ADVERTISEMENT

ಮೊದಲ ಏಳು ಪಂದ್ಯಗಳು ವಾಷ್‌ ಔಟ್!

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ‘ಸಿ’ ಗುಂಪಿನಲ್ಲಿ ತಮಿಳುನಾಡು, ತ್ರಿಪುರ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:31 IST
Last Updated 24 ಸೆಪ್ಟೆಂಬರ್ 2019, 19:31 IST
ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್   

ಬೆಂಗಳೂರು: ಸೋಮವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಬೆಂಗಳೂರು ಹೊರವಲಯದ ಆಲೂರು ಕ್ರೀಡಾಂಗಣವು ಸಂಪೂರ್ಣ ಹಸಿಯಾಗಿದ್ದರಿಂದ ಮಂಗಳವಾರ ಇಲ್ಲಿ ನಡೆಯಬೇಕಿದ್ದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಪಂದ್ಯಗಳನ್ನು ರದ್ದು ಮಾಡಲಾಯಿತು.

ಟೂರ್ನಿಯ ಬೇರೆ ಬೇರೆ ಗುಂಪುಗಳಲ್ಲಿಯೂ ಕೆಲವು ಪಂದ್ಯಗಳು ಮಳೆಯಿಂದಾಗಿ ರದ್ದಾದವು. ಮೊದಲ ದಿನವೇ ಒಟ್ಟು ಏಳು ಪಂದ್ಯಗಳು ನಡೆಯಲಿಲ್ಲ.

ಆಲೂರಿನ ಕ್ರೀಡಾಂಗಣದಲ್ಲಿರುವ ಮೂರು ಮೈದಾನಗಳಲ್ಲಿ ಪಂದ್ಯಗಳು ನಡೆಯಬೇಕಿತ್ತು. ಮೊದಲ ಅಂಗಳದಲ್ಲಿ ಕರ್ನಾಟಕ ಮತ್ತು ಹೈದರಾಬಾದ್, ಎರಡನೇ ಮೈದಾನದಲ್ಲಿ ಆಂಧ್ರ ಮತ್ತು ಛತ್ತೀಸಗಡ ಹಾಗೂ ಮೂರನೇ ಮೈದಾನದಲ್ಲಿ ಮುಂಬೈ ಮತ್ತು ಸೌರಾಷ್ಟ್ರ ತಂಡಗಳು ಮುಖಾಮುಖಿಯಾಗಬೇಕಿತ್ತು.

ADVERTISEMENT

ಆದರೆ, ಸೋಮವಾರ ರಾತ್ರಿ ಆರಂಭವಾದ ಮಳೆ ಮಂಗಳವಾರದ ಬೆಳಗಿನ ಜಾವದವರೆಗೂ ಬಿರುಸಾಗಿಯೇ ಸುರಿದ್ದಿದ್ದರಿಂದ ಮೈದಾನವು ಸಂಪೂರ್ಣ ಹಸಿಯಾಗಿತ್ತು. ಅಂಪೈರ್‌ಗಳು ಮತ್ತು ರೆಫರಿಗಳು (ಬೆಳಿಗ್ಗೆ 9.30, 10.30 ಮತ್ತು ಮಧ್ಯಾಹ್ನ 1 ಗಂಟೆ) ಮೂರು ಸಲ ಪಿಚ್ ಮತ್ತು ಹೊರಾಂಗಣವನ್ನು ಪರಿಶೀಲಿಸಿದರು. ಮಧ್ಯಾಹ್ನದವರೆಗೂ ನೀರು ಒಣಗದ ಕಾರಣ ಪಂದ್ಯಗಳನ್ನು ಅಡಿಸದಿರಲು ನಿರ್ಧರಿಸಲಾಯಿತು.

ಡೆಹ್ರಾಡೂನ್‌ನಲ್ಲಿಯೂ ಮಳೆ ಬಂದ ಕಾರಣ ಪ್ಲೇಟ್‌ ಗುಂಪಿನಲ್ಲಿ ನಾಗಾಲ್ಯಾಂಡ್ ಮತ್ತು ಮಣಿಪುರ ನಡುವಣ ಪಂದ್ಯ ರದ್ದಾಯಿತು. ವಡೋದರಾದಲ್ಲಿ ಬಿ ಗುಂಪಿನಲ್ಲಿ ದೆಹಲಿ–ವಿದರ್ಭ, ಹಿಮಾಚಲಪ್ರದೇಶ–ಮಹಾರಾಷ್ಟ್ರ ಮತ್ತು ಬರೋಡಾ–ಒಡಿಶಾ ನಡುವಣ ಪಂದ್ಯಗಳು ರದ್ದಾದವು. ಈ ತಂಡಗಳಿಗೆ ತಲಾ ಎರಡು ಅಂಕ ನೀಡಲಾಯಿತು.

