ADVERTISEMENT

IPL-2020 | MI vs KKR: ಮುಂಬೈ ಇಂಡಿಯನ್ಸ್‌ಗೆ 8 ವಿಕೆಟ್‌ ಜಯ

ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮುಂಬೈ ಆಡಿರುವ 8 ಪಂದ್ಯಗಳಿಂದ ಆರು ಗೆಲುವು ಸಾಧಿಸಿದ್ದು, 12 ಪಾಯಿಂಟ್ಸ್‌ಗಳನ್ನು ಗಳಿಸಿಕೊಂಡಿದೆ. ಇತ್ತ ಕೋಲ್ಕತ್ತ ಟೂರ್ನಿಯಲ್ಲಿ ನಾಲ್ಕನೇ ಸೋಲು ಕಂಡು ನಾಲ್ಕನೇ ಸ್ಥಾನದಲ್ಲೇ ಉಳಿಯಿತು.

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 17:35 IST
Last Updated 16 ಅಕ್ಟೋಬರ್ 2020, 17:35 IST

ಮುಂಬೈ ಇಂಡಿಯನ್ಸ್‌ಗೆ 8 ವಿಕೆಟ್‌ ಜಯ

ಕೆಕೆಆರ್ ನೀಡಿದ ಸಾಧಾರಣ ಗುರಿಯನ್ನು ಮುಂಬೈ ಇಂಡಿಯನ್ಸ್‌ ತಂಡ ಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ ತಲುಪಿತು.

ಕೆಕೆಆರ್‌ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಕ್ವಿಂಟನ್‌ ಡಿ ಕಾಕ್ ಮತ್ತು ನಾಯಕ ರೋಹಿತ್‌ ಶರ್ಮಾ ಅವರ ಆಟದ ನೆರವಿನಿಂದ ಮುಂಬೈ ತಂಡ 16.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 149 ರನ್‌ ಗಳಿಸಿತು.

ಬಿರುಸಾಗಿ ಬ್ಯಾಟ್‌ ಬೀಸಿದ ಕ್ವಿಂಟನ್‌ ಕೇವಲ 44 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿ ಸಹಿತ 78 ರನ್ ಬಾರಿಸಿದರು.

ADVERTISEMENT

ಇದು ಮುಂಬೈಗೆ ಟೂರ್ನಿಯಲ್ಲಿ 6ನೇ ಗೆಲುವು. 8 ಪಂದ್ಯಗಳನ್ನು ಆಡಿರುವ ಈ ತಂಡ 2 ಸೋಲು ಕಂಡಿದ್ದು, ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕೆಕೆಆರ್‌ ನಾಲ್ಕನೇ ಸ್ಥಾನದಲ್ಲಿದೆ.

16ನೇ ಓವರ್ ಮುಕ್ತಾಯ

16 ಓವರ್‌ಗಳ ಅಂತ್ಯಕ್ಕೆ ಮುಂಬೈ ತಂಡದ ಮೊತ್ತ 2 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿದೆ.

ಬೌಲರ್‌: ಪ್ಯಾಟ್‌ ಕಮಿನ್ಸ್ (1 4 0 4 6 0)

15ನೇ ಓವರ್ ಮುಕ್ತಾಯ

ಮುಂಬೈ 2 ವಿಕೆಟ್‌ಗೆ 126 ರನ್ ಗಳಿಸಿದೆ.

ಕ್ವಿಂಟನ್‌ (75), ಹಾರ್ದಿಕ್‌ (1) ಕ್ರೀಸ್‌ನಲ್ಲದ್ದಾರೆ.

ಬೌಲರ್‌: ಶಿವಂ ಮಾವಿ (2 0 4 6 1 0)

14ನೇ ಓವರ್ ಮುಕ್ತಾಯ

ಮುಂಬೈ ತಂಡ 2 ವಿಕೆಟ್‌ಗೆ 113 ರನ್ ಗಳಿಸಿದ್ದು, ಕ್ವಿಂಟನ್ ಹಾಗೂ ಹಾರ್ದಿಕ್‌ ಪಾಂಡ್ಯ‌ ಕ್ರೀಸ್‌ನಲ್ಲಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಸೂರ್ಯಕುಮಾರ್ ಯಾದವ್‌ 10 ರನ್ ಗಳಿಸಿ ಔಟಾಗಿದ್ದಾರೆ.

