ADVERTISEMENT

ಚಳಿಗಾಲದ ರೇಸ್‌ ಶನಿವಾರ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST

ಬೆಂಗಳೂರು: ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ರೇಸ್‌ಗಳನ್ನು ನಡೆಸಲು ಅನುಮತಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ವಂದನೆಗಳನ್ನು  ತಿಳಿಸುತ್ತಾ, 2017–18 ಚಳಿಗಾಲದ ರೇಸ್‌ಗಳು ಶನಿವಾರ, 5ನೇ ಜನವರಿಯಿಂದ ಪ್ರಾರಂಭವಾಗಲಿದ್ದು, ಶುಕ್ರವಾರ 16ನೇ ಮಾರ್ಚ್‌ ವರೆಗೆ ನಡೆಯಲಿವೆ. ಈ ಅವಧಿಯಲ್ಲಿ 15 ರೇಸ್‌ ದಿನಗಳನ್ನು ಏರ್ಪಡಿಸಲಾಗಿದೆಯೆಂದು ಬಿ.ಟಿ.ಸಿ ಅಧ್ಯಕ್ಷ ಹಾಗೂ ಹಿರಿಯ ಸ್ಟೀವರ್ಡ್‌, ವಿ.ಹರಿಮೋಹನ್‌ ನಾಯ್ಡು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸುಮಾರು ರೂ.8.80 ಕೋಟಿ ಗಳಷ್ಟು ಹಣವನ್ನು 15 ದಿನಗಳ ಚಳಿಗಾಲದ ರೇಸ್‌ಗಳಲ್ಲಿ ತೊಡಗಿಸಲಾಗುವುದು.  1000 ಮತ್ತು 2000 ಗಿನ್ನೀಸ್‌ ರೇಸ್‌ಗಳನ್ನು ಈ ಬಾರಿ ಮಂಜ್ರಿ ಸ್ಟಡ್‌ ಪ್ರಾಯೋಜಿಸುತ್ತಿದ್ದು, 11ನೇ ಫೆಬ್ರವರಿಯಂದು ನಡೆಯಲಿರುವ ಪ್ರತಿಷ್ಠಿತ ಡರ್ಬಿ ರೇಸ್‌ಗೆ ಮತ್ತು ಇನ್ನಿತರ ರೇಸ್‌ಗಳಿಗೆ ಪ್ರಾಯೋಜಕತ್ವ ಪಡೆಯಲು ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದು ವಿ.ಹರಿಮೋಹನ್‌ ನಾಯ್ಡು ತಿಳಿಸಿದರು.

ಸುಮಾರು 78 ಸವಾರರು ಮತ್ತು 37 ತರಬೇತಿದಾರರು ಅಲ್ಲದೇ ಸುಮಾರು 700 ಕುದುರೆಗಳು ಚಳಿಗಾಲದ ರೇಸ್‌ಗಳಲ್ಲಿ ಸ್ಪರ್ಧಿಸಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.