ADVERTISEMENT

ರಾಜ್ಯದ ರಾಜೇಶ್ವರಿ, ವನಿತಾಗೆ ಸ್ಥಾನ

ಮಹಿಳಾ ಕ್ರಿಕೆಟ್‌: ದ.ಆಫ್ರಿಕಾ ಎದುರಿನ ಸರಣಿಗೆ ಭಾರತ ತಂಡ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2014, 19:30 IST
Last Updated 4 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ನವೆಂಬರ್ 12 ರಿಂದ ದಕ್ಷಿಣ ಆಫ್ರಿಕಾದ ಎದುರು  ನಡೆಯುವ  ಟೆಸ್ಟ್‌ ಸರಣಿಗೆ ಮಂಗಳವಾರ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದ್ದು ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್‌ ಮತ್ತು ವಿ.ಆರ್‌. ವನಿತಾ ಸ್ಥಾನ ಪಡೆದಿದ್ದಾರೆ.

ಭಾರತ ತಂಡ  ಪ್ರವಾಸಿ ದ.ಆಫ್ರಿಕಾ ವಿರುದ್ಧ ಏಕೈಕ ಟೆಸ್ಟ್‌ ಮತ್ತು ಟ್ವೆಂಟಿ–20 ಹಾಗೂ  ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ದ.ಆಫ್ರಿಕಾ ತಂಡ ಪ್ರವಾಸದ ಆರಂಭದಲ್ಲಿ (ನ.12) ಬೆಂಗ ಳೂರು ಸಮೀಪವಿರುವ ಆಲೂರಿನಲ್ಲಿ  ನಡೆಯುವ ಭಾರತ ‘ಎ’ ಎದುರಿನ ಎರಡು ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ.

ನವೆಂಬರ್‌ 16 ರಂದು ಮೈಸೂರಿನಲ್ಲಿ  ಟೆಸ್ಟ್‌ ಪಂದ್ಯ ನಡೆಯಲಿದೆ. ಟೆಸ್ಟ್‌ ಮುಗಿದ ಕೂಡಲೇ  ಏಕದಿನ ಸರಣಿ ಆರಂಭವಾಗಲಿದ್ದು, ಇದಕ್ಕೆ ಮುನ್ನ  ಭಾರತ ‘ಎ’ ವಿರುದ್ಧದ ಏಕದಿನ  ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯ ನ.22ರಂದು ಬೆಂಗಳೂರಿನಲ್ಲಿ  ನಿಗದಿಯಾಗಿದೆ.

ಏಕದಿನ ಸರಣಿಯ ಮೂರು ಮತ್ತು ಏಕೈಕ ಟ್ವೆಂಟಿ–20 ಪಂದ್ಯ  ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜರುಗಲಿವೆ.
ಏಕದಿನ ಪಂದ್ಯಗಳು ಕ್ರಮವಾಗಿ ನವೆಂಬರ್‌ 24, 26 ಮತ್ತು 28 ಹಾಗೂ ಟ್ವೆಂಟಿ–20 ಪಂದ್ಯ ನ. 30ರಂದು ಆಯೋಜನೆಗೊಂಡಿವೆ.
ಮಿಥಾಲಿ ರಾಜ್‌ 15 ಸದಸ್ಯರ ಟೆಸ್ಟ್‌ ತಂಡವನ್ನು ಮುನ್ನಡೆಸಲಿದ್ದರೆ,  ಗೌಹರ್‌ ಸುಲ್ತಾನ ಎರಡು ದಿನಗಳ ಅಭ್ಯಾಸ ಪಂದ್ಯ ಹಾಗೂ  ಸ್ಮೃತಿ ಮಂದಾನ ಏಕದಿನ ಅಭ್ಯಾಸ ಪಂದ್ಯದಲ್ಲಿ ಭಾರತ ‘ಎ’ ತಂಡದ ಸಾರಥ್ಯ ವಹಿಸಲಿದ್ದಾರೆ.

ಭಾರತ ಟೆಸ್ಟ್‌ ತಂಡ ಇಂತಿದೆ: ಮಿಥಾಲಿ ರಾಜ್‌ (ನಾಯಕಿ), ಸ್ಮೃತಿ ಮಂದಾನ, ಶಿಖಾ ಪಾಂಡೆ, ಎನ್‌. ನಿರಂಜನಾ, ಎಂ.ಡಿ.ತಿರುಶ್‌ ಕಾಮಿನಿ, ಜೂಲನ್‌ ಗೋಸ್ವಾಮಿ, ಪೂನಂ ರೌತ್‌, ಹರ್ಮನ್‌ಪ್ರೀತ್ ಕೌರ್‌, ಶುಭಲಕ್ಷ್ಮಿ ಶರ್ಮಾ, ಏಕ್ತಾ ಬಿಸ್ತ್‌, ರಾಜೇಶ್ವರಿ ಗಾಯಕ್ವಾಡ್‌, ಸುಷ್ಮಾ ವರ್ಮಾ, ಪೂನಂ ಯಾದವ್‌, ಸ್ವಾಗತಿಕಾ ರತ್‌ ಮತ್ತು ವಿ.ಆರ್‌. ವನಿತಾ. ಭಾರತ ’ಎ’ (ಎರಡು ದಿನಗಳ ಅಭ್ಯಾಸ ಪಂದ್ಯಕ್ಕೆ): ಗೌಹರ್ ಸುಲ್ತಾನ (ನಾಯಕಿ), ಆರ್‌.ಕಲ್ಪನಾ, ದೀಪ್ತಿ ಶರ್ಮಾ, ವಿ.ಆರ್‌.ವನಿತಾ, ಪರಮಿತಾ ರಾಯ್‌, ಪ್ರೀತಿ ಬೋಸ್‌, ದೇವಿಕಾ ವೈದ್ಯ, ಸ್ನೇಹಾ ರಾಣಾ, ಸ್ವಾಗತಿಕಾ ರತ್‌, ಅನನ್ಯಾ ಉಪೇಂದ್ರನ್‌, ಮೇಘನಾ ಸಿಂಗ್‌, ವೈಶಾಲಿ ಮಾಥುರ್‌, ವೇದಾ ಕೃಷ್ಣಮೂರ್ತಿ ಮತ್ತು ತೇಜಲ್‌ ಹಸಾಬ್ನಿಸ್‌. ಭಾರತ ‘ಎ’ (ಏಕದಿನ ಅಭ್ಯಾಸ): ಸ್ಮೃತಿ ಮಂದಾನಾ (ನಾಯಕಿ), ಶ್ವೇತಾ ವರ್ಮಾ, ಸ್ನೇಹಾ ಮೋರೆ, ಸ್ನೇಹಾ ರಾಣಾ, ದೇವಿಕಾ ವೈದ್ಯ, ಮನಾಲಿ ದಕ್ಷಿಣಿ, ಸೈಕಾ ಐಸಾಕ್‌, ತನುಶ್ರೀ ಸರ್ಕಾರ್‌, ಹುಮೇರಾ ಕಾಜಿ, ರಿಜು ಸಹಾ, ಕೆ.ರಕ್ಷಿತಾ, ಸೋನಿ ಯಾದವ್‌, ದೀಪ್ತಿ ಶರ್ಮಾ ಮತ್ತು ಸುಶ್ರೀ ಪ್ರಧಾನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.