ADVERTISEMENT

ಪ್ಲೇ ಆಫ್ ಪಂದ್ಯಗಳು ಕೋಲ್ಕತ್ತಗೆ ಸ್ಥಳಾಂತರ

ಪಿಟಿಐ
Published 4 ಮೇ 2018, 19:30 IST
Last Updated 4 ಮೇ 2018, 19:30 IST
ಪ್ಲೇ ಆಫ್ ಪಂದ್ಯಗಳು ಕೋಲ್ಕತ್ತಗೆ ಸ್ಥಳಾಂತರ
ಪ್ಲೇ ಆಫ್ ಪಂದ್ಯಗಳು ಕೋಲ್ಕತ್ತಗೆ ಸ್ಥಳಾಂತರ   

ಕೋಲ್ಕತ್ತ: ಐಪಿಎಲ್‌ನ ಎರಡು ಪ್ಲೇ ಆಫ್ ಪಂದ್ಯಗಳ ಸ್ಥಳವನ್ನು ಬದಲಿಸಿದ್ದು ಪುಣೆಯಿಂದ ಕೋಲ್ಕತ್ತಗೆ ಸ್ಥಳಾಂತರಿಸಲಾಗಿದೆ ಎಂದು ಟೂರ್ನಿಯ ಆಡಳಿತ ಸಮಿತಿ ಅಧ್ಯಕ್ಷ ರಾಜೀವ್ ಶುಕ್ಲಾ ಶುಕ್ರವಾರ ತಿಳಿಸಿದೆ.

ಮೇ 23ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯ ಮತ್ತು 25ರಂದು ನಡೆಯಲಿರುವ ಎರಡನೇ ಕ್ವಾಲಿಫೈಯರ್‌ ಪಂದ್ಯಗಳನ್ನು ಕೋಲ್ಕತ್ತದಲ್ಲಿ ನಡೆಯಲಿವೆ.

ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ಐಪಿಎಲ್‌ಗೆ ಬಹಿಷ್ಕಾರ ಹಾಕಿದ ಕಾರಣ ಚೆನ್ನೈ ಸೂಪರ್ ಕಿಂಗ್ಸ್‌ನ ತವರಿನ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲಾಗಿತ್ತು.

ADVERTISEMENT

‘ಪ್ಲೇ ಆಫ್ ಪಂದ್ಯಗಳಿಗೆ ಆತಿಥ್ಯ ವಹಿಸಲು ಅವಕಾಶ ಲಭಿಸಿರುವುದು ಖುಷಿ ನೀಡಿದೆ’ ಎಂದು ಬೆಂಗಾಲ್‌ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಅವಿಷೇಕ್‌ ದಾಲ್ಮಿಯಾ ತಿಳಿಸಿದ್ದಾರೆ. ಟೂರ್ನಿಯ ಒಂದನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.