ADVERTISEMENT

ಶಿಲ್ಲಿಂಗ್‌ಫೋರ್ಡ್‌ಗೆ ಮತ್ತೆ ಆಡಲು ಅವಕಾಶ

​ಪ್ರಜಾವಾಣಿ ವಾರ್ತೆ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ಸೇಂಟ್ ಜಾನ್ಸ್, ಆ್ಯಂಟಿಗುವಾ (ಪಿಟಿಐ): ಅನುಮಾನಾಸ್ಪದ ಬೌಲಿಂಗ್ ಶೈಲಿ ಹೊಂದಿದ್ದಾರೆ ಎನ್ನುವ ದೂರು ಎದುರಿಸಿದ್ದ ವೆಸ್ಟ್ ಇಂಡೀಸ್ ಆಫ್ ಸ್ಪಿನ್ ಬೌಲರ್ ಶೇನ್ ಶಿಲ್ಲಿಂಗ್  ಫೋರ್ಡ್ ಅವರಿಗೆ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಹಸಿರು ನಿಶಾನೆ ಸಿಕ್ಕಿದೆ.

ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ದೇಹ ಚಲನಾ ಶಾಸ್ತ್ರ ವಿಭಾಗದಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಶಿಲ್ಲಿಂಗ್‌ಫೋರ್ಡ್ ಅವರ ಶೈಲಿಯು ನಿಯಮ ಬಾಹಿರವಾದದ್ದಲ್ಲ ಎನ್ನುವುದು ಸ್ಪಷ್ಟವಾಗಿದೆ.

ಬಾರ್ಬಡಾಸ್‌ನ ಉನ್ನತ ಪ್ರದರ್ಶನ ಕೇಂದ್ರದಲ್ಲಿ ತಮ್ಮ ಬೌಲಿಂಗ್ ಶೈಲಿಯನ್ನು ತಿದ್ದಿಕೊಳ್ಳಲು ಸುಮಾರು ಒಂದು ತಿಂಗಳ ಕಾಲ ಶ್ರಮವಹಿಸಿದ್ದ ವಿಂಡೀಸ್ ಸ್ಪಿನ್ನರ್ ಚೆಂಡನ್ನು ಎಸೆಯುವ ರೀತಿ ಈಗ ಸರಿಯಾಗಿದೆ ಎನ್ನುವ ವರದಿ ಬಂದಿದೆ. ಆದ್ದರಿಂದ ಅವರಿಗೆ ಮತ್ತೆ ಆಡಲು ಅವಕಾಶದ ಬಾಗಿಲು ತೆರೆದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.