ಉಳಿದಿರುವ 6 ಓವರ್‌ಗಳಲ್ಲಿ ಗೆಲ್ಲಲು ಕೇವಲ 36 ರನ್‌ ಗಳಿಸಬೇಕಾಗಿದೆ.

ಬೌಲರ್‌: ವರುಣ್‌ ಚಕ್ರವರ್ತಿ (0 1 W 0 1 1)

13ನೇ ಓವರ್ ಮುಕ್ತಾಯ

13 ಓವರ್‌ ಅಂತ್ಯಕ್ಕೆ ಮುಂಬೈ ತಂಡದ ಮೊತ್ತ 1 ವಿಕೆಟ್‌ಗೆ 110 ಆಗಿದೆ.

ಕ್ವಿಂಟನ್‌ (60) ಮತ್ತು ಸೂರ್ಯಕುಮಾರ್‌ (10) ಕ್ರೀಸ್‌ನಲ್ಲಿದ್ದಾರೆ.

ಬೌಲರ್: ಶಿವಂ ಮಾವಿ (1 0 1 0 1 4)

12ನೇ ಓವರ್ ಮುಕ್ತಾಯ: ಶತಕ ಪೂರೈಸಿದ ಮುಂಬೈ

12 ಓವರ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಶತಕದ ಗಡಿ ದಾಟಿದೆ.

ಬೌಲರ್‌: ವರುಣ್‌ ಚಕ್ರವರ್ತಿ (1 1 2 1 2 2)

11ನೇ ಓವರ್ ಮುಕ್ತಾಯ: ರೋಹಿತ್‌ ಔಟ್

11ನೇ ಓವರ್‌ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್‌ ತಂಡ 1 ವಿಕೆಟ್‌ ಕಳೆದುಕೊಂಡು 94 ರನ್ ಗಳಿಸಿದೆ.

35 ರನ್‌ ಗಳಿಸಿದ್ದ ರೋಹಿತ್‌ ಶರ್ಮಾ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ. ಸದ್ಯ ಸೂರ್ಯಕುಮಾರ್‌ ಯಾದವ್‌ ಕ್ರೀಸ್‌ಗೆ ಬಂದಿದ್ದಾರೆ.

ಬೌಲರ್: ಶಿವಂ ಮಾವಿ (0 4 W 0 0 0)

10ನೇ ಓವರ್ ಮುಕ್ತಾಯ

10 ಓವರ್‌ಗಳ ಆಟ ಮುಕ್ತಾಯವಾಗಿದೆ. ಲೀಲಾಜಾಲವಾಗಿ ಬ್ಯಾಟಿಂಗ್ ಮಾಡುತ್ತಿರುವ ಮುಂಬೈ ಇಂಡಿಯನ್ಸ್‌ನ ಆರಂಭಿಕರು ಮೊದಲ ವಿಕೆಟ್‌ ಜೊತೆಯಾಟದಲ್ಲಿ ಅಜೇಯ 90 ರನ್ ಕಲೆಹಾಕಿದ್ದಾರೆ.

ಬೌಲರ್‌: ವರುಣ್‌ ಚಕ್ರವರ್ತಿ (0 0 6 0 1 0)

9ನೇ ಓವರ್ ಮುಕ್ತಾಯ

9 ಓವರ್‌ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್‌ 83 ರನ್ ಗಳಿಸಿದೆ. ಕ್ವಿಂಟನ್‌ ಕೇವಲ 26 ಎಸೆತಗಳಲ್ಲಿ 54 ರನ್‌ ಗಳಿಸಿದ್ದಾರೆ. ಇದು ಈ ಐಪಿಎಲ್‌ನಲ್ಲಿ ಅವರ 3ನೇ ಅರ್ಧಶತಕ.

ಇನ್ನೊಂದು ತುದಿಯಲ್ಲಿ ರೋಹಿತ್‌ (24) ತಾಳ್ಮೆಯ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಬೌಲರ್‌: ಆ್ಯಂಡ್ರೆ ರಸೆಲ್‌ (0 0 4 6 1 1)

8ನೇ ಓವರ್ ಮುಕ್ತಾಯ

8 ಓವರ್ ಮುಕ್ತಾಯವಾಗಿದ್ದು, ಮುಂಬೈ ವಿಕೆಟ್‌ ನಷ್ಟವಿಲ್ಲದೆ 71 ರನ್ ಕಲೆಹಾಕಿದೆ.

