ADVERTISEMENT

IPL-2020 | DC vs KXIP: ಹ್ಯಾಟ್ರಿಕ್ ಜಯದೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಪಂಜಾಬ್

ದುಬೈ: ಲೀಗ್‌ ಹಂತದ ಮೊದಲ 7 ಪಂದ್ಯಗಳಲ್ಲಿ 6 ಸೋಲುಗಳನ್ನು ಕಂಡು ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ, ಎರಡನೇ ಹಂತದಲ್ಲಿ ಪುಟಿದೆದ್ದಿದೆ. ಹ್ಯಾಟ್ರಿಕ್‌ ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಈ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಮೂರು ತಂಡಗಳ ವಿರುದ್ಧವೇ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ ಎಂಬುದು ವಿಶೇಷ. ಪಂಜಾಬ್ ತನ್ನ ಮುಂದಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಅಕ್ಟೋಬರ್‌ 24 ರಂದು ಕಣಕ್ಕಿಳಿಯಲಿದೆ. ಡೆಲ್ಲಿ ತಂಡ ಅದೇ ದಿನ ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧ ಆಡಲಿದೆ.

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 17:57 IST
Last Updated 20 ಅಕ್ಟೋಬರ್ 2020, 17:57 IST

ಕಿಂಗ್ಸ್‌ಗೆ ಐದು ವಿಕೆಟ್ ಜಯ

ಕಿಂಗ್ಸ್‌ ತಂಡ ಗೆಲ್ಲಲು ಕೊನೆಯ ಎರಡು ಓವರ್‌ಗಳಲ್ಲಿ 8 ರನ್‌ ಬೇಕಿತ್ತು. ಡೇನಿಯಲ್ ಸ್ಯಾಮ್ಸ್‌ ಎಸೆದ 19ನೇ ಓವರ್‌ನಲ್ಲಿ 1 ಸಿಕ್ಸರ್‌ ಸಹಿತ 10 ರನ್‌ ಗಳಿಸಿದ ಜಿಮ್ಮಿ ನೀಶಮ್‌ ಮತ್ತು ದೀಪಕ್‌ ಹೂಡಾ ತಮ್ಮ ತಂಡಕ್ಕೆ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು.

ಇದರೊಂದಿಗೆ ಆಡಿರುವ 10 ಪಂದ್ಯಗಳಲ್ಲಿ ನಾಲ್ಕನೇ ಗೆಲುವು ಸಾಧಿಸಿದ ಕಿಂಗ್ಸ್‌, ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿತು. ಈ ಪಂದ್ಯದಲ್ಲಿ ಸೋತರೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಉಳಿಯಿತು.

18ನೇ ಓವರ್ ಮುಕ್ತಾಯ

ಇನ್ನೂ 12 ಎಸೆತಗಳು ಬಾಕಿ ಇದ್ದು, ಕಿಂಗ್ಸ್‌ ಗೆಲ್ಲಲು ಕೇವಲ 8 ರನ್‌ ಗಳಿಸಬೇಕಿದೆ.
ದೀಪಕ್ ಹೂಡ (13) ಮತ್ತು ಜಿಮ್ಮಿ ನೀಶಮ್‌ (2) ಕ್ರೀಸ್‌ನಲ್ಲಿದ್ದಾರೆ.

ADVERTISEMENT

ಬೌಲರ್‌: ಅಕ್ಷರ್ ಪಟೇಲ್‌ (1 0 0 1 4 0)

17ನೇ ಓವರ್ ಮುಕ್ತಾಯ; 150 ರನ್ ಗಳಿಸಿದ ಕಿಂಗ್ಸ್

ಕಿಂಗ್ಸ್‌ ಪಡೆ 17 ಓವರ್‌ಗಳ ಅಂತ್ಯಕ್ಕೆ 151 ರನ್ ಗಳಿಸಿದೆ.

