ADVERTISEMENT

ಭಾರತ ‘ಎ’–ನ್ಯೂಜಿಲೆಂಡ್‌ ‘ಎ’ ಪಂದ್ಯ ಡ್ರಾ

ಪಿಟಿಐ
Published 3 ಡಿಸೆಂಬರ್ 2018, 15:56 IST
Last Updated 3 ಡಿಸೆಂಬರ್ 2018, 15:56 IST

ವಾಂಗರೀ, ನ್ಯೂಜಿಲೆಂಡ್‌: ಭಾರತ ‘ಎ’ ಮತ್ತು ನ್ಯೂಜಿಲೆಂಡ್‌ ‘ಎ’ ನಡುವಣ ಮೂರನೇ ‘ಟೆಸ್ಟ್‌’ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ.

ಸೋಮವಾರದ ಬೆಳಿಗ್ಗೆಯಿಂದಲೇ ಧಾರಾಕಾರ ಮಳೆ ಸುರಿಯಿತು. ಹೀಗಾಗಿ ದಿನದಾಟವನ್ನು ರದ್ದು ಮಾಡಲಾಯಿತು.

ಸರಣಿಯ ಮೂರೂ ಪಂದ್ಯಗಳು ಡ್ರಾ ಆಗಿದ್ದರಿಂದ ಉಭಯ ತಂಡಗಳು ಪ್ರಶಸ್ತಿ ಹಂಚಿಕೊಂಡವು.

ADVERTISEMENT

ಕರುಣ್‌ ನಾಯರ್‌ ಸಾರಥ್ಯದ ಭಾರತ ’ಎ’ ತಂಡ ಮೊದಲ ಇನಿಂಗ್ಸ್‌ನಲ್ಲಿ 83 ಓವರ್‌ಗಳಲ್ಲಿ 323ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್‌ ‘ಎ’ ಪ್ರಥಮ ಇನಿಂಗ್ಸ್‌ನಲ್ಲಿ 131.4 ಓವರ್‌ಗಳಲ್ಲಿ 398ರನ್‌ ದಾಖಲಿಸಿತ್ತು.

75ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ್ದ ಕರುಣ್ ಪಡೆ ಭಾನುವಾರದ ಆಟದ ಅಂತ್ಯಕ್ಕೆ 14 ಓವರ್‌ಗಳಲ್ಲಿ 1 ವಿಕೆಟ್‌ಗೆ 38ರನ್‌ ಬಾರಿಸಿತ್ತು.

ಉಭಯ ತಂಡಗಳು ಈಗ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಮೊದಲ ಪಂದ್ಯ ಡಿಸೆಂಬರ್‌ 7ರಂದು ಮೌಂಟ್‌ ಮೌಂಗಾನುಯಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.