ADVERTISEMENT

ದೇಶದ ಕ್ರೀಡಾ ವ್ಯವಸ್ಥೆಯ ಬಗ್ಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ನವದೆಹಲಿ/ಮುಂಬೈ (ಪಿಟಿಐ): ಭಾರತದ ಕ್ರೀಡಾ ಆಡಳಿತ ವ್ಯವಸ್ಥೆಯ ಬಗ್ಗೆ ಮಾಜಿ ಅಥ್ಲೀಟ್ ಅಶ್ವಿನಿ ನಾಚಪ್ಪ ಆಕ್ರೋಷ ವ್ಯಕ್ತ ಪಡಿಸಿದ್ದಾರೆ.

ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ)ಯ ಹಂಗಾಮಿ ಮುಖ್ಯಸ್ಥ ವಿ.ಕೆ ಮಲ್ಹೋತ್ರಾ, ಸಂಸ್ಥೆಯ್ಲ್ಲಲಿ ಭ್ರಷ್ಟರನ್ನು ರಕ್ಷಿಸುತ್ತಿದ್ದಾರೆ ಎಂದು ಅವರು ಆರೋಪಿಸಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಗೆ ಅವರು ಪತ್ರ ಬರೆದಿದ್ದಾರೆ. ಇದೇ ವೇಳೆ, ಅಧಿಕಾರಾವಧಿ ಮುಗಿದರೂ ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆಯಲ್ಲಿ ಮುಂದುವರಿದಿರುವ ಅಧ್ಯಕ್ಷ ಜಿ. ಪರಮೇಶ್ವರ್ ಮತ್ತು ಕಾರ್ಯದರ್ಶಿ ಸತ್ಯನಾರಾಯಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಲ್ಹೋತ್ರಾ ವಿರುದ್ಧ ಆರೋಪ: `ಕ್ಲೀನ್ ಸ್ಪೋರ್ಟ್ಸ್ ಇಂಡಿಯಾ (ಸಿಎಸ್‌ಐ) ಚಳವಳಿ'ಯ ಅಧ್ಯಕ್ಷೆಯೂ ಆಗಿರುವ ಅಶ್ವಿನಿ ನಾಚಪ್ಪ ಮತ್ತು ಸಂಘಟನೆಯ ಸಂಚಾಲಕ ಬಿ.ವಿ.ಪಿ ರಾವ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)ಗೆ ಪತ್ರ ಬರೆದಿದ್ದಾರೆ. ಇದರಲ್ಲಿ, ವಿ.ಕೆ ಮಲ್ಹೋತ್ರಾ ಎರಡು ದಿನಗಳ ಹಿಂದೆ ಐಒಸಿ ಮುಖ್ಯಸ್ಥ ಜಾಕ್ ರಾಗ್‌ಗೆ ಪತ್ರ ಬರೆದಿರುವ ಉದ್ದೇಶವನ್ನೇ ಪ್ರಶ್ನಿಸಿದ್ದಾರೆ.

ಪರಮೇಶ್ವರ್ ಅವರಿಗೆ ಬರೆದಿರುವ ಪತ್ರದಲ್ಲಿ, `22 ಅಕ್ಟೋಬರ್ 2012ರಂದೇ ನಿಮ್ಮ ಅಧಿಕಾರಾವಧಿ ಮುಗಿದಿದೆ. ಆದ್ದರಿಂದ ನೀವು ಮತ್ತು ಕಾರ್ಯದರ್ಶಿ,    ಎಎಫ್‌ಐನ ಮತದಾರರ ಪಟ್ಟಿಯಲ್ಲಿ ಗುರುತಿಸಿಕೊಳ್ಳುವುದು ಕಾನೂನು ಬಾಹಿರವಾಗುತ್ತದೆ' ಎಂದೂ ಅಶ್ವಿನಿ    ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.