ಸಂಕ್ಷಿಪ್ತ ಸ್ಕೋರು:

ಎಲೀಟ್ ಸಿ ಗುಂಪು(ಜೈಪುರ): ಜಮ್ಮು–ಕಾಶ್ಮೀರ: 43.2 ಓವರ್‌ಗಳಲ್ಲಿ 197 (ಅಹಮದ್ ಬಂಡೇ 28, ಕಮ್ರನ್ ಇಕ್ಬಾಲ್ 43, ಶುಭಂ ಖಜುರಿಯಾ 28, ಫಾಜಿಲ್ ರಶೀದ್ 37, ಜತಿನ್ ವಾಧ್ವಾನ್ 16, ಮಣಿಶಂಕರ್ ಮುರಾಸಿಂಗ್ 36ಕ್ಕೆ2, ಅಜಯ್ ಸರ್ಕಾರ್ 31ಕ್ಕೆ2, ಹರ್‌ಮೀತ್ ಸಿಂಗ್ 32ಕ್ಕೆ3, ಪ್ರತ್ಯುಷ್ ಸಿಂಗ್ 21ಕ್ಕೆ2), ತ್ರಿಪುರ: 44.1 ಓವರ್‌ಗಳಲ್ಲಿ 8 ವಿಕೆಟ್‌ಗಳಿಎ 198 (ವಿಶಾಲ್ ಸಿಂಗ್ 62, ಮಿಲಿಂದ ಕುಮಾರ್ 77, ಮಣಿಶಂಕರ್ ಮುರಾಸಿಂಗ್ 26, ಮೊಹಮ್ಮದ್ ಮುದಸ್ಸೀರ್ 39ಕ್ಕೆ2, ಪರ್ವೇಜ್ ರಸೂಲ್ 45ಕ್ಕೆ2, ಉಮರ್ ನಜೀರ್ ಮೀರ್ 45ಕ್ಕೆ3) ಫಲಿತಾಂಶ: ತ್ರಿಪುರ ತಂಡಕ್ಕೆ 2 ವಿಕೆಟ್ ಜಯ.

ರಾಜಸ್ಥಾನ್: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 261 (ಸಲ್ಮಾನ್ ಖಾನ್ 17, ಅಶೋಕ್ ಮನೇರಿಯಾ 35, ಅರ್ಜಿತ್ ಗುಪ್ತಾ 77, ತೇಜಿಂದರ್ ಸಿಂಗ್ 29, ರಾಹುಲ್ ಚಾಹರ್ 48, ಅಭಿಮನ್ಯು ಲಾಂಬಾ 12, ಕೃಷ್ಣಮೂರ್ತಿ ವಿಘ್ನೇಶ್ 34ಕ್ಕೆ3, ರವಿ ಶ್ರೀನಿವಾಸನ್ ಸಾಯಿಕಿಶೋರ್ 66ಕ್ಕೆ2) ತಮಿಳುನಾಡು:48 ಓವರ್‌ಗಳಲ್ಲಿ 4ಕ್ಕೆ262 (ಅಭಿನವ್ ಮುಕುಂದ 75, ಬಾಬಾ ಅಪರಾಜಿತ್ 52, ಹರಿ ನಿಶಾಂತ್ 20, ದಿನೇಶ್ ಕಾರ್ತಿಕ್ ಔಟಾಗದೆ 52, ಶಾರೂಖ್ ಖಾನ್ ಔಟಾಗದೆ 48 (ಅನಿಕೇತ್ ಚೌಧರಿ 53ಕ್ಕೆ1, ಕೆ. ಖಲೀಲ್ ಅಹಮದ್ 51ಕ್ಕೆ1, ಅಭಿಮನ್ಯು ಲಾಂಬಾ 41ಕ್ಕೆ1) ಫಲಿತಾಂಶ: ತಮಿಳುನಾಡು ತಂಡಕ್ಕೆ 6 ವಿಕೆಟ್‌ಗಳ ಜಯ.

