ADVERTISEMENT

ರೇಡಿಯಂಟ್‍ಗೆ ಮಣಿದ ಬಿಎಫ್‍ಸಿ

ಪಿಟಿಐ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ಬಿಎಫ್‌ಸಿಯ ಥೊಂಕೊಸಿಮ್ ಹಕಿಪ್‌ (ಬಿಳಿ ಪೋಷಾಕು) ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದ ಕ್ಷಣ ಬಿಎಫ್‌ಸಿ ಮೀಡಿಯಾ ಚಿತ್ರ
ಬಿಎಫ್‌ಸಿಯ ಥೊಂಕೊಸಿಮ್ ಹಕಿಪ್‌ (ಬಿಳಿ ಪೋಷಾಕು) ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದ ಕ್ಷಣ ಬಿಎಫ್‌ಸಿ ಮೀಡಿಯಾ ಚಿತ್ರ   

ಮಾಲಿ, ಮಾಲ್ಡಿವ್ಸ್‌ (ಪಿಟಿಐ): ರಕ್ಷಣಾ ವಿಭಾಗದಲ್ಲಿ ವೈಫಲ್ಯ ಕಂಡ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‍ಸಿ) ತಂಡ ಎಎಫ್‍ಸಿ ಕಪ್‌ನ ಬುಧವಾರದ ಪಂದ್ಯದಲ್ಲಿ ನ್ಯೂ ರೇಡಿಯಂಟ್ ತಂಡಕ್ಕೆ ಮಣಿಯಿತು.

ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ‘ಇ' ಗುಂಪಿನ ಪಂದ್ಯದಲ್ಲಿ ಬಿಎಫ್‍ಸಿ 0-2 ಗೋಲುಗಳಿಂದ ಸೋತಿತು. ಇದರಿಂದಾಗಿ ಮಾಲ್ಡಿವ್ಸ್‌
ನಲ್ಲಿ ಅಜೇಯ ಗೆಲುವಿನ ಓಟ ಮುಂದುವರಿಸುವ ಕನಸು ಭಗ್ನವಾ ಯಿತು. ಆತಿಥೇಯ ತಂಡದ ಅಲಿ ಫಜೀರ್ (30ನೇ ನಿಮಿಷ) ಮತ್ತು ಅಲಿ ಅಶ್ಫಾಕ್ (47ನೇ ನಿ) ಗೋಲು ಗಳಿಸಿ ಚೆಟ್ರಿ ಬಳಗಕ್ಕೆ ಪೆಟ್ಟು ನೀಡಿದರು.

ಈ ಜಯ ದೊಂದಿಗೆ ರೇಡಿಯಂಟ್ ಆಡಿದ ನಾಲ್ಕು ಪಂದ್ಯ ಗಳಿಂದ ಒಂಬತ್ತು ಪಾಯಿಂಟ್‌ ಸಂಪಾ ದಿಸಿತು. ಬಿಎಫ್‌ಸಿ ಕೂಡ ನಾಲ್ಕು ಪಂದ್ಯ ಗಳನ್ನು ಆಡಿದ್ದು ಒಂಬತ್ತು ಪಾಯಿಂಟ್ ಹೊಂದಿದೆ.

ADVERTISEMENT

ಸೂಪರ್ ಕಪ್ ಗೆದ್ದ ಹುಮ್ಮಸ್ಸಿನಲ್ಲಿ ಇಲ್ಲಿಗೆ ಬಂದಿದ್ದ ಬಿಎಫ್‌ಸಿ, ಪಂದ್ಯದ ಕೊನೆಯ ಹಂತದಲ್ಲಿ ಲಭಿಸಿದ ಅವಕಾಶಗಳನ್ನು ಕೈಚೆಲ್ಲಿತು. ಪ್ರವಾಸಿ ತಂಡದ ಪ್ರಬಲ ದಾಳಿಯ ನಡುವೆಯೂ ಅಲಿ ಫಸಿರ್ ಮಿಂಚಿದರು. ಪ್ರಥಮಾರ್ಧದಲ್ಲಿ ಅವರು ಆತಿಥೇಯರಿಗೆ ಮುನ್ನಡೆ ಗಳಿಸಿಕೊಟ್ಟರು. ಸಮಬಲ ಸಾಧಿಸಲು ಬಿಎಫ್‌ಸಿ ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ದ್ವಿತೀಯಾರ್ಧದಲ್ಲಿ ಬಿಎಫ್‌ಸಿ ಪ್ರಯತ್ನ ಹೆಚ್ಚಿಸಿತು. ಆದರೆ 47ನೇ ನಿಮಿಷದಲ್ಲಿ ರೇಡಿಯಂಟ್‌ ತಿರುಗೇಟು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.