ADVERTISEMENT

ಕರ್ನಾಟಕಕ್ಕೆ ಸಮಗ್ರ ಪ್ರಶಸ್ತಿ

ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌; ರಿಧಿಮಾ ಕೂಟ ದಾಖಲೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST
ಸಮಗ್ರ ಪ್ರಶಸ್ತಿ ಗೆದ್ದ ಕರ್ನಾಟಕ ತಂಡ
ಸಮಗ್ರ ಪ್ರಶಸ್ತಿ ಗೆದ್ದ ಕರ್ನಾಟಕ ತಂಡ   

ಬೆಂಗಳೂರು: ಕರ್ನಾಟಕ ತಂಡ ಚೆನ್ನೈನ ವೆಲಾಚೆರಿಯಲ್ಲಿ ನಡೆದ 30ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.

ಕರ್ನಾಟಕ ತಂಡ ಒಟ್ಟು 1336 ಪಾಯಿಂಟ್ಸ್‌ಗಳಿಂದ ಅಗ್ರಸ್ಥಾನ ಗಳಿಸಿತು. ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿಯೂ ಕ್ರಮವಾಗಿ 626 ಮತ್ತು 710 ಪಾಯಿಂಟ್ಸ್‌ಗಳಿಂದ ಮೊದಲ ಸ್ಥಾನ ಪಡೆಯಿತು.

ಗುಂಪು 1ರ ಬಾಲಕರ ವಿಭಾಗದಲ್ಲಿ ಕರ್ನಾಟಕ ತಂಡ 189 ಪಾಯಿಂಟ್ಸ್ ಪಡೆದರೆ, ಗುಂಪು 2ರಲ್ಲಿ 218, ಗುಂಪು 3ರಲ್ಲಿ 130, ಗುಂಪು 4ರಲ್ಲಿ 89 ಪಾಯಿಂಟ್ಸ್‌ಗಳಿಂದ ಮೊದಲ ಸ್ಥಾನ ಪಡೆಯಿತು. ಬಾಲಕಿಯರ ಗುಂಪು 1ರಲ್ಲಿ 222 ಪಾಯಿಂಟ್ಸ್, ಗುಂಪು 2ರಲ್ಲಿ 242, ಗುಂಪು 3ರಲ್ಲಿ 147, ಗುಂಪು 4ರಲ್ಲಿ 99 ಪಾಯಿಂಟ್ಸ್ ಪಡೆದಿದೆ.

ADVERTISEMENT

ರಾಜ್ಯದ ಸ್ಪರ್ಧಿ ನಿಶಾಂತ್ ಕುಮಾರ್, ಜನತಿ ರಾಜೇಶ್‌, ಖುಷಿ ದಿನೇಶ್, ಉತ್ಕರ್ಷ್‌ ಎಸ್‌.ಪಾಟೀಲ್‌, ನೀನಾ ವೆಂಕಟೇಶ್‌, ಕ್ರಿಶ್ ಸುಕುಮಾರ್, ಕೆ.ರಿಧಿಮಾ ವೀರೇಂದ್ರ, ಸುವನಾ ಸಿ.ಭಾಸ್ಕರ್‌ ವಿವಿಧ ವಿಭಾಗಗಳಲ್ಲಿ ವೈಯಕ್ತಿಕ ಚಾಂಪಿಯನ್‌ಷಿಪ್ ಪ್ರಶಸ್ತಿ ಗೆದ್ದರು.

ಟೂರ್ನಿಯಲ್ಲಿ ಒಟ್ಟು 32 ನೂತನ ಕೂಟ ದಾಖಲೆಗಳು ನಿರ್ಮಾಣವಾದವು. ಇದರಲ್ಲಿ ಬಾಲಕರ ವಿಭಾಗದಲ್ಲಿ 12, ಬಾಲಕಿಯರ ವಿಭಾಗದಲ್ಲಿ 20 ದಾಖಲೆಗಳು ಸೇರಿವೆ.

