ಮೀರ್‌ಪುರ (ಪಿಟಿಐ): ಆಫ್ಘಾನಿಸ್ತಾನ ಎದುರು 129 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಶ್ರೀಲಂಕಾ ತಂಡ ದವರು ಇಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ.
ಷೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಂಹಳೀಯ ಪಡೆ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತು. ಸವಾಲಿನ ಗುರಿ ಎದುರು ಆಫ್ಘಾನಿಸ್ತಾನ 38.4 ಓವರ್‌ಗಳಲ್ಲಿ 124 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.
ಸಂಗಕ್ಕಾರ ಆಸರೆ: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ಲಾಹಿರು ತಿರಿಮಾನೆ ಅವರ ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ ಕುಮಾರ ಸಂಗಕ್ಕಾರ ಅವರ ಎಚ್ಚರಿಕೆ ಆಟ ತಂಡಕ್ಕೆ ಆಸರೆಯಾಯಿತು. 102 ಎಸೆತ ಎದುರಿಸಿದ ಸಂಗಾ ಒಂದು ಸಿಕ್ಸರ್ ಹಾಗೂ ಆರು ಬೌಂಡರಿ ಸಮೇತ 76 ರನ್ ಗಳಿಸಿದರು. ನಾಯಕ ಏಂಜೆಲೊ ಮ್ಯಾಥ್ಯೂಸ್ ಬಿರುಸಿನ ಆಟದ ಮೂಲಕ ತಂಡದ ಮೊತ್ತವನ್ನು 250 ರನ್‌ಗಳ ಗಡಿ ಮುಟ್ಟಿಸಿದರು. ಅವರು 41 ಎಸೆತಗಳಲ್ಲಿ ಅಜೇಯ 45 ರನ್ ಗಳಿಸಿದರು.
ಆಫ್ಘಾನಿಸ್ತಾನ ಬೌಲರ್‌ಗಳು ಬಲಿಷ್ಠ ಲಂಕಾವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಶಾಪೂರ್ ಜದ್ರಾನ್ ಹಾಗೂ ಮಿರ್ವಾಯಿಸ್ ಅಶ್ರಫ್ ಎದುರಾಳಿ ಮೇಲೆ ಒತ್ತಡ ಹೇರಿದರು.
ಪ್ರಭಾವಿ ಬೌಲಿಂಗ್: ಬಾಂಗ್ಲಾದೇಶ ಎದುರು ಗೆಲುವು ಸಾಧಿಸಿದ್ದ ಖುಷಿಯಲ್ಲಿದ್ದ ಆಪ್ಘಾನಿಸ್ತಾನ ಈ ಬಾರಿ ಗುರಿ ಮುಟ್ಟುವಲ್ಲಿ ಎಡವಿತು. ಲಂಕಾದ ಪ್ರಭಾವಿ ಬೌಲಿಂಗ್ ದಾಳಿಗೆ ಸಿಲುಕಿದ ಈ ತಂಡ ಕ್ರಮೇಣ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ನಾಯಕ ಮೊಹಮ್ಮದ್ ನಬಿ (37) ಈ ತಂಡದ ಗರಿಷ್ಠ ಸ್ಕೋರರ್.
ಲಂಕಾದ ಸುರಂಗ ಲಕ್ಮಲ್, ಚತುರಂಗ ಡಿಸಿಲ್ವಾ ತಲಾ ಎರಡು ವಿಕೆಟ್, ಅಜಂತ ಮೆಂಡಿಸ್ ಹಾಗೂ ತಿಸ್ಸಾರ ಪೆರೇರಾ ತಲಾ ಮೂರು ವಿಕೆಟ್ ಕಬಳಿಸಿದರು. ಈ ಗೆಲುವಿನಿಂದ ಲಂಕಾ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಸ್ಕೋರ್ ವಿವರ:
ಶ್ರೀಲಂಕಾ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 253
ಕುಶಾಲ್ ಪೆರೇರಾ ಬಿ ಮಿರ್ವಾಯಿಸ್ ಅಶ್ರಫ್ 33
ಲಾಹಿರು ತಿರಿಮಾನೆ ಬಿ ಶಾಪೂರ್ ಜರ್ದಾನ್ 05
ಕುಮಾರ ಸಂಗಕ್ಕಾರ ರನ್‌ಔಟ್ (ಜದ್ರಾನ್/ನಬಿ) 76
ಮಾಹೇಲ ಜಯವರ್ಧನೆ ಸಿ ಮೊಹಮ್ಮದ್ ನಬಿ ಬಿ ಮಿರ್ವಾಯಿಸ್ ಅಶ್ರಫ್ 14
ದಿನೇಶ್ ಚಾಂಡಿಮಾಲ್ ಬಿ ಹಮ್ಜಾ ಹೋತಕ್ 26