ಬೌಲರ್‌: ವರಣ್‌ ಚಕ್ರವರ್ತಿ (0 2 1 1 0 0)

7ನೇ ಓವರ್‌ ಮುಕ್ತಾಯ

7 ಓವರ್ ಮುಕ್ತಾಯಕ್ಕೆ ಮುಂಬೈ ವಿಕೆಟ್ ನಷ್ಟವಿಲ್ಲದೆ 67 ರನ್ ಗಳಿಸಿದೆ.

ಬೌಲರ್‌: ಪ್ರಸಿದ್ಧ ಕೃಷ್ಣ (4 1 0 1 6 4 )

6ನೇ ಓವರ್ ಮುಕ್ತಾಯ

ಪವರ್‌ ಪ್ಲೇ ಆಟ ಮುಕ್ತಾಯವಾಗಿದ್ದು, ಮುಂಬೈ ಇಂಡಿಯನ್ಸ್ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿದೆ.

ರೋಹಿತ್‌ 19 ರನ್‌ ಗಳಿಸಿ ಆಡುತ್ತಿದ್ದು, ಇನ್ನೊಂದು ತುದಿಯಲ್ಲಿ ಕ್ವಿಂಟನ್‌ 27 ರನ್ ಬಾರಿಸಿ ಆಡುತ್ತಿದ್ದಾರೆ.

ಬೌಲರ್‌: ಆ್ಯಂಡ್ರೆ ರಸೆಲ್ (1 0 0 1 1 0)

5ನೇ ಓವರ್ ಮುಕ್ತಾಯ

ಕೆಕೆಆರ್‌ ನೀಡಿರುವ ಸಾಧಾರಣ ಗುರಿ ಎದುರು ಬ್ಯಾಟಿಂಗ್‌ ಆರಂಭಿಸಿರುವ ಮುಂಬೈ ಐದು ಓವರ್‌ಗಳ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 48 ರನ್ ಗಳಿಸಿದೆ.

ಆರಂಭಿಕರಾದ ನಾಯಕ ರೋಹಿತ್‌ ಶರ್ಮಾ ಮತ್ತು ಕ್ವಿಂಟನ್‌ ಡಿ ಕಾಕ್‌ ಕ್ರೀಸ್‌ನಲ್ಲಿದ್ದಾರೆ.

ಮೊದಲ ಓವರ್‌: ಕ್ರಿಸ್‌ ಗ್ರೀನ್‌ (4 0 1 0 0 2)

ಎರಡನೇ ಓವರ್‌: ಪ್ಯಾಟ್‌ ಕಮಿನ್ಸ್‌ (L4 0 4 0 L1 0)

ಮೂರನೇ ಓವರ್‌: ಪ್ರಸಿದ್ಧ ಕೃಷ್ಣ (0 4 4 1 4 1)

ನಾಲ್ಕನೇ ಓವರ್‌: ಪ್ಯಾಟ್‌ ಕಮಿನ್ಸ್‌ (4 4 1 0 0 0)

ಐದನೇ ಓವರ್‌: ಕ್ರಿಸ್‌ ಗ್ರೀನ್‌ (4 0 4 0 1 0)

ಇನಿಂಗ್ಸ್ ಮುಕ್ತಾಯ; ಮುಂಬೈಗೆ 149 ರನ್ ಗುರಿ

ಮಾರ್ಗನ್‌ ಮತ್ತು ಕಮಿನ್ಸ್‌ ಜೋಡಿ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 2 ಸಿಕ್ಸರ್ ಹಾಗೂ ಬೌಂಡರಿ ಸಹಿತ 21 ರನ್‌ ಬಾರಿಸಿತು. ಇದರೊಂದಿಗೆ ಕೆಕೆಆರ್‌ ತಂಡದ ಮೊತ್ತ 148ಕ್ಕೆ ಏರಿದೆ.

ಬೌಲರ್‌: ನಾಥನ್‌ ಕಲ್ಟರ್‌ನೈಲ್‌ (4 1 6 2 2 6)

19ನೇ ಓವರ್ ಮುಕ್ತಾಯ

19 ಓವರ್‌ಗಳ ಅಂತ್ಯಕ್ಕೆ ಕೆಕೆಆರ್‌ ತಂಡದ ಮೊತ್ತ 5 ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಿದೆ.

