ರಾಜ್ಕೋಟ್: ಸೌರಾಷ್ಟ್ರದ ಯುವ ಕ್ರಿಕೆಟಿಗ ಚೇತನ್ ಸಕಾರಿಯಾ ಅವರ ತಂದೆ ಕಾಂಜಿಭಾಯಿ ಸಕಾರಿಯಾ (42) ಅವರು ಭಾನುವಾರ ಕೋವಿಡ್ನಿಂದ ಮೃತಪಟ್ಟಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಅವರಿಗೆ ಸೋಂಕು ಖಚಿತಪಟ್ಟಿದ್ದರಿಂದ ಭಾವನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
22 ವರ್ಷದ ಚೇತನ್, ಮುಂದೂಡಿಕೆಯಾಗಿರುವ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿದಿದ್ದರು.
ಸೌರಾಷ್ಟ್ರ ತಂಡದ ಪರ 15 ಪ್ರಥಮದರ್ಜೆ ಪಂದ್ಯಗಳನ್ನು ಆಡಿರುವ ಚೇತನ್, 41 ವಿಕೆಟ್ಗಳನ್ನು ಗಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.