ADVERTISEMENT

ಡೆಕ್ಕನ್ ಚಾರ್ಜರ್ಸ್‌ಗೆ ಮತ್ತೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

ಮುಂಬೈ (ಪಿಟಿಐ): ಡೆಕ್ಕನ್ ಚಾರ್ಜರ್ಸ್ ತಂಡವನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹೊರಹಾಕಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕ್ರಮಕ್ಕೆ ಬಾಂಬೆ ಹೈಕೋರ್ಟ್‌ನಲ್ಲಿ ಮತ್ತೆ ಸಮರ್ಥನೆ ಲಭಿಸಿದೆ.

ಬಿಸಿಸಿಐ ಕೆಲ ದಿನಗಳ ಹಿಂದೆ ಚಾರ್ಜರ್ಸ್ ಜೊತೆಗಿನ ಒಪ್ಪಂದ ರದ್ದುಗೊಳಿಸಿತ್ತು. ಆದರೆ ಡೆಕ್ಕನ್ ಕ್ರಾನಿಕಲ್ಸ್ ಹೋಲ್ಡಿಂಗ್ ಲಿಮಿಟೆಡ್ (ಡಿಸಿಎಚ್‌ಎಲ್) ಮತ್ತು ಬಿಸಿಸಿಐ ನಡುವಿನ ವಿವಾದ ಬಗೆಹರಿಸಲು ಹೈಕೋರ್ಟ್ ನೇಮಿಸಿದ್ದ ಮಧ್ಯಸ್ಥಿಕೆದಾರರು `ಯಥಾಸ್ಥಿತಿ~ ಕಾಪಾಡಬೇಕೆಂದು ಮಂಡಳಿಗೆ ಸೂಚಿಸಿತ್ತು.

ಇದನ್ನು ಪ್ರಶ್ನಿಸಿ ಬಿಸಿಸಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಗುರುವಾರ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಆರ್.ಡಿ. ಧನುಕಾ ಮಧ್ಯಸ್ಥಿಕೆದಾರರ ಆದೇಶವನ್ನು ಅನೂರ್ಜಿತಗೊಳಿಸಿದರು.

ಒಪ್ಪಂದ ರದ್ದುಗೊಳಿಸಿದ ಬಿಸಿಸಿಐ ಕ್ರಮವನ್ನು ಪ್ರಶ್ನಿಸಿ ಡಿಸಿಎಚ್‌ಎಲ್ ಸಲ್ಲಿಸಿದ್ದ ಮತ್ತೊಂದು ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್, ತಾತ್ಕಾಲಿಕವಾಗಿ ಯಾವುದೇ ತೀರ್ಪು ನೀಡಲು ನಿರಾಕರಿಸಿದೆ. ಆದರೆ ರದ್ದುಗೊಳಿಸಿದ ಕ್ರಮದ ನ್ಯಾಯಬದ್ಧತೆಯನ್ನು ಮಧ್ಯಸ್ಥಿಕೆದಾರರು ನಿರ್ಧರಿಸಲಿದ್ದಾರೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.