ADVERTISEMENT

ಬಾಚಿ ಕ್ರೀಡೆ; ಸೆಮಿಫೈನಲ್‌ಗೆ 4 ತಂಡ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ದಾವಣಗೆರೆ: ನಗರದಲ್ಲಿ ಮಂಗಳವಾರ ಆರಂಭವಾದ ರಾಜ್ಯಮಟ್ಟದ ಕಡಿಮೆ ಸಾಮರ್ಥ್ಯದ ವಿಶೇಷ ಮಕ್ಕಳ ಕ್ರೀಡಾಕೂಟದ ಬಾಚಿ ಕ್ರೀಡೆಯಲ್ಲಿ ಮಂಗಳವಾರ ಬಾಲಕರ 4 ಹಾಗೂ ಬಾಲಕಿಯರ 3 ತಂಡಗಳು ಸೆಮಿಫೈನಲ್ ಹಂತ ತಲುಪಿವೆ.

ಉಡುಪಿ ಜಿಲ್ಲೆ ಕಾರ್ಕಳದ ಚೇತನಾ ವಿಶೇಷ ಶಾಲೆ ಮತ್ತು ಹೊನ್ನಾವರದ ಪೆದ್ರಾ ಪವಾಡ ವಿಶೇಷ ಶಾಲೆ, ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್‌ನ ಲಯನ್ಸ್ ವಿಶೇಷ ಶಾಲೆ ಮತ್ತು ಮಂಗಳೂರಿನ ಸಾನಿಧ್ಯ ವಿಶೇಷ ಶಾಲೆಯ ತಂಡಗಳು ಬಾಲಕರ ವಿಭಾಗದಲ್ಲಿ ಸೆಮಿಫೈನಲ್ ತಲುಪಿವೆ.

ಬಾಲಕಿಯರ ವಿಭಾಗದಲ್ಲಿ ಒಟ್ಟು ಮೂರು ತಂಡಗಳು ಭಾಗವಹಿಸಿದ್ದು, ಮಂಗಳೂರಿನ ಸಾನಿಧ್ಯ ವಿಶೇಷ ಶಾಲೆ, ಕೊಡಗು ಶುಂಠಿಕೊಪ್ಪದ ಸ್ವಸ್ಥ ವಿಶೇಷ ಶಾಲೆ ಮತ್ತು ದಾವಣಗೆರೆಯ ಅಂಗವಿಲಕರ ಆಶಾಕಿರಣ ಟ್ರಸ್ಟ್‌ನ ಬಾಲಕಿಯರು ಬುಧವಾರ ಸೆಮಿಫೈನಲ್‌ನಲ್ಲಿ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.