ಬೌಲರ್‌: ರವಿಚಂದ್ರನ್ ಅಶ್ವಿನ್‌ (0 0 1 0 1 L1)

16ನೇ ಓವರ್ ಮುಕ್ತಾಯ; ಮ್ಯಾಕ್ಸ್‌ವೆಲ್‌ ಔಟ್

16 ಓವರ್‌ಗಳ ಅಂತ್ಯಕ್ಕೆ ಕಿಂಗ್ಸ್ ತಂಡ 5 ವಿಕೆಟ್ ಕಳೆದುಕೊಂಡು 148 ರನ್‌ ಗಳಿಸಿದೆ. 32 ರನ್‌ ಗಳಿಸಿದ್ದ ಗ್ಲೇನ್‌ ಮ್ಯಾಕ್ಸ್‌ವೆಲ್‌ ಈ ಓವರ್‌ನಲ್ಲಿ ಔಟಾಗಿದ್ದಾರೆ.

ಆಲ್ರೌಂಡರ್ ಜಿಮ್ಮಿ ನೀಶಮ್‌ ಮತ್ತು ದೀಪಕ್‌ ಹೂಡಾ ಕ್ರೀಸ್‌ನಲ್ಲಿದ್ದು, 24 ಎಸೆತಗಳಲ್ಲಿ 18 ರನ್ ಬೇಕಾಗಿದೆ.

ಬೌಲರ್: ಕಗಿಸೊ ರಬಾಡ (1 0 1 4 W 1)

15ನೇ ಓವರ್ ಮುಕ್ತಾಯ

15 ಓವರ್‌ಗಳ ಅಂತ್ಯಕ್ಕೆ ಕಿಂಗ್ಸ್‌ 4 ವಿಕೆಟ್‌ ಕಳೆದುಕೊಂಡು 141 ರನ್‌ ಗಳಿಸಿದೆ.
ಬೌಲರ್‌: ಅಕ್ಷರ್‌ ಪಟೇಲ್ (0 1 1 0 1 1)

14ನೇ ಓವರ್ ಮುಕ್ತಾಯ

ಕಿಂಗ್ಸ್‌ 4 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿದೆ.

ಬೌಲರ್‌: ಡೇನಿಯಲ್‌ ಸ್ಯಾಮ್ಸ್‌ (1 0 1 0 1 4)

13ನೇ ಓವರ್ ಮುಕ್ತಾಯ

ಕೇವಲ 28 ಎಸೆತಗಳಲ್ಲಿ 53 ರನ್‌ ಗಳಿಸಿದ್ದ ನಿಕೋಲಸ್‌ ಪೂರನ್‌ ಅವರು ಕಗಿಸೊ ರಬಾಡ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

ಸದ್ಯ 13 ಓವರ್‌ಗಳ ಆಟ ಮುಗಿದಿದ್ದು, ಕಿಂಗ್ಸ್ 4 ವಿಕೆಟ್‌ ಕಳೆದುಕೊಂಡು 130 ರನ್‌ ಗಳಿಸಿದೆ. ಬಾಕಿ ಇರುವ 42 ಎಸೆತಗಳಲ್ಲಿ 35 ರನ್‌ ಬೇಕಾಗಿದೆ.
ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ದೀಪಕ್‌ ಹೂಡಾ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಕಗಿಸೊ ರಬಾಡ (1 4 W 0 1 4) 

12ನೇ ಓವರ್ ಮುಕ್ತಾಯ

12 ಓವರ್‌ಗಳ ಅಂತ್ಯಕ್ಕೆ ಕಿಂಗ್ಸ್‌ 3 ವಿಕೆಟ್‌ಗೆ 120 ರನ್ ಗಳಿಸಿದೆ.
ಬೌಲರ್‌: ಆರ್‌.ಅಶ್ವಿನ್‌ (1 0 2 2 1 Wd 1)

11ನೇ ಓವರ್ ಮುಕ್ತಾಯ

56 ರನ್‌ ಆಗುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡಿದ್ದ ಕಿಂಗ್ಸ್‌ಗೆ ಪೂರನ್‌ ಮತ್ತು ಮ್ಯಾಕ್ಸ್‌ವೆಲ್‌ ಅರ್ಧಶತಕದ ಜೊತೆಯಾಟವಾಡಿದ್ದಾರೆ.

ಈ ಜೋಡಿ ಕೇವಲ 31 ಎಸೆತಗಳಲ್ಲಿ 56 ರನ್‌ ಗಳಿಸಿದೆ.