ಗುಜರಾತ್: 50 ಓವರ್‌ಗಳಲ್ಲಿ 8ಕ್ಕೆ253 (ಪಾರ್ಥಿವ್ ಪಟೇಲ್ 17, ಕಥನ್ ಪಟೇಲ್ 36, ಭಾರ್ಗವ್ ಮೆರೈ 63, ಮನಪ್ರೀತ್ ಜುನೇಜಾ 47, ಅಕ್ಷರ್ ಪಟೇಲ್ 33, ಪಿಯೂಷ್ ಚಾವ್ಲಾ 26, ಅಶೋಕ್ ದಿಂಡಾ 58ಕ್ಕೆ3, ಆಕಾಶ್ ದೀಪ್ 49ಕ್ಕೆ2, ಸಯಾನ್ ಘೋಷ್ 50ಕ್ಕೆ2, ಆರ್ಣಬ್ ನಂದಿ 33ಕ್ಕೆ1), ಬಂಗಾಳ: 46.2 ಓವರ್‌ಗಳಲ್ಲಿ 215: (ಅಭಿಷೇಕ್ ರಾಮನ್ 15, ಶ್ರೀವತ್ಸ ಗೋಸ್ವಾಮಿ 79, ವೃದ್ಧಿಮಾನ್ ಸಹಾ 26, ಅನುಸ್ತೂಪ್ ಮಜುಮದಾರ್ 39, ಆರ್ಣಬ್ ನಂದಿ 21, ಆಕಾಶ್ ದೀಪ್ 11, ಅಶೋಕ್‌ ದಿಂಡಾ 10, ರೂಶ್ ಕಟಾರಿಯಾ 34ಕ್ಕೆ4, ಚಿಂತನ್ ಓಜಾ 44ಕ್ಕೆ2, ಪಿಯೂಷ್ ಚಾವ್ಲಾ 41ಕ್ಕೆ1, ಅಕ್ಷರ್ ಪಟೇಲ್ 47ಕ್ಕೆ1, ಕೇತನ್ ಪಟೇಲ್ 1ಕ್ಕೆ1) ಫಲಿತಾಂಶ; ಗುಜರಾತ್ ತಂಡಕ್ಕೆ 38 ರನ್ ಜಯ.

ಪ್ಲೇಟ್ ಗುಂಪು (ಡೆಹ್ರಾಡೂನ್):50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 318 (ಪುನೀತ್ ಬಿಷ್ಠ 74, ದ್ವಾರಕಾ ರವಿತೇಜಾ ಔಟಾಗದೆ 109, ಅಮಿಯಾಂಶು ಸೇನ್ 59, ಭೂಷಣ್ ಸುಬ್ಬಾ 38ಕ್ಕೆ2), ಸಿಕ್ಕಿಂ : 46.3 ಓವರ್‌ಗಳಲ್ಲಿ 124 (ನಿಲೇಶ್ ಲಾಮಿಚಾನೆ 10, ಯಶಪಾಲ್ ಸಿಂಗ್ 53, ಇಕ್ಬಾಲ್ ಅಬ್ದುಲ್ 13, ಆದಿತ್ಯ ಸಿಂಘಾನಿಯಾ 18ಕ್ಕೆ4, ಅಮಿಯಾಂಗ್ಷು ಸೇನ್ 31ಕ್ಕೆ2) ಫಲಿತಾಂಶ: ಮೇಘಾಲಯ ತಂಡಕ್ಕೆ 194 ರನ್‌ಗಳ ಜಯ.

ಇಂದಿನ ಪಂದ್ಯಗಳು (ಬೆಂಗಳೂರು)

ಮುಂಬೈ–ಜಾರ್ಖಂಡ್ (ಸ್ಥಳ: ಜಸ್ಟ್‌ ಕ್ರಿಕೆಟ್ ಮೈದಾನ)

ಹೈದರಾಬಾದ್–ಗೋವಾ (ಸ್ಥಳ: ಆಲೂರು, ಕೆಎಸ್‌ಸಿಎ 2)

ಕೇರಳ–ಛತ್ತೀಸಗಡ (ಸ್ಥಳ: ಆಲೂರು, ಕೆಎಸ್‌ಸಿಎ)

ಸಮಯ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.