ADVERTISEMENT

ವೈಎಸ್‌ಆರ್ ಟೂರ್ನಿ; ಕರಾವಳಿ ಕ್ರಿಕೆಟರ್ಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಬೆಂಗಳೂರು: ಯಂಗ್ ಲಯನ್ಸ್ ತಂಡದವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಶ್ರಯದ ವೈ.ಎಸ್.ಆರ್. ಕ್ರಿಕೆಟ್ ಟೂರ್ನಿಯ ಗುರುವಾರದ ಪಂದ್ಯದಲ್ಲಿ 116 ರನ್‌ಗಳ ಅಂತರದಿಂದ ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟ್ ಕ್ಲಬ್ ವಿರುದ್ಧ ಗೆಲುವು ಪಡೆದರು.

ಇನ್ನಿತರ ಪಂದ್ಯಗಳಲ್ಲಿ ಕರಾವಳಿ ಕ್ರಿಕೆಟರ್ಸ್, ಬೆಂಗಳೂರು ಸ್ಪೋರ್ಟ್ಸ್ ಕ್ಲಬ್, ಮಲ್ಲೇಶ್ವರ ಯುನೈಟೆಡ್ ಕ್ರಿಕೆಟ್ ಕ್ಲಬ್ ಹಾಗೂ ಜೈದೂರ್ ಕ್ರಿಕೆಟರ್ಸ್ ತಂಡದವರು ಜಯ ಸಾಧಿಸಿದರು.

ಸಂಕ್ಷಿಪ್ತ ಸ್ಕೋರ್: ಯಂಗ್ ಲಯನ್ಸ್ ಕ್ಲಬ್: 47 ಓವರುಗಳಲ್ಲಿ 282 (ಇಮ್ಯಾನ್ಯೂಯಲ್ ವಸಂತ್ ಕುಮಾರ್ 30, ಎಂ.ಮಹೇಶ್ 40, ಡಿ.ಸಂತೋಷ್ ಕುಮಾರ್ 48, ಗಿರಿಧರ್ ಕೊಪ್ಪೀಕರ್ 37, ಸೌರಭ್ ಪಾಟೀಲ್ 30, ರಾಕೇಶ್ 37; ಅನಿಲ್ ಕುಮಾರ್ 52ಕ್ಕೆ2, ಪ್ರಕಾಶ್ 48ಕ್ಕೆ3, ಹರೀಷ್ 31ಕ್ಕೆ2); ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟ್ ಕ್ಲಬ್: 40.4 ಓವರುಗಳಲ್ಲಿ 166 (ವೆಂಕಟೇಶ್ 28, ಸಿ.ಹರ್‌ಹಿತ್ 28, ಅನಿಲ್ ಕುಮಾರ್ 25; ಕೆ.ಆರ್.ಕೃಷ್ಣ ಕುಂಬ 28ಕ್ಕೆ4, ರಾಕೇಶ್ 39ಕ್ಕೆ2, ಗಿರಿಧರ್ ಕೊಪ್ಪೀಕರ್ 14ಕ್ಕೆ2); ಫಲಿತಾಂಶ: ಯಂಗ್ ಲಯನ್ಸ್‌ಗೆ 116 ರನ್‌ಗಳ ಜಯ.

ADVERTISEMENT

ಜಾನ್ಸನ್ ಕ್ರಿಕೆಟ್ ಕ್ಲಬ್: 34 ಓವರುಗಳಲ್ಲಿ 165 (ಎಸ್.ಸೈಫ್ 65, ಸಚಿನ್ 32; ದಿಲೀಪ್ ಕುಮಾರ್ 36ಕ್ಕೆ4); ಕರಾವಳಿ ಕ್ರಿಕೆಟರ್ಸ್: 22.5 ಓವರುಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 168 (ಪರಮೇಶ್ 54, ಬಿ.ಎಂ.ರಾಹುಲ್ 23, ಬಿ.ರಾಹುಲ್ 45, ದಿಲೀಪ್ ಕುಮಾರ್ 25; ಎಸ್.ಸೈಫ್ 54ಕ್ಕೆ3); ಫಲಿತಾಂಶ: ಕರಾವಳಿ ಕ್ರಿಕೆಟರ್ಸ್‌ಗೆ 6 ವಿಕೆಟ್‌ಗಳ ಗೆಲುವು.