ಸದ್ಯ 11 ಓವರ್‌ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 112 ರನ್‌ ಗಳಿಸಿದೆ.
ಬೌಲರ್‌: ಅಕ್ಷರ್‌ ಪಟೇಲ್‌ (1 6 1 1 1 1)

10ನೇ ಓವರ್ ಮುಕ್ತಾಯ: ಶತಕ ಪೂರೈಸಿದ ಕಿಂಗ್ಸ್‌

10 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕಿಂಗ್ಸ್‌ ಇಲವೆನ್ ತಂಡ 3 ವಿಕೆಟ್‌ ಕಳೆದುಕೊಂಡು 101 ರನ್‌ ಗಳಿಸಿದೆ. 10 ಓವರ್‌ಗಳಲ್ಲಿ ಗೆಲ್ಲಲು 64 ರನ್‌ ಬೇಕಾಗಿದೆ.

ಪೂರನ್‌ ಮತ್ತು ಮ್ಯಾಕ್ಸ್‌ವೆಲ್ ಕ್ರೀಸ್‌ನಲ್ಲಿದ್ದಾರೆ.

ಈ ಹಂತದಲ್ಲಿ ಡೆಲ್ಲಿ ತಂಡ 2 ವಿಕೆಟ್‌ ಕಳೆದುಕೊಂಡು 83 ರನ್‌ ಗಳಿಸಿತ್ತು.

ಬೌಲರ್‌: ಮಾರ್ಕಸ್‌ ಸ್ಟೋಯಿನಸ್‌ (1 4 6 0 1 Wd2 0)

9ನೇ ಓವರ್ ಮುಕ್ತಾಯ

14 ಎಸೆತಗಳಲ್ಲಿ 25 ರನ್‌ ಗಳಿಸಿರುವ ನಿಕೋಲಸ್ ಪೂರನ್‌ ಮತ್ತು 9 ರನ್‌ ಗಳಿಸಿಕೊಂಡಿರುವ ಗ್ಲೇನ್ ಮ್ಯಾಕ್ಸ್‌ವೆಲ್‌ ಕ್ರೀಸ್‌ನಲ್ಲಿದ್ದು, ಕಿಂಗ್ಸ್‌ 9 ಓವರ್‌ಗಳಲ್ಲಿ 87 ರನ್‌ ಗಳಿಸಿದೆ.
ಬೌಲರ್‌: ತುಷಾರ್‌ ದೇಶಪಾಂಡೆ (1 0 6 4 4 0)

8ನೇ ಓವರ್ ಮುಕ್ತಾಯ

8 ಓವರ್‌ಗಳ ಅಂತ್ಯಕ್ಕೆ ಕಿಂಗ್ಸ್‌, 72 ರನ್ ಗಳಿಸಿ 3 ವಿಕೆಟ್‌ ಕಳೆದುಕೊಂಡಿದೆ.

ನಿಕೋಲಸ್‌ ಪೂರನ್ (11)‌ ಮತ್ತು ಗ್ಲೇನ್ ಮ್ಯಾಕ್ಸ್‌ವೆಲ್ (8) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಆರ್‌. ಅಶ್ವಿನ್ (4 1 3 0 1 1)

7ನೇ ಓವರ್‌ ಮುಕ್ತಾಯ

ಕಿಂಗ್ಸ್‌ 62 ರನ್‌ ಗಳಿಸಿ 3 ವಿಕೆಟ್‌ ಕಳೆದುಕೊಂಡಿದೆ.

ಬೌಲರ್‌: ಕಗಿಸೊ ರಬಾಡ (Wd 2 0 1 0 1 0)

6ನೇ ಓವರ್ ಮುಕ್ತಾಯ: ಕಿಂಗ್ಸ್‌ 3 ವಿಕೆಟ್‌ ನಷ್ಟಕ್ಕೆ 57 ರನ್‌

6 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕಿಂಗ್ಸ್‌ ತಂಡ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 57 ರನ್‌ ಗಳಿಸಿದೆ.