ಬೌಲರ್‌: ಟ್ರೆಂಟ್ ಬೌಲ್ಟ್‌ (1 6 4 1 1 1)

18ನೇ ಓವರ್ ಮುಕ್ತಾಯ

18 ಓವರ್‌ಗಳ ಅಂತ್ಯಕ್ಕೆ ಕೆಕೆಆರ್‌ 113 ರನ್ ಗಳಿಸಿದೆ. 53 ರನ್‌ಗಳ ಜೊತೆಯಾಟವಾಡಿರುವ ಮಾರ್ಗನ್‌ ಮತ್ತು ಕಮಿನ್ಸ್ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಜಸ್‌ಪ್ರೀತ್ ‌ಬೂಮ್ರಾ (2 1 1 1 0 0)

17ನೇ ಓವರ್ ಮುಕ್ತಾಯ

17 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕೆಕೆಆರ್ 5 ವಿಕೆಟ್‌ಗೆ 108 ರನ್ ಗಳಿಸಿದೆ.

ಬಿರುಸಾಗಿ ಬ್ಯಾಟ್‌ ಬೀಸುತ್ತಿರುವ ಪ್ಯಾಟ್‌ ಕಮಿನ್ಸ್‌ (35) ಮತ್ತು ಮಾರ್ಗನ್‌ (17) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಟ್ರೆಂಟ್ ಬೌಲ್ಟ್‌ (4 1 0 4 0 0)

16ನೇ ಓವರ್ ಮುಕ್ತಾಯ

ಕೆಕೆಆರ್‌ 5 ವಿಕೆಟ್‌ಗೆ 99 ರನ್ ಗಳಿಸಿದೆ.

ನಾಯಕ ಮೋರ್ಗನ್‌ ಮತ್ತು ಕಮಿನ್ಸ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಜಸ್‌ಪ್ರೀತ್‌ ಬೂಮ್ರಾ (0 1 1 2 0 0)

15ನೇ ಓವರ್ ಮುಕ್ತಾಯ

ಕೆಕೆಆರ್‌ ತಂಡದ ಮೊತ್ತ 5 ವಿಕೆಟ್‌ ನಷ್ಟಕ್ಕೆ 95 ರನ್ ಗಳಿಸಿದೆ. ನಾಯಕ ಎಯಾನ್‌ ಮಾರ್ಗನ್‌ (11) ಮತ್ತು ಪ್ಯಾಟ್‌ ಕಮಿನ್ಸ್‌ (28) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಕೃಣಾಲ್ ಪಾಂಡ್ಯ (1 0 2 2 1 0)

14ನೇ ಓವರ್ ಮುಕ್ತಾಯ

14 ಓವರ್‌ಗಳ ಆಟ ಮುಗಿದಿದ್ದು, ಕೆಕೆಆರ್‌ 89 ರನ್‌ ಗಳಿಸಿ 5 ವಿಕೆಟ್‌ ಕಳೆದುಕೊಂಡಿದೆ.

ಬೌಲರ್‌: ರಾಹುಲ್‌ಚಾಹರ್‌ (1 2 1 L1 2 0)

13ನೇ ಓವರ್ ಮುಕ್ತಾಯ

13 ಓವರ್‌ ಅಂತ್ಯಕ್ಕೆ ಕೆಕೆಆರ್ 5 ವಿಕೆಟ್‌ ನಷ್ಟಕ್ಕೆ 82 ರನ್ ಗಳಿಸಿದೆ.

ಬೌಲರ್: ನಾಥನ್‌ ಕಲ್ಟರ್‌ನೈಲ್‌ (4 1 1 0 6 4)

12ನೇ ಓವರ್ ಮುಕ್ತಾಯ

12 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕೆಕೆಆರ್‌ 5 ವಿಕೆಟ್‌ ನಷ್ಟಕ್ಕೆ 66 ರನ್ ಗಳಿಸಿದೆ.

ಬೌಲರ್‌: ರಾಹುಲ್‌ ಚಾಹರ್‌ (0 1 0 1 1 0 )

11ನೇ ಓವರ್ ಮುಕ್ತಾಯ: ರಸೆಲ್ ಔಟ್

11ನೇ ಓವರ್‌ ಬೌಲಿಂಗ್‌‌ ಮಾಡಿದ ಜಸ್‌ಪ್ರೀತ್‌ ಬೂಮ್ರಾ ಅಪಾಯಕಾರಿ ಬ್ಯಾಟ್ಸ್‌ಮನ್‌ ಆ್ಯಂಡ್ರೆ ರಸೆಲ್‌ ಅವರನ್ನು ಔಟ್ ಮಾಡಿದ್ದಾರೆ.

