ADVERTISEMENT

‘ಭವಿಷ್ಯದ ಬಗ್ಗೆ ರೊನಾಲ್ಡೊಗೆ ಆತಂಕವಿಲ್ಲ’

ಏಜೆನ್ಸೀಸ್
Published 11 ಜೂನ್ 2018, 13:35 IST
Last Updated 11 ಜೂನ್ 2018, 13:35 IST
ಕ್ರಿಸ್ಟಿಯಾನೊ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ   

ಕ್ರತೊವೊ (ಎಎಫ್‌ಪಿ): ‘ಕ್ರಿಸ್ಟಿಯಾನೊ ರೊನಾಲ್ಡೊ ಈ ವಿಶ್ವಕಪ್‌ನಲ್ಲಿ ಆಡುತ್ತಿರುವ ಶ್ರೇಷ್ಠ ಆಟಗಾರರ ಪೈಕಿ ಒಬ್ಬರು. ಅವರಿಗೆ ತಮ್ಮ ಫುಟ್‌ಬಾಲ್‌ ಭವಿಷ್ಯದ ಕುರಿತು ಯಾವುದೇ ರೀತಿಯ ಆತಂಕವಿಲ್ಲ’ ಎಂದು ಪೋರ್ಚುಗಲ್‌ನ ಮಿಡ್‌ಫೀಲ್ಡರ್‌ ಮ್ಯಾನುಯಲ್‌ ಫರ್ನಾಂಡೆಸ್‌ ಹೇಳಿದ್ದಾರೆ.

ಮಾಸ್ಕೊ ನಗರದ ಹೊರವಲಯದಲ್ಲಿರುವ ಪೋರ್ಚುಗಲ್‌ ತಂಡದ ತರಬೇತಿ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಫುಟ್‌ಬಾಲ್‌ ಕ್ರೀಡೆಯ ಎಲ್ಲ ವಿಭಾಗಗಳಲ್ಲಿ ಉತ್ತಮ ಸಾಮರ್ಥ್ಯ ತೋರುವ ರೊನಾಲ್ಡೊ ಅವರಿಗೆ ವೃತ್ತಿ ಬದುಕಿನ ಭವಿಷ್ಯದ ಕುರಿತು ಆತಂಕಗಳಿಲ್ಲ. ಅವರಲ್ಲಿನ ಫುಟ್‌ಬಾಲ್‌ ಆಟದ ಶಕ್ತಿ ಕುಂದಿಲ್ಲ’ ಎಂದು ಹೇಳಿದ್ದಾರೆ.

33 ವರ್ಷದ ರೊನಾಲ್ಡೊ ಅವರು ಪ್ರತಿಷ್ಠಿತ ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ ಅನ್ನು ಪ್ರತಿನಿಧಿಸುತ್ತಾರೆ. ಕಳೆದ ತಿಂಗಳು ನಡೆದ ಚಾಂಪಿಯನ್ಸ್‌ ಲೀಗ್‌ ಫೈನಲ್‌ನಲ್ಲಿ ಲೀವರ್‌ಪೂಲ್‌ ತಂಡವನ್ನು ರಿಯಲ್‌ ಮ್ಯಾಡ್ರಿಡ್‌ 3–1ರಿಂದ ಮಣಿಸಿತ್ತು. ಈ ಪಂದ್ಯದ ನಂತರ ರೊನಾಲ್ಡೊ ಅವರು ಕ್ಲಬ್‌ ಅನ್ನು ತೊರೆಯಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.

ADVERTISEMENT

ಕ್ಲಬ್‌ನ ಅಧ್ಯಕ್ಷ ಫ್ಲೊರೆಂಟಿನೊ ಪೆರೆಜ್‌ ಅವರೊಂದಿಗಿನ ಸಂಬಂಧದಲ್ಲಿ ಬಿರುಕುಬಿಟ್ಟ ಕಾರಣ ರೊನಾಲ್ಡೊ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಜೊತೆಗೆ, ಬ್ರೆಜಿಲ್‌ನ ಪ್ರಮುಖ ಆಟಗಾರ ನೇಮರ್‌ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ ಹಾತೊರೆಯುತ್ತಿರುವುದು ರೊನಾಲ್ಡೊ ಅವರಲ್ಲಿ ಬೇಸರ ತರಿಸಿದೆ ಎನ್ನಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.