ADVERTISEMENT

ಸ್ಕ್ವಾಷ್: ಪ್ರೀ ಕ್ವಾರ್ಟರ್‌ಫೈನಲ್‌ಗೆ ಭಾರತ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST

ನವದೆಹಲಿ (ಪಿಟಿಐ): ಭಾರತ ತಂಡದವರು ಫ್ರಾನ್ಸ್‌ನ ಮಲ್‌ಹೌಸ್‌ನಲ್ಲಿ ನಡೆಯುತ್ತಿರುವ ಪುರುಷರ ವಿಶ್ವ ಸ್ಕ್ವಾಷ್ ತಂಡ ವಿಭಾಗದ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡ 3-0ರಲ್ಲಿ ಫಿನ್ಲೆಂಡ್ ತಂಡವನ್ನು ಪರಾಭವಗೊಳಿಸಿತು. ಈ ಪಂದ್ಯಕ್ಕೆ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿತ್ತು. ಹರೀಂದರ್ ಪಾಲ್ ಸಂಧು ಸ್ಥಾನದಲ್ಲಿ ರಮಿತ್ ಟಂಡನ್ ಆಡಿದರು.

ಮೊದಲ ಸುತ್ತಿನ ಪಂದ್ಯದಲ್ಲಿ ಟಂಡನ್ 11-4, 11-6, 11-13, 11-4ರಲ್ಲಿ ಹೆನ್ರಿಕ್ ಮುಸ್ಟೊನೆನ್ ಎದುರು ಗೆದ್ದರು. ಎರಡನೇ ಪಂದ್ಯದಲ್ಲಿ ಮಹೇಶ್ 11-4, 11-7, 11-7ರಲ್ಲಿ ಮತಿಯಾಸ್ ತೌಮಿ ವಿರುದ್ಧ ಜಯ ಗಳಿಸಿ 2-0 ಮುನ್ನಡೆಗೆ ಕಾರಣರಾದರು. ಬಳಿಕ ಸೌರವ್ ಘೋಷಾಲ್ 11-7, 11-2, 7-11, 11-9ರಲ್ಲಿ ಒಲಿ ತೌಮಿನೆನ್ ಎದುರು ಜಯ ಗಳಿಸಿದರು.

ಈ ಟೂರ್ನಿಯಲ್ಲಿ ಎಂಟನೇ ಸ್ಥಾನ ಪಡೆದಿರುವ ಭಾರತ ಹಿಂದಿನ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿತ್ತು. ಆದರೆ ಈ ಪಂದ್ಯದಲ್ಲಿ ದೊಡ್ಡ ಗೆಲುವು ಲಭಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.