ನಾಯಕ ರಾಹುಲ್ (15) ಅವರು ಅಕ್ಷರ್ ಪಟೇಲ್‌ ಬೌಲಿಂಗ್‌ನಲ್ಲಿ ಔಟಾದರೆ, ಕ್ರಿಸ್‌ ಗೇಲ್‌ (29) ಅನುಭವಿ ಸ್ಪಿನ್ನರ್‌ ಆರ್‌.ಅಶ್ವಿನ್‌ಗೆ ವಿಕೆಟ್‌ ಒಪ್ಪಿಸಿದರು. ಮಯಂಕ್‌ ಅಗರವಾಲ್‌ (5) ಪವರ್‌ ಪ್ಲೇನ ಕೊನೆಯ ಓವರ್‌ನಲ್ಲಿ ರನೌಟ್‌ ಆದರು.

ಈ ಹಂತದಲ್ಲಿ ಡೆಲ್ಲಿ ತಂಡ 1 ವಿಕೆಟ್‌ ಕಳೆದುಕೊಂಡು 53 ರನ್‌ ಗಳಿಸಿತ್ತು.

ಬೌಲರ್: ಆರ್‌.ಅಶ್ವಿನ್‌ (2 W 4 0 W 1)

5ನೇ ಓವರ್ ಮುಕ್ತಾಯ: ಒಂದೇ ಓವರ್‌ನಲ್ಲಿ 26 ರನ್‌

ಕ್ರಿಸ್‌ ಗೇಲ್‌ ಅವರು ತುಷಾರ್‌ ದೇಶಪಾಂಡೆ ಎಸೆದ 5ನೇ ಓವರನ್‌ನಲ್ಲಿ ಮೂರು ಬೌಂಡರಿ ಮತ್ತು 2 ಸಿಕ್ಸರ್‌ ಸಿಡಿಸಿದರು.

ಇದರೊಂದಿಗೆ ತಂಡದ ಮೊತ್ತ 50ಕ್ಕೆ ಏರಿದೆ.

ಈ ಓವರ್‌ಗೂ ಮೊದಲು ತಂಡದ ಮೊತ್ತ 1 ವಿಕೆಟ್‌ಗೆ 24 ರನ್‌ ಆಗಿತ್ತು,
(4 4 6 4 6 Wd 1)

ಇನಿಂಗ್ಸ್ ಆರಂಭಿಸಿದ ಕಿಂಗ್ಸ್‌: ರಾಹುಲ್‌ ವಿಕೆಟ್ ಪತನ

165 ರನ್‌ಗಳ ಗುರಿ ಬೆನ್ನತ್ತಿರುವ ಕಿಂಗ್ಸ್‌ ಇಲವೆನ್‌ ತಂಡ 4 ಓವರ್‌ಗಳ ಮುಕ್ತಾಯಕ್ಕೆ 1 ವಿಕೆಟ್‌ ಕಳೆದುಕೊಂಡು 24 ರನ್‌ ಗಳಿಸಿದೆ.

ನಾಯಕ ಕೆಎಲ್‌ ರಾಹುಲ್‌ ಕೇವಲ 15 ರನ್‌ ಗಳಿಸಿ ಔಟಾಗಿದ್ದಾರೆ.

ಕ್ರಿಸ್‌ ಗೇಲ್‌ ಮತ್ತು ಮಯಂಕ್‌ ಅಗರವಾಲ್‌ ಕ್ರೀಸ್‌ನಲ್ಲಿದ್ದಾರೆ.

165 ರನ್ ಗುರಿ

ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಕೇವಲ 7 ರನ್‌ ಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 164 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.

ಶಿಖರ್‌ ಧವನ್‌ 106 ರನ್‌ ಗಳಿಸಿ ಆಜೇಯರಾಗಿ ಉಳಿದರು. ಅವರ ಆಟದ ಹೊರತಾಗಿಯೂ ಕ್ಯಾಪಿಟಲ್ಸ್‌ ಮೊತ್ತ 170ರ ಗಡಿ ದಾಟದಂತೆ ನೋಡಿಕೊಂಡದ್ದು, ಕಿಂಗ್ಸ್‌ ಪಾಳಯಕ್ಕೆ ಸಮಾಧಾನ ತಂದಿದೆ.

