ADVERTISEMENT

ಫೈನಲ್‌ಗೆ ಶಿವ, ವಿಕಾಸ್‌ಗೆ ಕಂಚು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಶಿವ ಥಾಪಾ ಅವರು ಜೆಕ್ ಗಣರಾಜ್ಯದ ಉಸ್ತಿ ನಾದ್ ಲಬೆಮ್‌ನಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಪ್ರಿ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಪುರುಷರ 56 ಕೆ.ಜಿ. ವಿಭಾಗದಲ್ಲಿ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.
ಭಾರತದ ಇನ್ನೊಬ್ಬ ಬಾಕ್ಸರ್ ವಿಕಾಸ್ ಕೃಷ್ಣನ್ ಅವರು 69 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ನಿರಾಸೆ ಹೊಂದಿ ಕಂಚಿನ ಪದಕಕ್ಕೆ ಸಮಾಧಾನಪಟ್ಟರು.

ಮುಂದಿನ ತಿಂಗಳು ಕಜಕಿಸ್ತಾನದಲ್ಲಿ ನಡೆಯಲಿರುವ ಒಲಿಂಪಿಕ್ ಅರ್ಹತಾ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿರುವ ಶಿವ ಅವರು ಶನಿವಾರ ನಡೆದ ಸೆಮಿಫೈನಲ್ ಕಾದಾಟದಲ್ಲಿ 9-5ರಲ್ಲಿ ಆತಿಥೇಯ ಜೆಕ್ ಗಣರಾಜ್ಯದ ಪ್ಯಾಟ್ರಿಕ್ ವೆಲ್ಕಿ ವಿರುದ್ಧ ವಿಜಯ ಸಾಧಿಸಿ, ಅಂತಿಮ ಹಣಾಹಣಿಗೆ ಸಜ್ಜಾದರು.

ಶಿವಗೆ ಒಲಿದ ಫೈನಲ್ ಅದೃಷ್ಟ ವಿಕಾಸ್ ಅವರಿಗೂ ಒಲಿಯಲಿಲ್ಲ. ಅವರು 9-14ರಲ್ಲಿ ಕ್ಯೂಬಾದ ಡೆಪೈಗ್ನೊ ಅರಿಸ್ನೊಯಿಡ್ ಎದುರು ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.