ADVERTISEMENT

ಈರಪ್ಪ, ಅಕ್ಷತಾ ಪ್ರಥಮ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST

ಕೊಪ್ಪಳ: ಬಾಗಲಕೋಟೆಯ ಈರಪ್ಪ ಎಚ್‌. ಯಲಗಣ್ಣನವರ, ಮಹಿಳಾ ವಿಭಾಗದಲ್ಲಿ ದಾವಣಗೆರೆಯ ಅಕ್ಷತಾ ಅರುಣೇಶ್‌ ಬಳ್ಳಾರಿ ಅವರು ನಗರದಲ್ಲಿ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಮಂಗಳವಾರ ನಡೆದ ರಾಜ್ಯಮಟ್ಟದ ಕ್ರಾಸ್‌ ಕಂಟ್ರಿ ಓಟದಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಗದಗದ ಸಂದೀಪ್‌, (ದ್ವಿತೀಯ), ತುಮಕೂರಿನ ಗುರು
ಪ್ರಸಾದ್‌ (ತೃತೀಯ), ಬೆಳಗಾವಿಯ ತಾನಾಜಿ ನಲ್ಲೂಡಿ (ನಾಲ್ಕನೇ), ಧಾರವಾಡದ ಮಹಾಂತೇಶ್‌ ಬಿಂಗಿ (5ನೇ ಸ್ಥಾನ), ಗದಗದ ಸಂದೀಪ್‌ ನವಲೇಕರ್‌ (6ನೇ ಸ್ಥಾನ) ಬಹುಮಾನ ಗಳಿಸಿದರು.

ಮಹಿಳಾ ವಿಭಾಗದಲ್ಲಿ ಧಾರವಾಡದ ಸಕ್ಕೂಬಾಯಿ (ದ್ವಿತೀಯ), ಕೊಪ್ಪಳ ಕ್ರೀಡಾ ಹಾಸ್ಟೆಲ್‌ನ ಬಾಲಮ್ಮ ಹನುಮಪ್ಪ(ತೃತೀಯ), ಗದಗದ ಮೇಘನಾ (ನಾಲ್ಕನೇ)ಗೆದ್ದರು. ಪುರುಷರ ವಿಭಾಗದಲ್ಲಿ 8 ಕಿಲೋಮೀಟರ್ಸ್, ಮಹಿಳಾ ವಿಭಾಗದಲ್ಲಿ 6ಕಿ.ಮೀ ಓಟ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.