ADVERTISEMENT

ಮಾರ್ಕ್ ವೆಬರ್‌ಗೆ ಮೊದಲ ಸ್ಥಾನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2012, 19:30 IST
Last Updated 8 ಜುಲೈ 2012, 19:30 IST

ಸಿಲ್ವರ್‌ಸ್ಟೋನ್, ಇಂಗ್ಲೆಂಡ್ (ರಾಯಿಟರ್ಸ್): ರೆಡ್ ಬುಲ್ ಕಾರಿನ ಚಾಲಕ ಮಾರ್ಕ್ ವೆಬರ್ ಭಾನುವಾರ ಇಲ್ಲಿ ನಡೆದ ಬ್ರಿಟಿಷ್ ಗ್ರ್ಯಾನ್‌ಪ್ರಿ ಫಾರ್ಮುಲಾ ಒನ್ ರೇಸ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಫೆರಾರಿ ಚಾಲಕ ಸ್ಪೇನ್‌ನ ಫರ್ನಾಂಡೊ ಅಲೊನ್ಸೊ ಅವರನ್ನು ಹಿಂದಿಕ್ಕಿ ವೆಬರ್ ಈ ಸಾಧನೆ ಮಾಡಿದರು. 52 ಲ್ಯಾಪ್‌ಗಳ ರೇಸ್‌ನಲ್ಲಿ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ಅಲೊನ್ಸೊ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಆದರೂ 129 ಪಾಯಿಂಟ್‌ಗಳೊಂದಿಗೆ ಈ ಬಾರಿಯ ಫಾರ್ಮುಲಾ ಒನ್ ಋತುವಿನಲ್ಲಿ ಅಲೊನ್ಸೊ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾರ್ಕ್ ವೆಬರ್ 116 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.