ಬೌಲರ್‌: ಮೊಹಮ್ಮದ್ ಶಮಿ (2 1 1 1 2 W)
 

ಸತತ ಎರಡನೇ ಶತಕ ಸಿಡಿಸಿದ ಶಿಖರ್‌ ಧವನ್‌

ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಶಿಖರ್‌ ಧವನ್‌ ಐಪಿಎಲ್‌ನಲ್ಲಿ ಸತತ 2 ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೆ ಭಾಜನರಾದರು.

ಧವನ್‌ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಅಜೇಯ 101 ರನ್‌ ಗಳಿಸಿದ್ದರು.

ಸದ್ಯ 19 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಡೆಲ್ಲಿ ತಂಡ 4 ವಿಕೆಟ್‌ ಕಳೆದುಕೊಂಡು 157 ರನ್‌ ಗಳಿಸಿಕೊಂಡಿದೆ.
ಬೌಲರ್‌: ಅರ್ಶದೀಪ್‌ ಸಿಂಗ್ (0 1 2 2 1 6)

18ನೇ ಓವರ್ ಮುಕ್ತಾಯ

18 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ 145 ರನ್‌ ಗಳಿಸಿದೆ. ಶಿಖರ್‌ ಧವನ್‌ 97 ರನ್‌ ಗಳಿಸಿ ಆಡುತ್ತಿದ್ದು, ಶಿಮ್ರೋನ್‌ ಹೆಟ್ಮೆಯರ್‌ (0) ಆಡುತ್ತಿದ್ದಾರೆ.

ಬೌಲರ್: ಮೊಹಮ್ಮದ್‌ ಶಮಿ (1 1 W 0 4 0)

17ನೇ ಓವರ್ ಮುಕ್ತಾಯ

17 ಓವರ್‌ನ ಅಂತ್ಯಕ್ಕೆ ಡೆಲ್ಲಿ 3 ವಿಕೆಟ್ ಕಳೆದುಕೊಂಡು 126 ರನ್‌ ಗಳಿಸಿದೆ.

ಶಿಖರ್‌ ಧವನ್‌ (82) ಮತ್ತು ಮಾರ್ಕಸ್‌ ಸ್ಟೋಯಿನಸ್‌ (6) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ರವಿ ಬಿಷ್ಣೋಯಿ (4 1 1 1 1 1)

16ನೇ ಓವರ್ ಮುಕ್ತಾಯ

ಡೆಲ್ಲಿ ತಂಡ 3 ವಿಕೆಟ್‌ಗೆ 117 ರನ್‌ ಗಳಿಸಿದೆ.
ಬೌಲರ್‌: ಮುರುಗನ್‌ ಅಶ್ವಿನ್ (1 1 4 1 0 2)
 

14ನೇ ಓವರ್ ಮುಕ್ತಾಯ: ಪಂತ್ ವಿಕೆಟ್ ಪತನ

14 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ 3 ವಿಕೆಟ್‌ ಕಳೆದುಕೊಂಡು 108 ರನ್ ಗಳಿಸಿದೆ.

14 ರನ್‌ ಗಳಿಸಿದ್ದ ರಿಷಭ್‌ ಪಂತ್ ಈ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ, ಸದ್ಯ ಮಾರ್ಕಸ್‌ ಸ್ಟೋಯಿನಸ್‌ ಕ್ರೀಸ್‌ಗೆ ಬಂದಿದ್ದಾರೆ.

ಬೌಲರ್‌: ಗ್ಲೇನ್‌ ಮ್ಯಾಕ್ಸ್‌ವೆಲ್‌ (1 1 1 W 1 1)

ಶತಕ ಪೂರೈಸಿದ ಡೆಲ್ಲಿ; 5 ಸಾವಿರ ರನ್ ಗಳಿಸಿದ ಧವನ್

13ನೇ ಓವರ್‌ನ ಅಂತ್ಯಕ್ಕೆ ಡೆಲ್ಲಿ ತಂಡ 2 ವಿಕೆಟ್‌ ಕಳೆದುಕೊಂಡು 103 ರನ್ ಗಳಿಸಿದೆ.

