ADVERTISEMENT

ಮ್ಯಾರಥಾನ್‌: ಕೀನ್ಯಾ ಸ್ಪರ್ಧಿಗಳ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ಬೆಂಗಳೂರು: ಕೀನ್ಯಾದ ಡೇನಿಯಲ್‌ ಯೆಗಾನ್‌ ಹಾಗೂ ಗ್ಲಾಡೀಸ್‌ ತರುಸ್‌ ಅವರು ರೋಟರಿ ಐ.ಟಿ ಕಾರಿಡಾರ್‌ ಆಶ್ರಯದಲ್ಲಿ ಶನಿವಾರ ರಾತ್ರಿ ಇಲ್ಲಿ ನಡೆದ ‘ಮಿಡ್‌ನೈಟ್‌ ಮ್ಯಾರಥಾನ್‌’ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದರು.

ಭಾರಿ ಪೈಪೋಟಿಗೆ ಕಾರಣವಾದ ಪುರುಷರ ವಿಭಾಗದಲ್ಲಿ ಯೆಗಾನ್‌ 2 ಗಂಟೆ 11 ನಿಮಿಷ 52 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಮೊದಲ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಗ್ಲಾಡೀಸ್‌ 2:59.44 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು.

ಫಲಿತಾಂಶ: ಪುರುಷ ವಿಭಾಗ (ಓಪನ್‌): ಡೇನಿಯಲ್‌ ಯೆಗಾನ್‌ (ಕೀನ್ಯಾ)–1, ಎಬೆಸಾ ಮೆರ್ಗಾ (ಇಥಿಯೋಪಿಯಾ)–2, ಗೆತಾಹುನ್‌ ತಿಲಾಹುನ್‌ (ಇಥಿಯೋಪಿಯಾ)–3.

ಭಾರತದ ಪುರುಷರ ವಿಭಾಗ: ತ್ರಿಪುರಾರಿ ಸಿಂಗ್‌ (ಎಂಇಜಿ)–1, ಪಿ.ಸಿ.ಪೂವಣ್ಣ (ಎಂಇಜಿ)–2, ವಿಶಾಲ್‌ ಶಿಲಿಮ್‌ಕರ್‌ (ಪುಣೆ)–3
ಮಹಿಳೆಯರ ವಿಭಾಗ (ಓಪನ್‌); ಗ್ಲಾಡೀಸ್‌ ತರುಸ್‌ (ಕೀನ್ಯಾ)–1, ಚಾಲ್ತು ನಿಗುಸ್‌ ಶಿಫೆರಾ (ಇಥಿಯೋಪಿಯಾ)–2, ಲೋರ್ನಾ ಚೆನಾಂಗಟ್‌ (ಕೀನ್ಯಾ)–3

ಭಾರತದ ಮಹಿಳೆಯರ ವಿಭಾಗ: ಸುಧಾ ಮಣಿ (ತಮಿಳುನಾಡಿ)–1, ಭಗವತಿ (ಕರ್ನಾಟಕ)–2 ಹಾಫ್‌ ಮ್ಯಾರಥಾನ್‌: ಪುರುಷರ ವಿಭಾಗ (ಓಪನ್‌): ಡೇವಿಡ್‌ ಕಿಪ್ರೊಟಿಚ್‌ (ಕೀನ್ಯಾ)–1, ಫಿಕ್ರೆಸೆದಾಸಿ ಹೇಲ್‌ (ಇಥಿಯೋಪಿಯಾ)–2, ಸೊಲೊಮನ್‌ ಮೊಗಸ್‌ (ಇಥಿಯೋಪಿಯಾ)–3.

ಭಾರತದ ಪುರುಷರ ವಿಭಾಗ: ಸಂತೋಷ್‌ (ಎಂಇಜಿ)–1, ಶ್ರೀಧರ್‌ ಭಜಂತ್ರಿ (ಎಂಇಜಿ)–2, ಎಸ್‌.ಮಣಿಕಂದನ್‌ (ಎಂಇಜಿ)–3.
ಭಾರತದ ಮಹಿಳೆಯರ ವಿಭಾಗ: ಶಿಲ್ಪಿ ಸಾಹು–1, ಎನ್‌.ದಿವ್ಯಾ (ಕೊಯಮತ್ತೂರು)–2, ಜೆಂಚೊಕನ್‌ (ಬೆಂಗಳೂರು)–1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.