ADVERTISEMENT

ಮಹಿಳಾ ಹಾಕಿ: ಭಾರತಕ್ಕೆ ಸೋಲು

ಪಿಟಿಐ
Published 17 ಜೂನ್ 2018, 18:56 IST
Last Updated 17 ಜೂನ್ 2018, 18:56 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಮ್ಯಾಡ್ರಿಡ್: ಭಾರತದ ಮಹಿಳೆಯರ ಹಾಕಿ ತಂಡವು ಭಾನುವಾರ ಸ್ಪೇನ್ ವಿರುದ್ಧ ನಡೆದ ಪಂದ್ಯದಲ್ಲಿ ಸೋತಿತು. ಐದು ಪಂದ್ಯಗಳ ಸರಣಿಯಲ್ಲಿ 1–2ರ ಹಿನ್ನಡೆ ಅನುಭವಿಸಿದೆ.

ಇಲ್ಲಿ ನಡೆದ ಸರಣಿಯ ನಾಲ್ಕನೇ ಪಂದ್ಯದಲ್ಲಿ ಸ್ಪೇನ್ ತಂಡವು 4–1 ಗೋಲುಗಳಿಂದ ಭಾರತ ತಂಡವನ್ನು ಮಣಿಸಿತು.

ಸ್ಪೇನ್ ತಂಡದ ಲೋಲಾ ರೀರಾ (10ನೇ ನಿ, 34ನೇ ನಿ) ಎರಡು ಗೋಲು ಹೊಡೆದರು. ಲೂಸಿಯಾ ಜಿಮೇಂಜ್ (19ನೇ ನಿ) ಮತ್ತು ಕಾರ್ಮೆನ್ ಕೆನೊ (37ನೇ ನಿ) ತಂಡಕ್ಕೆ ತಲಾ ಒಂದು ಗೋಲಿನ ಕಾಣಿಕೆ ನೀಡಿದರು. ಭಾರತದ ಉದಿತಾ (22 ನೇ ನಿ) ಒಂದು ಗೋಲು ಗಳಿಸಿದರು.

ADVERTISEMENT

ಸ್ಪೇನ್ ತಂಡವು ಮೊದಲ ಐದು ನಿಮಿಷಗಳಲ್ಲಿಯೇ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದಿತ್ತು. ಆದರೆ, ಅವುಗಳನ್ನು ಗೋಲಿನಲ್ಲಿ ಪರಿವರ್ತಿಸಿಕೊಳ್ಳುವಲ್ಲಿ ಸಫಲವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.