66 ರನ್‌ ಗಳಿಸಿ ಆಡುತ್ತಿರುವ ಶಿಖರ್ ಧವನ್‌ ಐಪಿಎಲ್‌ನಲ್ಲಿ 5 ಸಾವಿರ ರನ್‌ ಪೂರೈಸಿಕೊಂಡಿದ್ದಾರೆ. ಧವನ್‌ಗೆ ಇದು ಐಪಿಎಲ್‌ನಲ್ಲಿ 169ನೇ ಪಂದ್ಯ.

ಇದರೊಂದಿಗೆ ಈ ಸಾಧನೆ ಮಾಡಿದ 5ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಇದಕ್ಕೂ ಮೊದಲು ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ (5,759), ಸಿಎಸ್‌ಕೆ ತಂಡದ ಸುರೇಶ್‌ ರೈನಾ (5,368), ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ (5,158) ಮತ್ತು ಎಸ್‌ಆರ್‌ಎಚ್‌ ನಾಯಕ ಡೇವಿಡ್‌ ವಾರ್ನರ್‌ (5,037) ಈ ಸಾಧನೆ ಮಾಡಿದ್ದಾರೆ.

ಬೌಲರ್‌: ರವಿ ಬಿಷ್ಣೋಯಿ (L1 1 6 1 0 0)

12ನೇ ಓವರ್ ಮುಕ್ತಾಯ

ಡೆಲ್ಲಿ 2 ವಿಕೆಟ್‌ ಕಳೆದುಕೊಂಡು 94 ರನ್‌ ಗಳಿಸಿದೆ.

ಬೌಲರ್‌: ಗ್ಲೇನ್‌ ಮ್ಯಾಕ್ಸ್‌ವೆಲ್‌ (1 1 1 1 0 0)
 

11ನೇ ಓವರ್ ಮುಕ್ತಾಯ

11 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 90 ರನ್ ಗಳಿಸಿದೆ. ಧವನ್‌ ಮತ್ತು ಪಂತ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ರವಿ ಬಿಷ್ಣೋಯಿ (4 0 0 1 1 1)

10ನೇ ಓವರ್ ಮುಕ್ತಾಯ

10 ಓವರ್‌ಗಳ ಅಂತ್ಯಕ್ಕೆ ಡೆಲ್ಲಿ ತಂಡ 2 ವಿಕೆಟ್‌ಗಳನ್ನು ಕಳೆದುಕೊಂಡು 83 ರನ್‌ ಗಳಿಸಿದೆ.

ಬೌಲರ್‌: ಗ್ಲೇನ್‌ ಮ್ಯಾಕ್ಸ್‌ವೆಲ್‌ (1 1 1 4 1 1)

ಶಿಖರ್‌ಗೆ ಮತ್ತೊಂದು ಅರ್ಧಶತಕ; ಅಯ್ಯರ್ ಔಟ್

ಕೇವಲ 28 ಎಸೆತಗಳಲ್ಲಿ 50 ರನ್‌ ಗಳಿಸಿರುವ ಶಿಖರ್‌ ಧವನ್‌ ಬ್ಯಾಟಿಂಗ್‌ ಮುಂದುವರಿಸಿದ್ದು, 14 ರನ್‌ ಗಳಿಸಿದ್ದ ನಾಯಕ ಶ್ರೇಯಸ್‌ ಅಯ್ಯರ್‌ ವಿಕೆಟ್ ಒಪ್ಪಿಸಿದ್ದಾರೆ.

9 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಡೆಲ್ಲಿ ತಂಡ 2 ವಿಕೆಟ್‌ ಕಳೆದುಕೊಂಡು 74 ರನ್‌ ಗಳಿಸಿದೆ.

ಬೌಲರ್: ಮುರುಗನ್‌ ಅಶ್ವಿನ್‌ (4 1 W 0 0 1)
 

8ನೇ ಓವರ್ ಮುಕ್ತಾಯ

8 ಓವರ್‌ ಅಂತ್ಯಕ್ಕೆ ಡೆಲ್ಲಿ ತಂಡ 44 ರನ್‌ ಗಳಿಸಿ 1 ವಿಕೆಟ್‌ ಕಳೆದುಕೊಂಡಿದೆ.