ಸದ್ಯ ಕೆಕೆಆರ್‌ ಮೊತ್ತ 5 ವಿಕೆಟ್‌ ನಷ್ಟಕ್ಕೆ 63 ರನ್ ಗಳಿಸಿದ್ದಾರೆ.

ಬೌಲರ್‌: ಜಸ್‌ಪ್ರೀತ್ ಬೂಮ್ರಾ (0 4 0 W 0 Wd 1)

10ನೇ ಓವರ್ ಮುಕ್ತಾಯ

10 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕೆಕೆಆರ್ ತಂಡ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು 5.7 ಸರಾಸರಿಯಲ್ಲಿ 57 ರನ್ ಗಳಿಸಿದೆ.

ಬೌಲರ್‌: ರಾಹುಲ್‌ ಚಾಹರ್‌ (2 0 0 0 4 0)

9ನೇ ಓವರ್ ಮುಕ್ತಾಯ; ಅರ್ಧಶಕತ ಪೂರೈಸಿದ ಕೆಕೆಆರ್

9 ಓವರ್‌ಗಳ ಅಂತ್ಯಕ್ಕೆ ಕೆಕೆಆರ್‌ 4 ವಿಕೆಟ್‌ ಕಳೆದುಕೊಂಡು 51 ರನ್‌ ಗಳಿಸಿದೆ. ನಾಯಕ ಎಯಾನ್‌ ಮಾರ್ಗನ್‌ ಮತ್ತು ಆ್ಯಂಡ್ರೆ ರಸೆಲ್ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಕೃಣಾಲ್‌ ಪಾಂಡ್ಯ (1 0 1 0 6 0 )

8ನೇ ಓವರ್‌ನಲ್ಲಿ 2 ವಿಕೆಟ್‌ ಪಡೆದ ರಾಹುಲ್

ಇನಿಂಗ್ಸ್‌ 8ನೇ ಓವರ್‌ ಮೂಲಕ ಬೌಲಿಂಗ್‌ ಆರಂಭಿಸಿದ ರಾಹುಲ್‌ ಚಾಹರ್‌ ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಕ್ರಮವಾಗಿ ಶುಭಮನ್‌ ಗಿಲ್‌ ಮತ್ತು ದಿನೇಶ್‌ ಕಾರ್ತಿಕ್‌ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

ಗಿಲ್,‌ ಪೊಲಾರ್ಡ್‌ಗೆ ಕ್ಯಾಚ್‌ ನೀಡಿದರೆ, ಕಾರ್ತಿಕ್‌ ಬೌಲ್ಡ್ ಆದರು. ಸದ್ಯ ಕೆಕೆಆರ್‌ 4 ವಿಕೆಟ್‌ ಕಳೆದುಕೊಂಡು 43 ರನ್‌ ಗಳಿಸಿದೆ.

ಬೌಲರ್‌: ರಾಹುಲ್ ಚಾಹರ್‌ (0 2 W W 1 0)

7ನೇ ಓವರ್‌ ಮುಕ್ತಾಯ

7 ಓವರ್‌ ಅಂತ್ಯಕ್ಕೆ ಕೆಕೆಆರ್ 2 ವಿಕೆಟ್‌ ಕಳೆದುಕೊಂಡು 40 ರನ್‌ ಗಳಿಸಿದೆ.

ಬೌಲರ್‌: ಕೃಣಾಲ್‌ ಪಾಂಡ್ಯ (1 0 0 L1 1 4)

6ನೇ ಓವರ್ ಮುಕ್ತಾಯ

ಪವರ್‌ ಪ್ಲೇ ಮುಕ್ತಾಯವಾಗಿದ್ದು, ಕೆಕೆಆರ್‌ 2 ವಿಕೆಟ್‌ ನಷ್ಟಕ್ಕೆ 33 ರನ್‌ ಗಳಿಸಿದೆ.

6ನೇ ಓವರ್‌ನ ಮೂರನೇ ಎಸೆತದಲ್ಲಿ ನಿತೀಶ್ ರಾಣಾ ವಿಕೆಟ್ ಒಪ್ಪಿಸಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಆಡಲು ದಿನೇಶ್‌ ಕಾರ್ತಿಕ್‌ ಕ್ರೀಸ್‌ಗೆ ಬಂದಿದ್ದಾರೆ.

