ADVERTISEMENT

ಬಾಕ್ಸಿಂಗ್‌: ಮನೋಜ್‌, ಮನದೀಪ್‌ಗೆ ಗೆಲುವು

ಪಿಟಿಐ
Published 26 ಅಕ್ಟೋಬರ್ 2017, 20:04 IST
Last Updated 26 ಅಕ್ಟೋಬರ್ 2017, 20:04 IST

ವಿಶಾಖಪಟ್ಟಣ: ಮನೋಜ್‌ ಕುಮಾರ್‌ ಮತ್ತು ಮನದೀಪ್‌ ಜಾಂಗ್ರಾ ಅವರು ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಸಿಹಿ ಸವಿದಿದ್ದಾರೆ. ಗುರುವಾರ ನಡೆದ 69 ಕೆ.ಜಿ. ವಿಭಾಗದ ವೆಲ್ಟರ್‌ವೇಟ್‌ ಸ್ಪರ್ಧೆಯ ಮೊದಲ ಸುತ್ತಿನ ಹೋರಾ ಟದಲ್ಲಿ ಆರ್‌ಎಸ್‌ಪಿಬಿಯನ್ನು ಪ್ರತಿನಿಧಿಸಿದ್ದ ಮನೋಜ್‌, ಉತ್ತರ ಪ್ರದೇಶದ ರಾಹುಲ್‌ ಗುಪ್ತಾ ಅವರನ್ನು ಮಣಿಸಿದರು. 75 ಕೆ.ಜಿ. ವಿಭಾ ಗದ ಮಿಡಲ್‌ವೇಟ್‌ ಸ್ಪರ್ಧೆಯಲ್ಲಿ ಹೋರಾಡಿದ ಮನದೀಪ್‌, ತಮಿಳು ನಾಡಿನ ಆರ್‌.ಪಿ. ಪ್ರಕಾಶ್‌ ಅವರನ್ನು ಸೋಲಿಸಿದರು. 64 ಕೆ.ಜಿ. ಲೈಟ್‌ ವೆಲ್ಟರ್‌ವೇಟ್‌ ವಿಭಾಗದಲ್ಲಿ ಕಣದಲ್ಲಿದ್ದ ರೋಹಿತ್‌ ಟೋಕಾಸ್‌, ತ್ರಿಪುರದ ವಿಷ್ಣು ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.