ADVERTISEMENT

ರಾಷ್ಟ್ರೀಯ ಕ್ರೀಡಾಕೂಟಕ್ಕೆ ಸಜ್ಜಾಗದ ಗೋವಾ

ಪಿಟಿಐ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ಮನೋಹರ್‌ ಪರಿಕ್ಕರ್
ಮನೋಹರ್‌ ಪರಿಕ್ಕರ್   

ಪುಣೆ: ಗೋವಾದಲ್ಲಿ ನಡೆಸಲು ಉದ್ದೇಶಿಸಿದ್ದ ರಾಷ್ಟ್ರೀಯ ಕ್ರೀಡಾಕೂಟವನ್ನು ಮತ್ತೆ ಮುಂದೂಡುವ ಸಾಧ್ಯತೆ ಇದೆ.

2016ರ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಕೂಟವನ್ನು ಈ ವರ್ಷದ ನವೆಂಬರ್‌ಗೆ ಮುಂದೂಡಲಾಗಿತ್ತು. ಆದರೆ ಕೂಟಕ್ಕೆ ಬೇಕಾದ ಮೂಲ
ಸೌಕರ್ಯಗಳನ್ನು ನಿರ್ಮಿಸಲು ಇನ್ನೂ ಒಂದು ವರ್ಷ ಬೇಕಾದೀತು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್ ಕ್ರೀಡಾಪ್ರಿಯರಿಗೆ ನಿರಾಸೆ ಉಂಟುಮಾಡಿದ್ದಾರೆ.

‘ಕ್ರೀಡಾಕೂಟ ಏರ್ಪಡಿಸಲು ಗೋವಾ ಸಿದ್ಧವಿದೆ. ಆದರೆ ಮೂಲಸೌಲಭ್ಯಗಳನ್ನು ಇನ್ನಷ್ಟೇ ಅಭಿವೃದ್ಧಿ ಪಡಿಸಬೇಕಾಗಿದೆ. ವೆಚ್ಚವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಸರ್ಕಾ ರದ ಉದ್ದೇಶ’ ಎಂದು ಪರಿಕ್ಕರ್‌ ಹೇಳಿದರು.

ADVERTISEMENT

‘ಮೂಲಸೌಲಭ್ಯಗಳಿಗಾಗಿ ಮೊದಲು ಅಂದಾಜು ಮಾಡಿದ್ದು ₹ 570 ಕೋಟಿ. ಇದನ್ನು ₹ 400 ಕೋಟಿಗೆ ಇಳಿಸ ಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ ಸ್ವಲ್ಪ ಕಾಲಾವಕಾಶ ಲಭಿಸಿದರೆ ವೆಚ್ಚವನ್ನು ₹ 350 ಕೋಟಿಗೆ ಮಿತಿಗೊಳಿಸಬಹುದು’ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.