ADVERTISEMENT

ವಿಶ್ವ ದಾಖಲೆ ಸರಿಗಟ್ಟಿದ ವೊನ್ನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2016, 19:45 IST
Last Updated 10 ಜನವರಿ 2016, 19:45 IST

ಆಲ್ಟೆನ್‌ಮಾರ್ಕೆಟ್‌ ಇಮ್‌ ಪೊಂಗಾವು, ಆಸ್ಟ್ರಿಯಾ (ಐಎಎನ್‌ಎಸ್‌): ಅಮೆರಿಕದ ಸ್ಕೀಯಿಂಗ್‌ ಸ್ಪರ್ಧಿ ಲಿಂಡ್ಸೆ ವೊನ್ನ ಇಲ್ಲಿ ನಡೆದ ವಿಶ್ವಕಪ್‌ ಡೌನ್‌ಹಿಲ್‌ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದು ವಿಶ್ವದಾಖಲೆ ಸರಿಗಟ್ಟಿದ್ದಾರೆ.

ಶನಿವಾರ ನಡೆದ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ವೊನ್ನ 2 ನಿಮಿಷ 11.17 ಸೆಕೆಂಡು ಗಳಲ್ಲಿ ಗುರಿ ಮುಟ್ಟಿ ವೃತ್ತಿ ಜೀವನದ 36ನೇ ಪ್ರಶಸ್ತಿ ಎತ್ತಿಹಿಡಿದರು. ಈ ಮೂಲಕ ಆಸ್ಟ್ರಿಯಾದ  ಅನ್ನೆ ಮೇರಿ ಮೋಸರ್‌ ಪ್ರೊಯೆಲ್‌ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು. ಅನ್ನೆಮೇರಿ 1980ರಲ್ಲಿ ನಡೆದ ವಿಶ್ವಕಪ್‌ ಡೌನ್‌ಹಿಲ್‌ನಲ್ಲಿ 36ನೇ ಬಾರಿ ಪ್ರಶಸ್ತಿ ಗೆದ್ದು ದಾಖಲೆ ಬರೆದಿದ್ದರು.

ವೊನ್ನ  ಅವರು ಸೂಪರ್‌ –ಜಿ ವಿಭಾಗದಲ್ಲಿ 25 ಗೆಲುವು ಗಳಿಸಿದ ವಿಶ್ವದ ಏಕೈಕ ಸ್ಕೀಯಿಂಗ್‌ ಸ್ಪರ್ಧಿ ಎಂಬ ಶ್ರೇಯವನ್ನೂ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.