ADVERTISEMENT

ನಮ್ಮ ತಂಡದಲ್ಲಿ 60 ವರ್ಷದವರಿಲ್ಲ: ಡ್ವೆನ್ ಬ್ರಾವೊ

ಪಿಟಿಐ
Published 28 ಮಾರ್ಚ್ 2019, 19:20 IST
Last Updated 28 ಮಾರ್ಚ್ 2019, 19:20 IST
ಸಿಎಸ್‌ಕೆ ತಂಡದ ಆಟಗಾರ ಇಮ್ರಾನ್ ತಾಹೀರ್ 40ನೇ ಜನ್ಮದಿನವನ್ನು ಆಚರಿಸ ಲಾಯಿತು. ಅವರ ಮುಖಕ್ಕೆ ಕೇಕ್ ಬಳಿದು ಸಂಭ್ರಮಿಸಿದ ರಾಯುಡು, ಡ್ವೆನ್ ಬ್ರಾವೊ, ಮುರಳಿ ವಿಜಯ್ ಮತ್ತು ಮಹೇಂದ್ರಸಿಂಗ್ ಧೋನಿ –ಟ್ವಿಟರ್ ಚಿತ್ರ
ಸಿಎಸ್‌ಕೆ ತಂಡದ ಆಟಗಾರ ಇಮ್ರಾನ್ ತಾಹೀರ್ 40ನೇ ಜನ್ಮದಿನವನ್ನು ಆಚರಿಸ ಲಾಯಿತು. ಅವರ ಮುಖಕ್ಕೆ ಕೇಕ್ ಬಳಿದು ಸಂಭ್ರಮಿಸಿದ ರಾಯುಡು, ಡ್ವೆನ್ ಬ್ರಾವೊ, ಮುರಳಿ ವಿಜಯ್ ಮತ್ತು ಮಹೇಂದ್ರಸಿಂಗ್ ಧೋನಿ –ಟ್ವಿಟರ್ ಚಿತ್ರ   

ನವದೆಹಲಿ: ನಮ್ಮ ತಂಡದಲ್ಲಿ ಯಾರೂ 60 ವರ್ಷ ವಯಸ್ಸಿನವರಿಲ್ಲ. ಹೆಚ್ಚೆಂದರೆ 32, 35 ವಯಸ್ಸಿನವರಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆಟಗಾರ ಡ್ವೆನ್ ಬ್ರಾವೊ ಹೇಳಿದ್ದಾರೆ.

ಪ್ರತಿ ವರ್ಷವೂ ಸಿಎಸ್‌ಕೆ ತಂಡದಲ್ಲಿ ಅನುಭವಿ ಮತ್ತು ಮೂವತ್ತು ವಯಸ್ಸು ದಾಟಿದವರು ಹೆಚ್ಚಿನ ಸಂಖ್ಯೆಯಲ್ಲಿರು ವುದರಿಂದ ‘ಡ್ಯಾಡಿ’ಸ್ ಆರ್ಮಿ’ ಎಂದು ಹಲವರು ವ್ಯಂಗ್ಯವಾಡುತ್ತಾರೆ. ಆ ಕುರಿತು ಬ್ರಾವೊ ಪ್ರತಿಕ್ರಿಯಿಸಿದ್ದಾರೆ. ಮಂಗಳವಾರ ನವದೆಹಲಿಯ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ಬ್ರಾವೊ ಅವರ ಉತ್ತಮ ಬೌಲಿಂಗ್ ಬಲದಿಂದ ಚೆನ್ನೈ ತಂಡವು ಆರು ವಿಕೆಟ್‌ಗಳಿಂದ ಗೆದ್ದಿತ್ತು.

‘ನಮ್ಮ ತಂಡದಲ್ಲಿ ಪೂರ್ವಯೋಜನೆಗಳು ಇರುವುದಿಲ್ಲ. ತಂಡದ ಸಭೆಗಳೂ ನಡೆಯುವುದಿಲ್ಲ. ಸಮಯಕ್ಕೆ ಅಗತ್ಯವಿರುವಂತೆ ಆಡುತ್ತೇವೆ. ತಂಡದ ನಾಯಕ ಧೋನಿಗೆ ತನ್ನದೇ ಆದ ನಾಯಕತ್ವದ ಶೈಲಿ ಇದೆ. ಪ್ರತಿಯೊಬ್ಬ ಆಟಗಾರನಿಗೂ ತನ್ನದೇ ಆದ ಶೈಲಿ ಮತ್ತು ಜವಾಬ್ದಾರಿ ಇದೆ. ಪರಿಸ್ಥಿತಿಯನ್ನು ಅವಲೋಕಿಸುತ್ತೇವೆ. ತತ್‌ಕ್ಷಣಕ್ಕೆ ಸ್ಪಂದಿಸುತ್ತೇವೆ. ನಮ್ಮ ಅನುಭವವು ಕೈಬಿಡುವುದಿಲ್ಲ’ ಎಂದು ಬ್ರಾವೊ ಹೇಳಿದರು.

ADVERTISEMENT

‘ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತಿಯಾಗಿದ್ದೇನೆ. ಇಂತಹ ಲೀಗ್‌ ಟೂರ್ನಿಗಳಲ್ಲಿ ಆಡುವಾಗ ಕಲಿ ಯಲು ಬಹಳಷ್ಟು ಅವಕಾಶಗಳಿರುತ್ತವೆ. ನಮ್ಮ ಕೌಶಲ್ಯಗಳನ್ನು ಉತ್ತಮಗೊಳಿಸಿಕೊಳ್ಳಲು ಇದೊಂದು ವೇದಿಕೆಯಾಗುತ್ತದೆ’ ಎಂದರು.

‘ಮಹೇಂದ್ರಸಿಂಗ್ ಧೋನಿ ನಮ ಗೆಲ್ಲ ಸ್ಫೂರ್ತಿಯ ಸೆಲೆ. ವಿಕೆಟ್‌ ಹಿಂದೆ ನಿಲ್ಲುವ ಅವರು ಯಾವ ಸಂದರ್ಭದಲ್ಲಿ ಯಾವ ಆಟಗಾರ ಹೇಗೆ ಆಡಬೇಕು ಎಂಬ ಸ್ಪಷ್ಟ ಕಲ್ಪನೆ ಇದೆ. ಅದೇ ರೀತಿ ಯೋಜನೆ ಹೆಣೆಯುತ್ತಾರೆ. ನಾನು ಪಂದ್ಯ ದ ಯಾವುದೇ ಸಂದರ್ಭದಲ್ಲಿಯೂ ತಂಡಕ್ಕೆ ಉತ್ತಮ ಕಾಣಿಕೆ ನೀಡಬಲ್ಲೆ ಎಂಬುದು ಅವರಿಗೆ ಗೊತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.