ಕೂಟ ದಾಖಲೆ: 100ಮೀಟರ್ಸ್ ಫ್ರೀಸ್ಟೈಲ್‌ ಬಾಲಕಿಯರ ವಿಭಾಗದಲ್ಲಿ ರಿಧಿಮಾ (01:4.88ಸೆ) ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಶಾನ್ ಗಂಗೂಲಿ 2016ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಅವರು ಮುರಿದರು. ಇದೇ ವಿಭಾಗದಲ್ಲಿ ಆಶ್ನಾ ಅಶ್ವಿನ್‌ ಬೆಳ್ಳಿ ಗೆದ್ದರು.

ಫಲಿತಾಂಶಗಳು: (ಗೆದ್ದವರು; ಕರ್ನಾಟಕದವರು ಮಾತ್ರ): ಬಾಲಕರು: ಗುಂಪು:1. 50ಮೀ ಫ್ರೀಸ್ಟೈಲ್‌: ಎಮ್‌.ಅರ್ಜುನ್‌ (00:25.29), 400ಮೀ ಫ್ರೀಸ್ಟೈಲ್‌: ಮೋಹಿತ್ ವೆಂಕಟೇಶ್ (04:20.91), 200ಮೀ ಬ್ಯಾಕ್‌ಸ್ಟ್ರೋಕ್‌: ನಿಶಾಂತ್ ಕುಮಾರ್‌ (02:18.53), 100ಮೀ ಬ್ರೆಸ್ಟಸ್ಟ್ರೋಕ್‌: ಎಮ್‌. ಮಂಗ್ಲಸನಾ ಮೇಟಿ (01:07.91), ಗುಂಪು 2: 50ಮೀ ಫ್ರೀಸ್ಟೈಲ್‌: ವೈಭವ್ ಆರ್‌.ಸೇಟ್‌ (00:26.05), 1500ಮೀ ಫ್ರೀಸ್ಟೈಲ್‌: ಧ್ಯಾನ್ ಬಾಲಕೃಷ್ಣ (17:31.80), 200ಮೀ ಬ್ಯಾಕ್‌ಸ್ಟ್ರೋಕ್‌: ಬಿ.ಜತಿನ್‌ (02:27.00), 100ಮೀ ಬ್ರೆಸ್ಟ್‌ಸ್ಟ್ರೋಕ್‌: ಲಿತೀಶ್ ಜಿ.ಗೌಡ (01:12.04), 4X400ಮೀ ಫ್ರೀಸ್ಟೈಲ್ ರಿಲೇ: ಕರ್ನಾಟಕ (03:59:52). ಗುಂಪು 3:  50ಮೀ ಬಟರ್‌ಫ್ಲೈ: ಶ್ರೇಯಸ್ ವೆಂಕಟೇಶ್ (00:30.17), 4X50ಮೀ ಫ್ರೀಸ್ಟೈಲ್ ರಿಲೇ: ಕರ್ನಾಟಕ (01:57.34), ಬಾಲಕಿಯರು: 400ಮೀ ಫ್ರೀಸ್ಟೈಲ್‌: ಅಭಿಜ್ಞಾ ಆನಂದ್ (05:03:47), 200ಮೀ ಬ್ಯಾಕ್‌ಸ್ಟ್ರೋಕ್‌: ಜನತಿ ರಾಜೇಶ್ (02:40.35), 100ಮೀ ಬ್ರೆಸ್ಟ್‌ಸ್ಟ್ರೋಕ್ : ಸಲೋನಿ ದಲಾಲ್‌ (01:23.39), 4X100ಮೀ ಫ್ರೀಸ್ಟೈಲ್ ರಿಲೇ: ಗುಂಪು 2: ಕರ್ನಾಟಕ (04:35.29), ಬಿ.ಜಿ ಮಧುರಾ (00:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.