ಬೆಂಗಳೂರು: ಅಪೇಕ್ಷಾ ನಾಯಕ್ ಮತ್ತು ಅರ್ಚನಾ ಪೈ ಜೋಡಿ ಹೊಂಡಾ ಪ್ರಾಯೋಜಿತ ಫೈವ್‌ಸ್ಟಾರ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ 13 ವರ್ಷ ವಯಸ್ಸಿನೊಳಗಿನವರ ಬಾಲಕಿಯರ ಡಬಲ್ಸ್ ಸೆಮಿಫೈನಲ್ ಪ್ರವೇಶಿಸಿತು.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ರಹೇಜಾ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 13 ವರ್ಷ ವಯಸ್ಸಿನೊಳಗಿನವರ ಬಾಲಕಿಯರ ಡಬಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಅಪೇಕ್ಷಾ ನಾಯಕ್ ಮತ್ತು ಅರ್ಚನಾ ಪೈ 21-4, 21-2 ರಲ್ಲಿ ಎಸ್. ಮಿಥಾಲಿ ಮತ್ತು ಡಿ. ಶೀತಲ್ ಜೋಡಿ ಮೇಲೆ ಜಯ ಸಾಧಿಸಿತು.
ಇದೇ ವಿಭಾಗದ ಇತರ ಡಬಲ್ಸ್ ಪಂದ್ಯಗಳಲ್ಲಿ ಅಶ್ವಿನಿ ಭಟ್ ಮತ್ತು ಯು.ಕೆ. ಮಿಥುಲಾ 21-11, 21-9 ರಲ್ಲಿ ದೃತಿ ಯತೀಶ್ ಮತ್ತು ತ್ರಿಶಾ ಹೆಗಡೆ ಮೇಲೂ, ಕೀರ್ತನಾ ಶರಾಫ್ ಮತ್ತು ರಿಚಾ ಮುಕ್ತಿಬೋದ್ 21-19, 21-9 ರಲ್ಲಿ ಶಿವಾನಿ ಪತಿ ಮತ್ತು ಸುರಭಿ ಶ್ರೀನಿವಾಸನ್ ವಿರುದ್ಧವೂ, ನೇತ್ರಾ ಮತ್ತು ಸೌಮ್ಯ 21-6, 21-8 ರಲ್ಲಿ ಅದ್ವಿಕಾ ಗಣೇಶ್ ಮತ್ತು ಅನುಶಾ ಗಣೇಶ್ ಮೇಲೂ ಜಯ ಪಡೆದರು.
15 ವರ್ಷದೊಳಗಿನವರ ಬಾಲಕಿಯರ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಅಪೇಕ್ಷಾ ನಾಯಕ್ ಮತ್ತು ಅರ್ಚನಾ ಪೈ 21-4, 21-8 ರಲ್ಲಿ ಕೀರ್ತನಾ ಜಿ. ಪ್ರಸಾದ್ ಮತ್ತು ರೇಹಾ ಮೇಲೂ, ಅಶ್ವಿನಿ ಭಟ್ ಮತ್ತು ಮಿಥುಲಾ 21-8, 21-6 ರಲ್ಲಿ ಅಸ್ರಿತಾ ಮತ್ತು ಮಿಥಾಲಿ ವಿರುದ್ಧವೂ, ಎಂ.ಎಸ್. ಚಿನ್ಮಯಿ ಮತ್ತು ತನ್ವಿ 21-8, 21-7 ರಲ್ಲಿ ಅಂಜಲಿ ರೈ ಮತ್ತು ಮಹಾಲಕ್ಷ್ಮಿ ರಮೇಶ್ ಮೇಲೂ ಜಯ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.