ADVERTISEMENT

19ರಿಂದ ಚಿಕ್ಕಮಗಳೂರಿನಲ್ಲಿ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 19:30 IST
Last Updated 13 ಡಿಸೆಂಬರ್ 2013, 19:30 IST

ಬೆಂಗಳೂರು: ‘ಇಂಡಿಯನ್‌ ನ್ಯಾಷನಲ್‌ ರ್‍್ಯಾಲಿ ಚಾಂಪಿಯನ್‌ಷಿಪ್‌’ ನ (ಐಎನ್‌ ಆರ್‌ಸಿ) ಐದನೇ ಮತ್ತು ಕೊನೆಯ ಸುತ್ತು ಡಿಸೆಂಬರ್‌ 19ರಿಂದ 21ರ ವರೆಗೆ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.

ಅಮಿತ್‌ರಾಜಿತ್‌ ಘೋಷ್‌ ಈಗಾ ಗಲೇ ಪ್ರಶಸ್ತಿ ಭದ್ರಪಡಿಸಿ ಕೊಂಡಿದ್ದು, ಈ ರ್‍್ಯಾಲಿಯಲ್ಲಿ ಅವರು ತೋರುವ ಪ್ರದರ್ಶನ ಪ್ರಶಸ್ತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ರ್‍ಯಾಲಿ 113.50 ಕಿ.ಮೀ ವಿಶೇಷ ಹಂತಗಳು ಒಳಗೊಂಡಂತೆ ಒಟ್ಟು 218.20 ಕಿ.ಮೀ. ದೂರ ಕ್ರಮಿಸಲಿದೆ. ಮುಂದಿನ ವರ್ಷ ಏಷ್ಯಾ ಫೆಸಿಫಿಕ್‌ ರ್‍ಯಾಲಿ ಚಾಂಪಿಯನ್‌ಷಿಪ್‌ಗೆ ಭಾರತ ಆತಿಥ್ಯ ವಹಿಸಲಿರುವ ಕಾರಣ ಈ ರ್‍ಯಾಲಿ ಬಹುಮುಖ್ಯವೆನಿಸಿದೆ.

‘ರ್‍ಯಾಲಿ ಅನ್ನು ವ್ಯವಸ್ಥಿತವಾಗಿ ಸಂಘ ಟಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಿ ದ್ದೇವೆ. ಚಾಲಕರ ಕೌಶಲವನ್ನು ಕಣ್ತುಂ ಬಿಕೊಳ್ಳಲು ಇದೊಂದು ಮಹತ್ವದ ಅವಕಾಶ. ಒಟ್ಟು 41 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಚಿಕ್ಕಮಗ ಳೂರು ಮೋಟಾರ್‌ ಸ್ಪೋರ್ಟ್ಸ್‌್ ಕ್ಲಬ್‌ನ ಉಪಾಧ್ಯಕ್ಷ ಫಾರೂಕ್ ಅಹ್ಮದ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.