ADVERTISEMENT

ದೋನಿ ದ್ವಿಶತಕ: ಭಾರತಕ್ಕೆ 135ರನ್‌ಗಳ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2013, 12:27 IST
Last Updated 24 ಫೆಬ್ರುವರಿ 2013, 12:27 IST
ದೋನಿ ದ್ವಿಶತಕ: ಭಾರತಕ್ಕೆ 135ರನ್‌ಗಳ ಮುನ್ನಡೆ
ದೋನಿ ದ್ವಿಶತಕ: ಭಾರತಕ್ಕೆ 135ರನ್‌ಗಳ ಮುನ್ನಡೆ   

ಚೆನ್ನೈ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ದೋನಿ ಅಜೇಯ ದ್ವಿಶತಕ ಸಿಡಿಸಿದ್ದಾರೆ.

ಮೂರನೆ ದಿನದಾಟದ ಅಂತ್ಯಕ್ಕೆ ಭಾರತ 8 ವಿಕೆಟ್ ನಷ್ಟಕ್ಕೆ 516 ರನ್‌ಗಳಿಸಿದೆ. ಇದರೊಂದಿಗೆ ಭಾರತ 135 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

ಮೂರನೇ ದಿನದಾಟದ ಆರಂಭದಲ್ಲೇ ಸಚಿನ್ ಔಟಾದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜೊತೆ ಸೇರಿದ ನಾಯಕ ದೋನಿ ಉತ್ತಮ ಜತೆಯಾಟವಾಡಿದರು. ಕೊಹ್ಲಿ ಕೂಡ ಶತಕ ಸಿಡಿಸುವ ಮೂಲಕ ಗಮನ ಸೆಳೆದರು. ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿದ ಕೊಹ್ಲಿ ಮತ್ತು ದೋನಿ ತಂಡದ ಮೊತ್ತ 500 ರನ್‌ಗಳ ಗಡಿ ದಾಟಲು ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.