ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಪೋಸ್ಟಲ್ ತಂಡದವರು ತಿರುವಾಂಕೂರ ಕಪ್ ಹಾಕಿ ಟೂರ್ನಿಯ ಗುರುವಾರದ ಪಂದ್ಯದಲ್ಲಿ 6-0 ಗೋಲುಗಳಿಂದ ಆರ್ಡಬ್ಲ್ಯುಎಫ್ ತಂಡವನ್ನು ಸೋಲಿಸಿದರು.
ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಏಕಪಕ್ಷೀಯವಾಗಿ ಕೊನೆಗೊಂಡಿತು.
ವಿಜಯಿ ತಂಡದ ಪ್ರಕಾಶ್ 3ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಈ ತಂಡದ ಉಳಿದ ಗೋಲುಗಳನ್ನು ನವೀನ್ ಶೇಖರ್ (26ನೇ ನಿ.), ವಿನಾಯಕ್ ಬಿಜ್ವಾಡ್ (29ನೇ ನಿ.), ರಮೇಶ್ (40 ಹಾಗೂ 59ನೇ ನಿ.) ಮತ್ತು ನವೀನ್ ಕುಮಾರ್ (56ನೇ ನಿ.) ಕಲೆ ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.