ಬೌಲರ್‌: ಜಿಮ್ಮಿ ನೀಶಮ್‌ (1 1 1 2 4 1)

7ನೇ ಓವರ್‌ ಮುಕ್ತಾಯ

ಡೆಲ್ಲಿ ತಂಡದ ಮೊತ್ತ 1 ವಿಕೆಟ್‌ಗೆ 58 ರನ್ ಆಗಿದೆ.
ಬೌಲರ್‌: ಮುರುಗನ್ ಅಶ್ವಿನ್ (1 1 0 1 1 1)

6ನೇ ಓವರ್ ಮುಕ್ತಾಯ: ಡೆಲ್ಲಿ 1 ವಿಕೆಟ್‌ ನಷ್ಟಕ್ಕೆ 53 ರನ್‌

ಪವರ್‌ ಪ್ಲೇ ಆಟ ಮುಕ್ತಾಯವಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡ 1 ವಿಕೆಟ್‌ಗೆ 53 ರನ್‌ ಗಳಿಸಿದೆ. ಶಿಖರ್‌ ಧವನ್‌ ಬಿರುಸಾಗಿ ಬ್ಯಾಟ್‌ ಬೀಸುತ್ತಿದ್ದು, 20 ಎಸೆತಗಳಲ್ಲಿ 35 ರನ್‌ ಗಳಿಸಿಕೊಂಡಿದ್ದಾರೆ.

ಬೌಲರ್‌: ಅರ್ಶದೀಪ್‌ ಸಿಂಗ್‌ (1 4 1 1 1 1)

5ನೇ ಓವರ್ ಮುಕ್ತಾಯ

29 ರನ್‌ ಬಾರಿಸಿರುವ ಶಿಖರ್‌ ಧವನ್‌ ಮತ್ತು 6 ರನ್‌ ಗಳಿಸಿರುವ ಅಯ್ಯರ್‌ ಕ್ರೀಸ್‌ನಲ್ಲಿದ್ದಾರೆ.

ತಂಡದ ಮೊತ್ತ 1 ವಿಕೆಟ್‌ಗೆ 44 ರನ್‌ ಆಗಿದೆ.
ಬೌಲರ್‌: ಮೊಹಮ್ಮದ್‌ ಶಮಿ (0 4 0 4 4 0)

4ನೇ ಓವರ್ ಮುಕ್ತಾಯ: ಪೃಥ್ವಿ ಶಾ ವಿಕೆಟ್ ಪತನ

ರನ್‌ ಗಳಿಸಲು ಪರದಾಡುತ್ತಿರುವ ಪೃಥ್ವಿ ಶಾ (7), ಜಿಮ್ಮಿ ನೀಶಮ್‌ ಎಸೆದ 4ನೇ ಓವರ್‌ನ ಎರಡನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

ಪೃಥ್ವಿ ಶಾ ಕೊನೆಯ 4 ಇನಿಂಗ್ಸ್‌ಗಳಲ್ಲಿ ಕ್ರಮವಾಗಿ ಮುಂಬೈ ಇಂಡಿಯನ್ಸ್‌ ವಿರುದ್ಧ 4, ರಾಜಸ್ಥಾನ ರಾಯಲ್ಸ್‌ ವಿರುದ್ಧ 0, ಚೆನ್ನೈ ವಿರುದ್ಧ 0 ಮತ್ತು ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧ 7 ರನ್‌ ಗಳಿಸಿದ್ದಾರೆ.

ಸದ್ಯ ಶ್ರೇಯಸ್‌ ಅಯ್ಯರ್‌ ಕ್ರೀಸ್‌ಗೆ ಬಂದಿದ್ದು, ಇನ್ನೊಂದು ತುದಿಯಲ್ಲಿ ಶಿಖರ್ ಧವನ್ (16) ಆಡುತ್ತಿದ್ದಾರೆ. ತಂಡದ ಮೊತ್ತ 32 ರನ್‌ ಆಗಿದೆ.

ಬೌಲರ್‌: ಜಿಮ್ಮಿ ನೀಶಮ್‌ (0 W 0 1 0 6)

3ನೇ ಓವರ್ ಮುಕ್ತಾಯ

ಧವನ್‌ ಮತ್ತು ಶಾ ಕ್ರೀಸ್‌ನಲ್ಲಿದ್ದು, ಡೆಲ್ಲಿ ತಂಡದ ಮೊತ್ತ 25 ರನ್‌ ಗಳಿಸಿದೆ.

