ADVERTISEMENT

ದವಿಂದರ್ ಸಿಂಗ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 21:28 IST
Last Updated 28 ಫೆಬ್ರುವರಿ 2018, 21:28 IST
ದವಿಂದರ್ ಸಿಂಗ್‌
ದವಿಂದರ್ ಸಿಂಗ್‌   

ನವದೆಹಲಿ: ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾದ ಕಾರಣ ಭಾರತದ ಜಾವೆಲಿನ್ ಥ್ರೋ ಅಥ್ಲೀಟ್‌ ದವಿಂದರ್ ಸಿಂಗ್ ಕಾಂಗ್ ಅವರನ್ನು ವಿಶ್ವ ಅಥ್ಲೆಟಿಕ್ ಆಡಳಿತ ಸಮಿತಿ ವಜಾ ಮಾಡಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಪಟಿಯಾಲದಲ್ಲಿ ಅವರ ರಕ್ತದ ಮಾದರಿಯನ್ನು ಅಥ್ಲೆಟಿಕ್ಸ್‌ ಇಂಟಗ್ರಿಟಿ ಯೂನಿಟ್‌ನವರು ಸಂಗ್ರಹಿಸಿದ್ದರು.

ಇದರಲ್ಲಿ ಅನಬಾಲಿಕ್‌ ಸ್ಟಿರಾಯ್ಡ್ ಅಂಶ ಪತ್ತೆಯಾಗಿತ್ತು. ತಾತ್ಕಾಲಿಕವಾಗಿ ಅಮಾನತು ಆಗಿರುವ ಅವರು ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ. ಹೀಗೆ ಆದರೆ ಅವರ ಕ್ರೀಡಾ ಜೀವನವೇ ಮುಕ್ತಾಯಗೊಳ್ಳುವುದು ಖಚಿತವಾಗಲಿದೆ.

ಅವರು ತಪ್ಪು ಎಸಗಿದ್ದು ಸಾಬೀತಾಗಿರುವ ಕುರಿತು ಅಂತರರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ನವರು ಭಾರತ ಅಥ್ಲೆಟಿಕ್ ಫೆಡರೇಷನ್‌ಗೆ ಮಂಗಳವಾರವೇ ಮಾಹಿತಿ ನೀಡಿದ್ದರು. ಹೀಗಾಗಿ ಪಟಿಯಾಲದಲ್ಲಿ ನಡೆಯುತ್ತಿರುವ ಇಂಡಿಯನ್‌ ಗ್ರ್ಯಾನ್‌ ಪ್ರಿಕ್ಸ್ ಅಥ್ಲೆಟಿಕ್ಸ್‌ನ ಕ್ರೀಡಾಪಟುಗಳ ಪಟ್ಟಿಯಿಂದ ಅವರ ಹೆಸರನ್ನು ತೆಗೆದು ಹಾಕಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.