ADVERTISEMENT

ಯುವ ಕಬಡ್ಡಿ ಪ್ರತಿಭೆಗಳಿಗೆ ಬೇಕು ಪ್ರೋತ್ಸಾಹ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST

ವಿಜಯವಾಡ (ಪಿಟಿಐ): `ದೇಸಿ ಕ್ರೀಡೆ ಕಬಡ್ಡಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಿಂಥೆಟಿಕ್ ಅಂಗಳವಿರಬೇಕು. ಅಂದಾಗ ಮಾತ್ರ ದೇಸಿ ಕ್ರೀಡೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮಾನ್ಯತೆ ಸಿಗಬಹುದು...~

 ವಿಜಯವಾಡದಲ್ಲಿ ನಡೆದ ಕಬಡ್ಡಿ ಪ್ರೀಮಿಯರ್ ಲೀಗ್‌ನಲ್ಲಿ (ಕೆಪಿಎಲ್) ಪಾಲ್ಗೊಂಡಿದ್ದ ಭಾರತ ರಾಷ್ಟ್ರೀಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದ ಆಟಗಾರರಿಂದ ವ್ಯಕ್ತವಾದ ಅಭಿಪ್ರಾಯಗಳಿವು.

`ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಸಿ ಕ್ರೀಡೆ ಪ್ರಖ್ಯಾತಿ ಪಡೆಯಲು ಆಟಗಾರರಿಗೆ ಅಗತ್ಯ ಸೌಲಭ್ಯ  ಒದಗಿಸಬೇಕು. ಸಿಂಥೆಟಿಕ್ ಅಂಗಳವನ್ನು ನಿರ್ಮಿಸಬೇಕು. ಇರಾನ್‌ನ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಲು ಅವರಿಗೆ ಸಿಗುವ ಸೌಲಭ್ಯಗಳು ಕಾರಣ. ಆದ್ದರಿಂದ ಅದೇ ರೀತಿ ಇಲ್ಲಿಯು ಸೌಕರ್ಯ ಲಭಿಸಬೇಕು~ ಎಂದು ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಕರ್ನಾಟಕದ ಬಿ.ಸಿ. ರಮೇಶ್ ಅಭಿಪ್ರಾಯ ಪಟ್ಟರು.

`ಕಬಡ್ಡಿ ಆಟಗಾರರಿಗೆ ಖಾಸಗಿ ಹಾಗೂ ಸರ್ಕಾರಿ ಕೋಟಾದ ಅಡಿಯಲ್ಲಿ ಸಾಕಷ್ಟು ಉದ್ಯೋಗದ ಅವಕಾಶಗಳಿವೆ. ಆದ್ದರಿಂದ ಯುವ ಆಟಗಾರರು ಈ ಕ್ರೀಡೆಯತ್ತ ಹೆಚ್ಚು ಗಮನ ಹರಿಸುವುದು ಹಾಗೂ ಆಸಕ್ತಿ ಬೆಳಸಿಕೊಳ್ಳುವುದು ಅಗತ್ಯವಿದೆ. ಅದಕ್ಕಾಗಿ ಯುವ ಆಟಗಾರರಿಗೆ ಹಿರಿಯರು ಪ್ರೋತ್ಸಾಹ ನೀಡಬೇಕು. ಆಗಲೇ ಈ ಕ್ರೀಡೆಯು ಎಲ್ಲ ಮಟ್ಟದಲ್ಲಿ ಬೆಳೆದು ನಿಲ್ಲಲು ಸಾಧ್ಯವಾಗುತ್ತದೆ~ ಎನ್ನುತ್ತಾರೆ ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.