ಕೋಲ್ಕತ್ತ (ಪಿಟಿಐ): ಆದಿತ್ಯ ಮೆಹ್ತಾ ಇಲ್ಲಿ ಮುಕ್ತಾಯಗೊಂಡ ಎರಡನೇ ಕೋಲ್ಕತ್ತ ಓಪನ್ ಆಹ್ವಾನಿತ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಆದಿತ್ಯ 71–08, 53–24, 90–00, 71–24, 12–83, 05–87, 74–48, 66–51 ರಲ್ಲಿ ಕಮಲ್ ಚಾವ್ಲಾ ಅವರನ್ನು ಮಣಿಸಿದರು.
ಮೊದಲಾರ್ಧದ ಆಟದ ವೇಳೆ 4–0 ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಆದಿತ್ಯ ಎದುರಾಳಿ ಆಟಗಾರನ ಮೇಲೆ ಒತ್ತಡ ಹೇರಿದರು. ನಂತರ ತೀವ್ರ ಪೈಪೋಟಿ ನೀಡಿದ ಚಾವ್ಲಾ ಎರಡು ಫ್ರೇಮ್‌ನಲ್ಲಿ ಜಯಗಳಿಸಿದರಾದರೂ ಸೋಲಿನಿಂದ ಪಾರಾಗಲು ಆಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.