ADVERTISEMENT

ಬೃಹತ್ ಪರದೆ ಯೋಜನೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 3 ಮೇ 2012, 19:30 IST
Last Updated 3 ಮೇ 2012, 19:30 IST

ಕೋಲ್ಕತ್ತ (ಪಿಟಿಐ): ಕೋಲ್ಕತ್ತ ನೈಟ್‌ರೈಡರ್ಸ್ ಹಾಗೂ ಪುಣೆ ವಾರಿಯರ್ಸ್ ನಡುವೆ ಮೇ 5ರಂದು ನಡೆಯುವ ಐಪಿಎಲ್ ಪಂದ್ಯವನ್ನು ನಗರದ ಅನೇಕ ಕಡೆಗಳಲ್ಲಿ ಬೃಹತ್ ಪರದೆಗಳ ಮೇಲೆ ತೋರಿಸುವ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಯೋಜನೆಗೆ ಇಲ್ಲಿನ ಪೊಲೀಸ್ ಇಲಾಖೆ ಅಡ್ಡಗಾಲು ಹಾಕಿದೆ.

ರಾಜ್ಯದ ರಾಜಧಾನಿಯ ಹನ್ನೆರಡು ಪ್ರಮುಖ ಸ್ಥಳಗಳಲ್ಲಿ ದೊಡ್ಡ ಪರದೆಯ ಮೇಲೆ ಪಂದ್ಯದ ನೇರ ಪ್ರಸಾರವನ್ನು ಸಾರ್ವಜನಿಕರು ನೋಡುವುದಕ್ಕೆ ಅವಕಾಶ ಮಾಡಿಕೊಡುವುದು ಸಿಎಬಿ ಯೋಜನೆಯಾಗಿತ್ತು.

ನೈಟ್‌ರೈಡರ್ಸ್ ವಿರುದ್ಧ ಸ್ಥಳೀಯ ಕ್ರಿಕೆಟಿಗ ಸೌರವ್ ಗಂಗೂಲಿ ನಾಯಕತ್ವದ ವಾರಿಯರ್ಸ್ ಆಡುವುದನ್ನು ನೋಡುವ ಅವಕಾಶ ಹೆಚ್ಚಿನ ಜನರಿಗೆ ಸಿಗಬೇಕು ಎನ್ನುವುದು ಸಿಎಬಿ ಆಶಯ."
 
`ದಾದಾ~ಗೆ ಇಲ್ಲಿ ಅಪಾರ ಅಭಿಮಾನಿಗಳಿದ್ದಾರೆ ಆದ್ದರಿಂದ ಆ ಪಂದ್ಯದ ಟಿಕೆಟ್‌ಗಳಿಗೂ ಬೇಡಿಕೆ ಹೆಚ್ಚಿದೆ. ಆದರೆ ಅಷ್ಟೊಂದು ಟಿಕೆಟ್ ಮಾರಾಟ ಸಾಧ್ಯವಿಲ್ಲದಿದ್ದರೂ ಬೇರೆಡೆ ದೊಡ್ಡ ಪರದೆಯಲ್ಲಿ ಆಟ ನೋಡಿ ಸಂತಸ ಪಡಲಿ ಎಂದು ಯೋಚನೆ ಮಾಡಿದ್ದು ಸಹಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.