ADVERTISEMENT

ಬರ್ತ್‌ಡೇ ಹುಡುಗಿ ಸೈನಾ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಅಮೋಘ ಪ್ರದರ್ಶನ ತೋರಿದ ಭಾರತದ ಸೈನಾ ನೆಹ್ವಾಲ್ ಸಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ      ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದಾರೆ.

ಶನಿವಾರವಾಷ್ಟೇ ತಮ್ಮ 22ನೇ ಜನ್ಮದಿನ ಆಚರಿಸಿಕೊಂಡ ಸೈನಾ ಭಾನುವಾರ ನಡೆದ ಫೈನಲ್‌ನಲ್ಲಿ 21-19, 21-16ರಲ್ಲಿ ಚೀನಾದ ಶಿಕ್ಸಿಯನ್ ವಾಂಗ್ ಎದುರು ಜಯಭೇರಿ ಮೊಳಗಿಸಿದರು.


ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಪಾರಮ್ಯ ಮೆರೆಯುತ್ತಿರುವ ಚೀನಾದ ಆಟಗಾರ್ತಿಯರಿಗೆ ಈ ಮೂಲಕ ಎಚ್ಚರಿಕೆ ರವಾನಿಸಿದರು.

ಕಳೆದ ಬಾರಿ ಕೂಡ ಈ ಟೂರ್ನಿಯಲ್ಲಿ ನೆಹ್ವಾಲ್ ಚಾಂಪಿಯನ್ ಆಗಿದ್ದರು. ಇದು ಈ ಋತುವಿನಲ್ಲಿ ಅವರಿಗೆ ದೊರೆತ ಮೊದಲ ಪ್ರಶಸ್ತಿ. ಇದಕ್ಕಾಗಿ ಸೈನಾ 48 ನಿಮಿಷ ತೆಗೆದುಕೊಂಡರು. ಈ ಸಲ ಹೈದರಾಬಾದ್‌ನ ಆಟಗಾರ್ತಿ ಮೊದಲಿನಿಂದಲೂ ಉತ್ತಮ ಪ್ರದರ್ಶನ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT