ADVERTISEMENT

ಮುಂಬೈ ಇಂಡಿಯನ್ಸ್ ಪಂದ್ಯಗಳಿಗೆ ಮಾಲಿಂಗ ಲಭ್ಯ

ಪಿಟಿಐ
Published 25 ಮಾರ್ಚ್ 2019, 17:48 IST
Last Updated 25 ಮಾರ್ಚ್ 2019, 17:48 IST
ಲಸಿತ್ ಮಾಲಿಂಗ
ಲಸಿತ್ ಮಾಲಿಂಗ   

ನವದೆಹಲಿ: ಶ್ರೀಲಂಕಾದ ಮಧ್ಯಮ ವೇಗಿ ಲಸಿತ್ ಮಾಲಿಂಗ ಅವರು ಮುಂಬೈ ಇಂಡಿಯನ್ಸ್‌ನ ಮುಂದಿನ ಎರಡು ಪಂದ್ಯಗಳಿಗೆ ಲಭ್ಯ ಇದ್ದಾರೆ ಎಂದು ತಂಡದ ಆಡಳಿತ ತಿಳಿಸಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ದೇಶಿ ಏಕದಿನ ಕ್ರಿಕೆಟ್ ಟೂರ್ನಿಯಿಂದ ಮಲಿಂಗ ಅವರನ್ನು ಬಿಡುಗಡೆ ಮಾಡಿರುವ ಕಾರಣ ಐಪಿಎಲ್‌ನಲ್ಲಿ ಆಡುವ ಹಾದಿ ಸುಗಮವಾಗಿದೆ. ‌

ಏಪ್ರಿಲ್‌ 4ರಿಂದ 11ರ ವರೆಗೆ ನಡೆಯಲಿರುವ ಸೂಪರ್ ಪ್ರೊವಿನ್ಶಿಯಲ್ ದೇಶಿ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುವವರನ್ನು ಮಾತ್ರ ವಿಶ್ವಕಪ್ ತಂಡದ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದು ಎಂದು ಶ್ರಿಲಂಕಾ ಕ್ರಿಕೆಟ್‌ ಮಂಡಳಿ ಈ ಹಿಂದೆ ಹೇಳಿತ್ತು. ಆದ್ದರಿಂದ ಮಲಿಂಗ ಶ್ರೀಲಂಕಾದಲ್ಲಿ ಇರುವುದು ಅನಿವಾರ್ಯ ಆಗಿತ್ತು.

ಆದರೆ ಬಿಸಿಸಿಐ ಮಾಡಿರುವ ಮನವಿಗೆ ಸ್ಪಂದಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರ್ಧಾರ ಬದಲಿಸಿದೆ. ವಿಶ್ವಕಪ್‌ನಲ್ಲಿ ಮಾಲಿಂಗ ಅವರ ಸ್ಥಾನ ಭದ್ರವಾಗಿರುವುದರಿಂದಾಗಿ ಅವರು ದೇಶಿ ಟೂರ್ನಿಯಿಲ್ಲಿ ಆಡುವುದು ನಿವಾರ್ಯವಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಶಾಂತ ಡಿ ಮೆಲ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.