ಬೌಲರ್‌: ಅರ್ಶದೀಪ್‌ ಸಿಂಗ್‌ (0 0 4 1 4 0)

2ನೇ ಓವರ್ ಮುಕ್ತಾಯ

ಎರಡನೇ ಓವರ್‌ಗಳ ಅಂತ್ಯಕ್ಕೆ ಡೆಲ್ಲಿ ತಂಡದ ಮೊತ್ತ 16 ರನ್ ಆಗಿದೆ. ಪೃಥ್ವಿ ಮತ್ತು ಧವನ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಮೊಹಮ್ಮದ್‌ ಶಮಿ (0 W 0 0 W 1 0 0)

ಇನಿಂಗ್ಸ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ ಮತ್ತು ಶಿಖರ್‌ ಧವನ್‌ ಬ್ಯಾಟಿಂಗ್‌ ಆರಂಭಿಸಿದ್ದಾರೆ.

ಮೊದಲ ಓವರ್‌ ಮುಕ್ತಾಯವಾಗಿದ್ದು, ಈ ಜೋಡಿ 13 ರನ್ ಗಳಿಸಿದೆ.
ಬೌಲರ್‌: ಗ್ಲೇನ್‌ ಮ್ಯಾಕ್ಸ್‌ವೆಲ್‌ (1 4 2 0 6 0)

ಹನ್ನೊಂದರ ಬಳಗ

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ಶಿಮ್ರೋನ್‌ ಹೆಟ್ಮೆಯರ್, ಡೆನಿಯಲ್‌ ಸ್ಯಾಮ್ಸ್‌‌ ಮತ್ತು ರಿಷಭ್‌ ಪಂತ್ ವಾಪಸ್‌ ಆಗಿದ್ದು, ಅಜಿಂಕ್ಯ ರಹಾನೆ, ಎನ್ರಿಚ್‌ ನೋರ್ಟ್ಚೆ ಮತ್ತು ಅಲೆಕ್ಸ್‌ ಕಾರಿ ಹೊರಗುಳಿದಿದ್ದಾರೆ.

ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಕ್ರಿಸ್‌ ಜೋರ್ಡನ್‌ ಬದಲು ಜಿಮ್ಮಿ ನೀಶಮ್‌ ತಂಡ ಕೂಡಿಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್‌ ಧವನ್‌, ರಿಷಭ್‌ ಪಂತ್, ಮಾರ್ಕಸ್‌ ಸ್ಟೋಯಿನಿಸ್‌, ಶಿಮ್ರೋನ್‌ ಹೆಟ್ಮೆಯರ್‌, ಅಕ್ಷರ್ ಪಟೇಲ್, ಟಿ. ದೇಶ್‌ಪಾಂಡೆ , ಕಗಿಸೊ ರಬಾಡ, ಆರ್. ಅಶ್ವಿನ್, ಡೆನಿಯಲ್‌ ಸ್ಯಾಮ್ಸ್‌

ಕಿಂಗ್ಸ್‌: ಕೆಎಲ್‌ ರಾಹುಲ್‌ (ನಾಯಕ/ವಿಕೆಟ್‌ ಕೀಪರ್‌), ಕ್ರಿಸ್‌ ಗೇಲ್‌, ಮಯಂಕ್‌ ಅಗರವಾಲ್‌, ನಿಕೋಲಸ್‌ ಪೂರನ್‌, ಗ್ಲೇನ್ ಮ್ಯಾಕ್ಸ್‌ವೆಲ್, ದೀಪಕ್‌ ಹೂಡಾ, ಮುರುಗನ್‌ ಅಶ್ವಿನ್‌, ರವಿ ಬಿಷ್ಣೋಯಿ, ಅರ್ಶದೀಪ್‌ ಸಿಂಗ್‌, ಮೊಹಮ್ಮದ್ ಶಮಿ, ಜಿಮ್ಮಿ ನೀಶಮ್‌ 
 

ಡೆಲ್ಲಿ ಬ್ಯಾಟಿಂಗ್

ಕಿಂಗ್ಸ್ ಇಲವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.’

ಗೆಲುವು ಯಾರಿಗೆ? ವೋಟ್ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.