ADVERTISEMENT

ಫರ್ದೀನ್‌ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:30 IST
Last Updated 6 ಮೇ 2018, 19:30 IST

ಬೆಂಗಳೂರು: ಎಐಟಿಎ 18 ವರ್ಷದೊಳಗಿನವರ ರೋಲಂಡ್‌ ಗ್ಯಾರೋಸ್‌ ರಾಷ್ಟ್ರೀಯ ಟೆನಿಸ್‌ ಸರಣಿಯ ಬಾಲಕ ಮತ್ತು ಬಾಲಕಿರ ಸಿಂಗಲ್ಸ್‌ ವಿಭಾಗದಲ್ಲಿ ಜೈಪುರದ ಫರ್ದೀನ್‌ ಕಮರ್‌ ಹಾಗೂ ಅವರ ಸಹೋದರಿ ಫರ್ಹಾತ್‌ ಕಮರ್‌ ಅವರು ಪ್ರಶಸ್ತಿ ಜಯಿಸಿದ್ದಾರೆ.

ಬಾಲಕರ ವಿಭಾಗದ ಫೈನಲ್‌ ಪಂದ್ಯದಲ್ಲಿ ಫರ್ದೀನ್‌ ಅವರು ದಹಲಿಯ ಆಯುಷ್‌ ದೇಶ್‌ವಾಲ್‌ ಅವರನ್ನು 6–1, 6–0 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಫರ್ಹಾತ್‌ ಅವರು ಶರಣ್ಯಾ ಗಾವರೆ ಅವರನ್ನು ಸೋಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.