ಏಂಜೆಲೊ ಮ್ಯಾಥ್ಯೂಸ್ ಔಟಾಗದೆ 45
ಚತುರಂಗ ಡಿ ಸಿಲ್ವಾ ಸಿ ಮಿರ್ವಾಯಿಸ್ ಅಶ್ರಫ್ ಬಿ ದೌಲತ್ ಜದ್ರಾನ್ 17
ತಿಸ್ಸಾರ ಪೆರೇರಾ ಔಟಾಗದೆ 19
ಇತರೆ (ಲೆಗ್‌ಬೈ–6, ವೈಡ್–6, ನೋಬಾಲ್–6) 18
ವಿಕೆಟ್ ಪತನ: 1–14 (ತಿರಿಮಾನೆ; 5.4); 2–50 (ಕುಶಾಲ್; 15.1); 3–83 (ಜಯವರ್ಧನೆ; 21.2); 4–157 (ಚಾಂಡಿಮಾಲ್; 36.5); 5–158 (ಸಂಗಕ್ಕಾರ; 37.2); 6–184 (ಡಿಸಿಲ್ವಾ; 41.5)
ಬೌಲಿಂಗ್: ನಜಿಬುಲ್ಲಾ ಜದ್ರಾನ್ 3–0–9–0, ಶಾಪೂರ್ ಜದ್ರಾನ್ 9–1–46–1 (ವೈಡ್–3), ದೌಲತ್ ಜದ್ರಾನ್ 9.2–0–60–1 (ನೋಬಾಲ್–2, ವೈಡ್–1), ಮಿರ್‌ವಾಯಿಸ್ ಅಶ್ರಫ್ 8–1–29–2, ಮೊಹಮ್ಮದ್ ನಬಿ 6.4–1–23–0, ಹಮ್ಜಾ ಹೋತಕ್ 7–1–43–1 (ವೈಡ್–1), ಸಮಿಯುಲ್ಲಾ ಶೆನ್ವಾರಿ 4–0–20–0, ನವ್ರೋಜ್ ಮಂಗಲ್ 3–0–17–0
ಆಫ್ಘಾನಿಸ್ತಾನ 38.4 ಓವರ್‌ಗಳಲ್ಲಿ 124
ಮೊಹಮ್ಮದ್ ಶಹ್ಜಾದ್ ಬಿ ಸುರಂಗ ಲಕ್ಮಲ್ 07
ನೂರ್ ಅಲಿ ಜದ್ರಾನ್ ಸಿ ಚತುರಂಗ ಡಿಸಿಲ್ವಾ ಬಿ ಅಜಂತ ಮೆಂಡಿಸ್ 21
ಅಸ್ಗರ್ ಸ್ಟಾನಿಕ್‌ಜಾಯಿ ಬಿ ತಿಸ್ಸಾರ ಪೆರೇರಾ 27
ನವ್ರೋಜ್ ಮಂಗಲ್ ಸಿ ಕುಮಾರ ಸಂಗಕ್ಕಾರ ಬಿ ತಿಸ್ಸಾರ ಪೆರೇರಾ 04
ಸಮಿಯುಲ್ಲಾ ಶೆನ್ವಾರಿ ಸಿ ತಿರಿಮಾನೆ ಬಿ ಸುರಂಗ ಲಕ್ಮಲ್ 06
ಮೊಹಮ್ಮದ್ ನಬಿ ಎಲ್‌ಬಿಡಬ್ಲ್ಯು ಬಿ ಚತುರಂಗ ಡಿಸಿಲ್ವಾ 37
ನಜಿಬುಲ್ಲಾ ಜದ್ರಾನ್ ಸಿ ಏಂಜೆಲೊ ಮ್ಯಾಥ್ಯೂಸ್ ಬಿ ತಿಸ್ಸಾರ ಪೆರೇರಾ 11
ಮಿರ್ವಾಯಿಸ್ ಅಶ್ರಫ್ ಸಿ ತಿಸ್ಸಾರ ಪೆರೇರಾ ಬಿ ಚತುರಂಗ ಡಿಸಿಲ್ವಾ 01
ಹಮ್ಜಾ ಹೋತಕ್ ಎಲ್‌ಬಿಡಬ್ಲ್ಯು ಬಿ ಅಜಂತ ಮೆಂಡಿಸ್ 01
ದೌಲತ್ ಜದ್ರಾನ್ ಬಿ ಅಜಂತ ಮೆಂಡಿಸ್ 00
ಶಾಪೂರ್ ಜದ್ರಾನ್ ಔಟಾಗದೆ 00
ಇತರೆ (ಲೆಗ್‌ಬೈ–2, ವೈಡ್–7) 09
ವಿಕೆಟ್ ಪತನ: 1–8 (ಮೊಹಮ್ಮದ್ ಶೆಹ್ಜಾದ್; 1.4); 2–53 (ಅಸ್ಗರ್; 12.3); 3–59 (ನೂರ್ ಅಲಿ; 15.1); 4–61 (ನವ್ರೋಜ್; 16.1); 5–73 (ಸಮಿಯುಲ್ಲಾ; 20.2); 6–121 (ನಜುಬುಲ್ಲಾ; 31.3); 7–121 (ಎಂ.ನಬಿ; 32.3); 8–122 (ಹಮ್ಜಾ; 35.5); 9–124 (ಜದ್ರಾನ್; 37.6); 10–124 (ಮಿರ್‌ವಾಯಿಸ್; 38.4)
ಬೌಲಿಂಗ್: ಲಸಿತ್ ಮಾಲಿಂಗ 5–0–23–0 (ವೈಡ್–4), ಸುರಂಗ ಲಕ್ಮಲ್ 7–2–30–2, ತಿಸ್ಸಾರ ಪೆರೇರಾ 10–2–29–3, ಚತುರಂಗ ಡಿಸಿಲ್ವಾ 9.4–1–29–2, ಅಜಂತ 7–2–11–3 (ವೈಡ್–1)
ಫಲಿತಾಂಶ: ಶ್ರೀಲಂಕಾಕ್ಕೆ 129 ರನ್ ಗೆಲುವು ಹಾಗೂ ಫೈನಲ್ ಪ್ರವೇಶ. ಪಾಯಿಂಟ್: ಬೋನಸ್ ಸೇರಿ 5 ಪಾಯಿಂಟ್. ಪಂದ್ಯ ಶ್ರೇಷ್ಠ: ಕುಮಾರ ಸಂಗಕ್ಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.