ಬೌಲರ್‌: ನಾಥನ್‌ ಕಲ್ಟರ್‌ನೈಲ್‌ (4 1 W 0 0 0)

5ನೇ ಓವರ್ ಮುಕ್ತಾಯ

ಐದು ಓವರ್‌ ಮುಕ್ತಾಯವಾಗಿದ್ದು, ಕೆಕೆಆರ್ ಮೊತ್ತ 1 ವಿಕೆಟ್‌ಗೆ 28 ರನ್‌ ಆಗಿದೆ.

ಬೌಲರ್‌: ಕೃಣಾಲ್‌ ಪಾಂಡ್ಯ (1 0 1 0 1 0)

4ನೇ ಓವರ್ ಮುಕ್ತಾಯ

ನಾಲ್ಕು ಓವರ್‌ ಮುಗಿದಿದ್ದು, ಕೆಕೆಆರ್‌ 1 ವಿಕೆಟ್‌ಗೆ 25 ರನ್ ಗಳಿಸಿದೆ. ತ್ರಿಪಾಠಿ ಔಟಾದ ಬಳಿಕ ನಿತೀಶ್‌ ರಾಣಾ ಕ್ರೀಸ್‌ಗೆ ಬಂದಿದ್ದಾರೆ.

ಬೌಲರ್‌: ಜಸ್‌ಪ್ರೀತ್‌ ಬೂಮ್ರಾ (0 0 2 1 0 4)

3ನೇ ಓವರ್ ಮುಕ್ತಾಯ: ಮೊದಲ ವಿಕೆಟ್ ಪತನ

3ನೇ ಓವರ್‌ ಮುಗಿದಿದ್ದು ಕೆಕೆಆರ್‌ 1 ವಿಕೆಟ್ ಕಳೆದುಕೊಂಡು 18 ರನ್ ಗಳಿಸಿದೆ. 7 ರನ್‌ ಗಳಿಸಿದ್ದ ರಾಹುಲ್‌ ತ್ರಿಪಾಠಿ ಓವರ್‌ನ ಕೊನೆಯ ಎಸೆತದಲ್ಲಿ ಔಟಾಗಿದ್ದಾರೆ.

ಬೌಲರ್‌: ಟ್ರೆಂಟ್‌ ಬೌಲ್ಟ್‌ (0 0 1 1 4 W)

2ನೇ ಓವರ್ ಮುಕ್ತಾಯ

2 ಓವರ್‌ ಅಂತ್ಯಕ್ಕೆ ಕೆಕೆಆರ್‌ ವಿಕೆಟ್‌ ನಷ್ಟವಿಲ್ಲದೆ 12 ರನ್ ಗಳಿಸಿದೆ.

ಬೌಲರ್‌: ನಾಥನ್‌ ಕಲ್ಟರ್‌ನೈಲ್‌ (0 Wd Wd 4 1 Wd 0 1 0)

ಇನಿಂಗ್ಸ್ ಆರಂಭಿಸಿದ ಕೆಕೆಆರ್

ಕೆಕೆಆರ್‌ ತಂಡದ ಪರ ರಾಹುಲ್‌ ತ್ರಿಪಾಠಿ ಮತ್ತು ಶುಭಮನ್‌ ಗಿಲ್‌ ಇನಿಂಗ್ಸ್ ಆರಂಭಿಸಿದ್ದಾರೆ. ಟ್ರೆಂಟ್‌ ಬೌಲ್ಟ್‌ ಮೊದಲ ಓವರ್‌ ಬೌಲಿಂಗ್ ಆರಂಭಿಸಿದ್ದಾರೆ.

ಓವರ್‌ನ ಮುಕ್ತಾಯಕ್ಕೆ ಕೆಕೆಆರ್‌ ವಿಕೆಟ್‌ ನಷ್ಟವಿಲ್ಲದೆ 3 ರನ್ ಗಳಿಸಿದೆ.

