ADVERTISEMENT

ಬೃಹತ್ ಮೊತ್ತದತ್ತ ಭಾರತ ಇತರೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಜೈಪುರ (ಪಿಟಿಐ): ಶಿಖರ್ ಧವನ್ ಮತ್ತು ಆಜಿಂಕ್ಯ ರಹಾನೆ ಗಳಿಸಿದ ಶತಕದ ನೆರವಿನಿಂದ ಭಾರತ ಇತರೆ ತಂಡದವರು ಇಲ್ಲಿ ಆರಂಭವಾದ ಇರಾನಿ ಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಜಸ್ತಾನದ ವಿರುದ್ಧ ಬೃಹತ್ ಮೊತ್ತದೆಡೆಗೆ ಮುನ್ನಡೆದಿದ್ದಾರೆ.

ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಐದು ದಿನಗಳ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಇತರೆ 90 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 400 ರನ್ ಗಳಿಸಿದೆ.
ಧವನ್ (177) ಹಾಗೂ ರಹಾನೆ (ಅಜೇಯ 117) ಎದುರಾಳಿ ಬೌಲರ್‌ಗಳು ಒಡ್ಡಿದ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಮೆಟ್ಟಿನಿಂತರು. ದಿನದಾಟದ ಅಂತ್ಯಕ್ಕೆ ನಾಯಕ ಪಾರ್ಥಿವ್ ಪಟೇಲ್ (ಅಜೇಯ 55) ಅವರು ರಹಾನೆ ಜೊತೆ ಕ್ರೀಸ್‌ನಲ್ಲಿದ್ದರು.

ಸಂಕ್ಷಿಪ್ತ ಸ್ಕೋರ್: ಭಾರತ ಇತರೆ: 90 ಓವರ್‌ಗಳಲ್ಲಿ 3 ವಿಕೆಟ್‌ಗೆ 400 (ಶಿಖರ್ ಧವನ್ 177, ಆಜಿಂಕ್ಯ ರಹಾನೆ ಬ್ಯಾಟಿಂಗ್ 117, ಮನೀಷ್ ಪಾಂಡೆ 16, ಪಾರ್ಥಿವ್ ಪಟೇಲ್ ಬ್ಯಾಟಿಂಗ್ 55, ಸುಮಿತ್ ಮಾಥುರ್ 65ಕ್ಕೆ 1). 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.