ADVERTISEMENT

ನಿಷೇಧ: ರಬಾಡ ಅರ್ಜಿ ವಿಚಾರಣೆ ಸೋಮವಾರ

ಪಿಟಿಐ
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST
ನಿಷೇಧ: ರಬಾಡ ಅರ್ಜಿ ವಿಚಾರಣೆ ಸೋಮವಾರ
ನಿಷೇಧ: ರಬಾಡ ಅರ್ಜಿ ವಿಚಾರಣೆ ಸೋಮವಾರ   

ಕೇಪ್‌ಟೌನ್‌ (ಎಎಫ್‌ಪಿ): ಎರಡು ಪಂದ್ಯಗಳ ನಿಷೇಧಕ್ಕೆ ಸಂಬಂಧಿಸಿ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಮುಂದಿನ ಸೋಮವಾರ ನಡೆಯಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಶುಕ್ರವಾರ ಈ ವಿಷಯವನ್ನು ತಿಳಿಸಿದೆ.

ರಬಾಡ ನಿಷೇಧಕ್ಕೆ ಸಂಬಂಧಿಸಿ ವಿಚಾರಣಾ ಅಧಿಕಾರಿಯಾಗಿ ನ್ಯೂಜಿಲೆಂಡ್‌ನ ಹಿರಿಯ ವಕೀಲ ಮೈಕೆಲ್ ಹೆರಾನ್ ಅವರನ್ನು ನೇಮಕ ಮಾಡಲಾಗಿದ್ದು ಅವರು ಟೆಲಿ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸುವರು ಎಂದು ತಿಳಿಸಲಾಗಿದೆ.

ಪೋರ್ಟ್ ಎಲಿಜ ಬೆತ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದ ಸಂದರ್ಭದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದರಿಂದ ರಬಾಡ ಅವರಿಗೆ ನಿಷೇಧ ಹೇರಲಾಗಿತ್ತು. ಮುಂದಿನ ಗುರುವಾರ ಆರಂಭವಾಗಲಿರುವ ಮೂರನೇ ಟೆಸ್ಟ್‌ಗೂ ಮುನ್ನ ಮೈಕೆಲ್ ಸೂಕ್ತ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.