ಶ್ರೀ ಜಯಚಾಮರಾಜೇಂದ್ರ ಕ್ರಿಕೆಟ್ ಕ್ಲಬ್: 47.5 ಓವರುಗಳಲ್ಲಿ 220 (ಧೀರಜ್ 72, ಎಸ್.ಪ್ರಶಾಂತ್ 46, ರಜತ್ ಎಸ್. ದೇವ್ 52; ಪ್ರವೀಣ್ 36ಕ್ಕೆ5, ಹರ್ಷಿತ್ ಅರಸ್ 40ಕ್ಕೆ2); ಬೆಂಗಳೂರು ಸ್ಪೋರ್ಟ್ಸ್ ಕ್ಲಬ್: 43.2 ಓವರುಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 221 (ಸಂತೋಷ್ ಕುಮಾರ್ 55, ಬಿ.ಮಂಜುನಾಥ್ ಭಟ್ ಔಟಾಗದೆ 76, ಟಿ.ಜಿ.ಉದಯ್ 27, ಅನಿಲ್ ಔಟಾಗದೆ 34); ಫಲಿತಾಂಶ: ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌ಗೆ 6 ವಿಕೆಟ್‌ಗಳ ಯಶ.

ಗಾಂಧೀನಗರ ಕ್ರಿಕೆಟರ್ಸ್: 32 ಓವರುಗಳಲ್ಲಿ 136 (ಸುರೇಶ್ 20, ವಿನಯ್ ರಾಹು 39, ಕೆ.ನರೇಶ್ ಕುಮಾರ್ 37; ಅಭಯ್ 11ಕ್ಕೆ3, ಶಾಂಥನು 33ಕ್ಕೆ2, ಜಫರ್ 17ಕ್ಕೆ2, ಚೇತನ್ 31ಕ್ಕೆ3); ಮಲ್ವೇಶ್ವರ ಯುನೈಟೆಡ್ ಕ್ರಿಕೆಟ್ ಕ್ಲಬ್: 25.1 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 138 (ವರುಣ್ 44, ಪವನ್ 44; ವಿನಯ್ 51ಕ್ಕೆ3, ಮಾರ್ಟಿನ್ 37ಕ್ಕೆ3); ಫಲಿತಾಂಶ: ಮಲ್ವೇಶ್ವರ ತಂಡಕ್ಕೆ 2 ವಿಕೆಟ್‌ಗಳ ವಿಜಯ.

ಜೈದೂರ್ ಕ್ರಿಕೆಟರ್ಸ್: 46.3 ಓವರುಗಳಲ್ಲಿ 206 (ನಿಶ್ಚಿತ್ 45, ಅಮನ್‌ರಾಜ್ 23, ಚೇತನ್ 31, ಐ.ಪೃಥ್ವಿರಾಜ್ 24, ಶರಣ್ 31; ಕಿರಣ್ 14ಕ್ಕೆ2, ಜಾರ್ಜ್ 30ಕ್ಕೆ2, ಪ್ರದೀಪ್ 30ಕ್ಕೆ4); ಜಯನಗರ ಯುನೈಟೆಡ್ ಕ್ರಿಕೆಟರ್ಸ್: 45.1 ಓವರುಗಳಲ್ಲಿ 163 (ಪಿ.ಎಂ.ವೆಂಕಟೇಶ್ 25, ಎಂ.ದಾಸ್ 25, ದೀಪಕ್ 39, ರಂಜನ್ ವೆಂಕಟೇಶ್ 30, ಕಿರಣ್ ನಾಯರ್ 22; ಚೇತನ್ 20ಕ್ಕೆ5); ಫಲಿತಾಂಶ: ಜೈದೂರ್ ಕ್ರಿಕೆಟರ್ಸ್‌ಗೆ 43 ರನ್‌ಗಳ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.