ADVERTISEMENT

WPL 2025 | ಹರ್ಮನ್‌ಪ್ರೀತ್ ಕೌರ್ ಅರ್ಧಶತಕ: ಮುಂಬೈ ಉತ್ತಮ ಮೊತ್ತ

ಪಿಟಿಐ
Published 10 ಮಾರ್ಚ್ 2025, 16:23 IST
Last Updated 10 ಮಾರ್ಚ್ 2025, 16:23 IST
ಮುಂಬೈ ಇಂಡಿಯನ್ಸ್ ತಂಡದ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್  –ಪಿಟಿಐ ಚಿತ್ರ
ಮುಂಬೈ ಇಂಡಿಯನ್ಸ್ ತಂಡದ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್  –ಪಿಟಿಐ ಚಿತ್ರ   

ಮುಂಬೈ: ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ  ಅರ್ಧಶತಕದ ಬಲದಿಂದ ಮುಂಬೈ ಇಂಡಿಯನ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು ಉತ್ತಮ ಮೊತ್ತ ಗಳಿಸಿತು. 

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೌರ್ (54; 33ಎ, 4X9) ಅವರ ಆಟದ ನೆರವಿನಿಂದ ಮುಂಬೈ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 179 ರನ್ ಗಳಿಸಿತು. 

ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್‌ನ 3ನೇ ಓವರ್‌ನಲ್ಲಿ ಅಮೆಲಿಯಾ ಕೆರ್ ಅವರನ್ನು ಗುಜರಾತ್ ತಂಡದ ನಾಯಕಿ ಆ್ಯಷ್ಲೆ ಗಾರ್ಡನರ್ ರನ್‌ಔಟ್ ಮಾಡಿದರು. 

ADVERTISEMENT

3 ಓವರ್‌ಗಳ ನಂತರ ಹೆಲಿ ಮ್ಯಾಥ್ಯೂಸ್ (27; 22ಎ, 4X3, 6X2) ಅವರನ್ನು ಪ್ರಿಯಾ ಮಿಶ್ರಾ ಔಟ್ ಮಾಡಿದರು. ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ನ್ಯಾಟ್ ಶಿವರ್ ಬ್ರಂಟ್ (38; 31ಎ, 4X6) ಅವರೊಂದಿಗೆ ಸೇರಿಕೊಂಡ ಹರ್ಮನ್ 3ನೇ ವಿಕೆಟ್ ಜೊತೆಯಾಟದಲ್ಲಿ 59 ರನ್ ಸೇರಿಸಿದರು.  ಅಮನ್ಜೋತ್ ಕೌರ್ ಅವರು 15 ಎಸೆತಗಳಲ್ಲಿ 27 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 6ಕ್ಕೆ179(ಹೆಲಿ ಮ್ಯಾಥ್ಯೂಸ್ 27, ನ್ಯಾಟ್ ಶಿವರ್ ಬ್ರಂಟ್ 38, ಹರ್ಮನ್‌ಪ್ರೀತ್ ಕೌರ್ 54, ಅಮನ್ಜೋತ್ ಕೌರ್ 27, ತನುಜಾ ಕನ್ವರ್ 41ಕ್ಕೆ1, ಆ್ಯಷ್ಲೆ ಗಾರ್ಡನರ್ 27ಕ್ಕೆ1) ವಿರುದ್ಧ ಗುಜರಾತ್ ಜೈಂಟ್ಸ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.