ADVERTISEMENT

ರಾಬಿನ್‌ ಉತ್ತಪ್ಪ ಶತಕ

ಕ್ರಿಕೆಟ್: ಭಾರತ ‘ಎ’ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 20:09 IST
Last Updated 8 ಸೆಪ್ಟೆಂಬರ್ 2013, 20:09 IST
ರಾಬಿನ್‌ ಉತ್ತಪ್ಪ
ರಾಬಿನ್‌ ಉತ್ತಪ್ಪ   

ವಿಶಾಖಪಟ್ಟಣ (ಪಿಟಿಐ): ರಾಬಿನ್‌ ಉತ್ತಪ್ಪ (103) ಗಳಿಸಿದ ಸೊಗಸಾದ ಶತಕದ ನೆರವಿನಿಂದ ಭಾರತ ‘ಎ’ ತಂಡ ನ್ಯೂಜಿಲೆಂಡ್‌ ‘ಎ’ ವಿರುದ್ಧದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಆರು ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಡಾ. ವೈ.ಎಸ್‌. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪ್ರವಾಸಿ ತಂಡ 49.4 ಓವರ್‌ಗಳಲ್ಲಿ 257 ರನ್‌ ಗಳಿಸಿತು. ತಲಾ ಮೂರು ವಿಕೆಟ್‌ ಪಡೆದ ಧವಳ್‌ ಕುಲಕರ್ಣಿ, ರಾಹುಲ್‌ ಶರ್ಮ ಮತ್ತು ಅಶೋಕ್‌ ಮೆನಾರಿಯ ಎದುರಾಳಿ ತಂಡಕ್ಕೆ ಕಡಿವಾಣ ತೊಡಿಸಿದರು.

ಈ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಪ್ಪ ಮತ್ತು ಉನ್ಮುಕ್ತ್‌ ಚಾಂದ್‌ (94) ಅತ್ಯುತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಇವರು 178 ರನ್‌ಗಳನ್ನು ಸೇರಿಸಿದರು. 114 ಎಸೆತಗಳನ್ನು ಎದುರಿಸಿದ ಕೊಡಗಿನ ಆಟಗಾರ 8 ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನು ಸಿಡಿಸಿದರು. ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಚಾಂದ್‌ 88 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಆರು ಸಿಕ್ಸರ್‌ಗಳನ್ನು ಸಿಡಿಸಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌ ‘ಎ’: 49.4 ಓವರ್‌ಗಳಲ್ಲಿ 257 (ಆ್ಯಂಟನ್‌ ಡೇವ್‌ಸಿಚ್‌ 48, ಕಾರ್ಲ್‌ ಸಶೋಪಾ 45, ಡ್ಯಾರಿಲ್‌ ಮಿಷೆಲ್‌ 51, ಇಂದರ್‌ಬಿರ್‌ ಸಿಂಗ್ ಸೋಧಿ 29, ಧವಳ್‌ ಕುಲಕರ್ಣಿ 38ಕ್ಕೆ 3,  ರಾಹುಲ್‌ ಶರ್ಮ 45ಕ್ಕೆ 3, ಅಶೋಕ್‌ ಮೆನಾರಿಯ 43ಕ್ಕೆ 3)
ಭಾರತ ‘ಎ’: 44.1 ಓವರ್‌ಗಳಲ್ಲಿ 4 ವಿಕೆಟ್‌ಗೆ 261 (ರಾಬಿನ್‌ ಉತ್ತಪ್ಪ 103, ಉನ್ಮುಕ್ತ್‌ ಚಾಂದ್‌ 94, ಆದಿತ್ಯ ತಾರೆ ಔಟಾಗದೆ 37, ಆ್ಯಡಮ್‌ ಮಿಲ್ನ್‌ 43ಕ್ಕೆ 3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.