(0 1 0 Wd 0 0 1)

ಹನ್ನೊಂದರ ಬಳಗ

ಎರಡೂ ತಂಡಗಳ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಕೆಕೆಆರ್‌ ಪರ ಟಾಮ್‌ ಬ್ಯಾಂಟನ್‌, ಕಮಲೇಶ್‌ ನಾಗರಕೋಟಿ ಅವರ ಬದಲು ಶಿವಂ ಮಾವಿ, ಕ್ರಿಸ್‌ ಗ್ರೀನ್‌ ಕಣಕ್ಕಿಳಿಯಲಿದ್ದಾರೆ. ಮುಂಬೈ ತಂಡದಲ್ಲಿ ಜೇಮ್ಸ್‌ ಪ್ಯಾಟಿನ್ಸನ್‌ ಬದಲು ನಾಥನ್ ಕಲ್ಟರ್‌ನೈಲ್‌ ಆಡಲಿದ್ದಾರೆ.

ರೈಡರ್ಸ್: ಶುಭಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ನಿತೀಶ್‌ ರಾಣಾ, ಆ್ಯಂಡ್ರೆ ರಸೇಲ್‌, ಟಾಮ್‌ ಬ್ಯಾಂಟನ್‌, ದಿನೇಶ್ ಕಾರ್ತಿಕ್ (ನಾಯಕ/ವಿಕೆಟ್‌ ಕೀಪರ್‌), ಎಯಾನ್ ಮಾರ್ಗನ್, ಪ್ಯಾಟ್ ಕಮಿನ್ಸ್, ಕಮಲೇಶ್‌ ನಾಗರಕೋಟಿ, ಶಿವಂ ಮಾವಿ, ವರುಣ್‌ ಚಕ್ರವರ್ತಿ

ಇಂಡಿಯನ್ಸ್‌: ರೋಹಿತ್‌ ಶರ್ಮಾ (ನಾಯಕ), ಕ್ವಿಂಟನ್‌ ಡಿ ಕಾಕ್‌ (ವಿಕೆಟ್‌ ಕೀಪರ್‌), ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ಹಾರ್ದಿಕ್ ಪಾಂಡ್ಯ, ಕೃಣಾಲ್‌ ಪಾಂಡ್ಯ, ಕೀರನ್‌ ಪೊಲಾರ್ಡ್‌, ನಾಥನ್‌ ಕಾಲ್ಟರ್‌‌ನೈಲ್‌, ರಾಹುಲ್‌ ಚಾಹರ್‌, ಟ್ರೆಂಟ್‌ ಬೌಲ್ಟ್‌, ಜಸ್‌ಪ್ರೀತ್‌ ಬೂಮ್ರಾ

ಕೆಕೆಆರ್ ಬ್ಯಾಟಿಂಗ್

ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡದ ನಾಯಕ ಎಯಾನ್‌ ಮಾರ್ಗನ್‌ ಬ್ಯಾಟಿಂಗ್‌ ಆಯ್ದುಕೊಂಡಿದ್ದಾರೆ.

ಗೆಲುವು ಯಾರಿಗೆ? ವೋಟ್ ಮಾಡಿ

ನಾಯಕತ್ವ ತೊರೆದ ಕಾರ್ತಿಕ್

ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ನಾಯಕತ್ವವನ್ನು ಸಹ ಆಟಗಾರ ಎಯಾನ್‌ ಮಾರ್ಗನ್‌ ಅವರಿಗೆ ಬಿಟ್ಟುಕೊಟ್ಟಿದ್ದಾರೆ.

‘ಕಟ್ಟಲು ವರುಷ ಕೆಡವಲು ನಿಮಿಷ’: ಗಂಭೀರ್ ಹೀಗೆ ಟ್ವೀಟ್ ಮಾಡಿದ್ದೇಕೆ?

ಕೋಲ್ಕತ್ತ ನೈಟ್‌ರೈಡರ್ಸ್ (ಕೆಕೆಆರ್‌) ತಂಡದ ನಾಯಕತ್ವ ಬದಲಾವಣೆ ಸುದ್ದಿ ಹೊರ ಬೀಳುತ್ತಿದ್ದಂತೆ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್‌ ಅವರು, ‘ಪರಂಪರೆಯನ್ನು ಕಟ್ಟಲು ವರಷಗಳೇ ಬೇಕು. ಅದರೆ, ಅದನ್ನು ನಾಶಮಾಡಲು ನಿಮಿಷ ಸಾಕು’ ಎಂದು ಟ್ವೀಟ್ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್‌ ಮಣಿಸುವತ್ತ ಕೋಲ್ಕತ್ತ ಚಿತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.