ADVERTISEMENT

ಬಾಕ್ಸಿಂಗ್: ಭಾರತಕ್ಕೆ ಎಂಟು ಪದಕ

ಪಿಟಿಐ
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST

ನವದೆಹಲಿ: ಭಾರತದ ಬಾಕ್ಸಿಂಗ್ ಪಟುಗಳು ಬಲ್ಗೇರಿಯಾದ ಬಾಲ್ಕನ್‌ನಲ್ಲಿ ಶನಿವಾರ ಮುಕ್ತಾಯವಾದ ಅಂತರರಾಷ್ಟ್ರೀಯ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಎಂಟು ಪದಕಗಳನ್ನು ಗೆದ್ದರು.

ಅದರಲ್ಲಿ ನಾಲ್ಕು ಚಿನ್ನ,  ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಸೇರಿವೆ.

ಯೂತ್ ಬಾಲಕಿಯರ ವಿಭಾಗದಲ್ಲಿ ನೀತು (48ಕೆ.ಜಿ), ಸಾಕ್ಷಿ (54 ಕೆ.ಜಿ), ಶಶಿ (57 ಕೆ.ಜಿ) ಮತ್ತು ನೇಹಾ ಯಾದವ್ (81 ಕೆ.ಜಿ. ಮೇಲಿನವರು) ಚಿನ್ನ ಗೆದ್ದರು. ಅಂಕುಶಿತಾ ಬೊರೊ (64 ಕೆ.ಜಿ) ಬೆಳ್ಳಿ ಪಡೆದರು.  ಜಾಯ್ ಕುಮಾರಿ (51ಕೆ.ಜಿ), ಸಪ್ನಾ (75 ಕೆ.ಜಿ) ಮತ್ತು ಅನುಪಮಾ (81 ಕೆ.ಜಿ. ಮೇಲಿನವರು) ಕಂಚು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT