ ಪದಕ ಗೆಲ್ಲುವ ಸ್ಪರ್ಧಿಗಳು ಇದೇ ವರ್ಷದ ನವೆಂಬರ್‌ನಲ್ಲಿ ದೆಹಲಿಯಲ್ಲಿ ಜರುಗಲಿರುವ ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.